Home
ಸುದ್ದಿಜಾಲ

ಹೊಸ ಫೀಚರ್ಸ್‌ ಪಡೆದುಕೊಂಡ ಗೂಗಲ್‌ ಮೆಸೆಜ್‌; ಯಾವುದದು?

ಗೂಗಲ್‌ ಮೆಸೆಜ್‌ ಎಂಬುದು ಗೂಗಲ್‌ ಸಂಸ್ಥೆಯ ಆರ್‌ಸಿಎಸ್ ಹಾಗೂ ತ್ವರಿತ ಸಂದೇಶ ಕಳುಹಿಸುವ ಆಪ್‌ ಆಗಿದ್ದು, ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅದರಲ್ಲೂ ವಾಟ್ಸಾಪ್‌, ಮೆಸೆಂಜರ್‌ ಹಾಗೂ ಇನ್ನಿತರೆ ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ಗಳಿಗೆ ಪೈಪೋಟಿ ನೀಡಲು ಕಾಲಕಾಲಕ್ಕೆ ತಕ್ಕಂತೆ ವಿವಿಧ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಇದರ ನಡುವೆ ಈ ಆಪ್‌ನಲ್ಲಿ ಬಳಕೆದಾರರಿಗೆ ಅಗತ್ಯವಾದ ಫೀಚರ್ಸ್‌ವೊಂದನ್ನು ನೀಡಲಾಗಿದೆ.

ಮೆಸೆಜ್‌

ಹೌದು, ಗೂಗಲ್‌ ಮೆಸೆಜ್‌ ಆಪ್‌ ನಲ್ಲಿ 'ಸ್ಟಾರ್‌' ಫೀಚರ್ಸ್‌ ಪರಿಚಯಿಸಲಾಗಿದೆ. ಅಂದರೆ ನಿಮಗೆ ಯಾವುದು ಅತೀ ಮುಖ್ಯವಾದ ಸಂದೇಶವೆನಿಸುತ್ತದೆಯೋ ಅದಕ್ಕೆ ಸ್ಟಾರ್‌ ಗುರುತು ಹಾಕಿದರೆ ಅದನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಯಾಕೆಂದರೆ ಮೆಸೆಜಿಂಗ್‌ ಆಪ್‌ನಲ್ಲಿ ಸಾಕಷ್ಟು ಮೆಸೆಜ್‌ಗಳು ಬರುವುದರಿಂದ ನಿಖರವಾಗಿ ಬೇಕಾದ ಮೆಸೆಜ್‌ ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಇನ್ಮುಂದೆ ಈ ಫೀಚರ್ಸ್‌ನಿಂದ ಬಹಳ ಸುಲಭವಾಗಿ ಬೇಕಾದ ಮೆಸೆಜ್‌ ಅನ್ನು ಕ್ಷಣಮಾತ್ರದಲ್ಲಿ ಪತ್ತೆ ಮಾಡಬಹುದಾಗಿದೆ.

ಮೆಸೆಜ್ ‌ಆಪ್

ಗೂಗಲ್‌ ಮೆಸೆಜ್ ‌ಆಪ್ ಸ್ಟಾರ್ ಮೆಸೆಜ್‌ ಎಂಬ ಫೀಚರ್ಸ್‌ ನೀಡುತ್ತಿದ್ದು, ಈ ಫೀಚರ್ಸ್‌ ಎಲ್ಲಾ ಸಂಭಾಷಣೆಗಳಿಂದ ತಮ್ಮ ಪ್ರಮುಖ ಮೆಸೆಜ್‌ಅನ್ನು ಪ್ರತ್ಯೇಕಿಸಲು ಅನುಮತಿಸುತ್ತದೆ. ಆದ್ದರಿಂದ, ನೀವು ನಿಮ್ಮ ಪ್ರಮುಖ ಸಂಭಾಷಣೆಗಳನ್ನು ಸುಲಭವಾಗಿ ಇರಿಸಿಕೊಳ್ಳಲು ಬಯಸಿದರೆ ಗೂಗಲ್‌ ಮೆಸೆಜ್‌ ಆಪ್‌ನಲ್ಲಿರುವ ಸ್ಟಾರ್‌ ಫೀಚರ್ಸ್‌ ಬಳಕೆ ಮಾಡಿ ಎಂದು ಗೂಗಲ್‌ ತಿಳಿದಿದೆ. ಹಾಗಿದ್ರೆ, ಈ ಆಪ್‌ ನಲ್ಲಿ ಸ್ಟಾರ್‌ ಫೀಚರ್ಸ್‌ ಅನ್ನು ಹೇಗೆ ಬಳಕೆ ಮಾಡುವುದು ಎಂಬ ಬಗ್ಗೆ ಈ ವಿವರಿಸಿದ್ದೇವೆ ಓದಿರಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮೆಸೆಜ್‌ ಆಪ್‌ ಓಪನ್ ಮಾಡಿ. ಈವರೆಗೂ ನಿಮ್ಮ ಬಳಿ ಈ ಮೆಸೆಜಿಂಗ್‌ ಆಪ್‌ ಇಲ್ಲ ಎಂದರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಆಪ್ ಓಪನ್‌ ಮಾಡಿದ ನಂತರ ನೀವು ಯಾವ ಮೆಸೆಜ್‌ ಅನ್ನು ಸ್ಟಾರ್‌ ಮಾಡಬೇಕೋ ಆ ಮೆಸೆಜ್‌ ಅನ್ನು ತೆರೆಯಿರಿ.

ಹಂತ 2

ಹಂತ 2

ನೀವು ಮೆಸೆಜ್‌ಗೆ ಸ್ಟಾರ್‌ ಹಾಕಲು ಬಯಸುವ ಸಂಭಾಷಣೆಯನ್ನು ತೆರೆದ ನಂತರ ಅದರ ಮೇಲೆ ಸ್ವಲ್ಪ ಕಾಲ ಪ್ರೆಸ್‌ ಮಾಡಿ ಹಿಡಿದುಕೊಳ್ಳಿ. ಆ ವೇಳೆ ಸ್ಟಾರ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ. ಈ ರೀತಿ ಮಾಡಿದರೆ ಮೆಸೆಜ್‌ಗಳು ನಿಮಗೆ ಬೇಕೆಂದಾಗ ಲಭ್ಯವಾಗುತ್ತವೆ.

ಸ್ಟಾರ್‌ ಮೆಸೆಜ್‌ ಪತ್ತೆ ಮಾಡುವುದು ಹೇಗೆ?

ಸ್ಟಾರ್‌ ಮೆಸೆಜ್‌ ಪತ್ತೆ ಮಾಡುವುದು ಹೇಗೆ?

ಈ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರುತ್ತದೆ. ಹಲವರು ಈಗಾಗಲೇ ವಾಟ್ಸಾಪ್‌ ಬಳಕೆ ಮಾಡುತ್ತಿರಬಹುದು. ವಾಟ್ಸಾಪ್‌ನಲ್ಲೂ ಸಹ ಈ ರೀತಿಯ ಫೀಚರ್ಸ್‌ ನೀಡಲಾಗಿದ್ದು, ಈ ಶೈಲಿಯಲ್ಲೇ ಗೂಗಲ್‌ ಮೆಸೆಜ್‌ ಆಪ್‌ನ ಸ್ಟಾರ್ ಫೀಚರ್ಸ್‌ ಕೆಲಸ ಮಾಡಲಿದೆ. ಅದಾಗ್ಯೂ ಸ್ಟಾರ್‌ ಹಾಕಿದ ಮೆಸೆಜ್‌ಗಳನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಸ್ಟಾರ್‌

ಆಪ್‌ನಲ್ಲಿ ಸ್ಟಾರ್‌ ಹಾಕಿದ ಮೆಸೆಜ್‌ಗಳನ್ನು ಸುಲಭವಾಗಿ ಪತ್ತೆ ಮಾಡಲು ಆಪ್‌ ನಿಮಗೆ ಅನುವು ಮಾಡಿಕೊಡುತ್ತದೆ. ಅದರಂತೆ ಆಪ್‌ ನಲ್ಲಿ ಕಾಣಿಸಿಕೊಳ್ಳುವ ಹುಡುಕಾಟ ಸಂಭಾಷಣೆಗಳು ಮತ್ತು ಸ್ಟಾರ್ಡ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ, ನಂತರ ಅದರಲ್ಲಿ ಮೋರ್‌ ಆಪ್ಶನ್‌ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಇದಾದ ಬಳಿಕ ಅಲ್ಲಿ ಸ್ಟಾರ್‌ ಹಾಕಲಾದ ಮೆಸೆಜ್‌ಗಳ ಲಿಸ್ಟ್‌ ನಿಮಗೆ ಕಾಣಿಸಿಕೊಳ್ಳುತ್ತದೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್

ಗೂಗಲ್ ಇತ್ತೀಚೆಗಷ್ಟೇ ತನ್ನ ಗೂಗಲ್‌ ಮೆಸೆಜ್‌ ಆಪ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಕಳುಹಿಸಲಾದ ಎಲ್ಲಾ ಟೆಕ್ಟ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದರಿಂದ ಬಳಕೆದಾರರು ಹೆಚ್ಚು ಸುರಕ್ಷಿತವಾಗಿ ಈ ಪ್ಲಾಟ್‌ಫಾರ್ಮ್‌ನಲ್ಲಿ ತೊಡಗಿಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಗ್ರೂಪ್‌ ಚಾಟ್‌ನಲ್ಲೂ ಸಹ ಇದೇ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಈ ಫೀಚರ್ಸ್‌ ಬೀಟಾ ಪ್ರೋಗ್ರಾಂ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

Best Mobiles in India

English summary
Google Messages app get Star features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+