ಗೂಗಲ್ ಸೇರಿದೆ ಹೊಸ ಫೀಚರ್!..ಮೆಸೆಜ್ ಮಾಡುವಾಗ ನಿಮಗೆ ಉಪಯುಕ್ತ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗೂಗಲ್ ಮೆಸೆಜ್ಸ್ (Messages) ನಲ್ಲಿ ಕಳೆದ ತಿಂಗಳು ಪರಿಚಯಿಸಿರುವ 'ಸೆಂಡ್ ಫೋಟೋ ಫಾಸ್ಟರ್' (Send photos faster) ಅನ್ನು ಈಗ ಮತ್ತಷ್ಟು ವ್ಯಾಪಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಫೋಟೊಗಳನ್ನು ತ್ವರಿತವಾಗಿ ಕಳುಹಿಸಲು ಈ ಆಯ್ಕೆಯು ಉಪಯುಕ್ತ ಎನಿಸುತ್ತದೆ.
ಹೌದು, ಗೂಗಲ್ ಸಂಸ್ಥೆಯು ಈಗ ಗೂಗಲ್ ಮೆಸೆಜ್ಸ್‌ನಲ್ಲಿ ಹೊಸದಾಗಿ 'ಸೆಂಡ್ ಫೋಟೋ ಫಾಸ್ಟರ್' (Send photos faster) ಫೀಚರ್ ಅನ್ನು ಹೆಚ್ಚು ವಿಸ್ತರಣೆ ಮಾಡಿದೆ. ಈ ಆಯ್ಕೆಯು ಸೆಟ್ಟಿಂಗ್ ಮೆನುವಿನಲ್ಲಿ ನೂತನ ಟಾಗಲ್‌ನಂತೆ ಕಾಣಬಹುದು. ಈ ಫೀಚರ್ 'ವೇಗವಾಗಿ ಕಳುಹಿಸಲು ರೆಸಲ್ಯೂಶನ್ ಕಡಿಮೆಯಾಗಿದೆ' ಎಂಬ ವಿವರಣೆಯನ್ನು ಪಡೆದಿದೆ.

ಈ ಹೊಸ ಫೀಚರ್ RCS ಮೆಸೆಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಪ್ರಮಾಣಿತ ಎಸ್‌ಎಮ್‌ಎಸ್ ಮೆಸೆಜ್ ಅನ್ನು ಮೀರಿ ವರ್ಧಿತ ಫೀಚರ್ಸ್‌ಗಳ ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ. ಅಲ್ಲದೇ ಗೂಗಲ್ ಪಿಕ್ಸಲ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಗಳಂತಹ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯ ಇದೆ.
ಎಸ್‌ಎಮ್‌ಎಸ್ ಮೂಲಕ ಕಳುಹಿಸಲಾದ ಫೋಟೋಗಳು ಕಡಿಮೆ ರೆಸಲ್ಯೂಶನ್‌ಗೆ ವಿಶಿಷ್ಟವಾದ ಕಾರಣ. ಈ ಹೊಸ ಫೀಚರ್ ಇತರ RCS ಮೆಸೆಜ್ ಫೀಚರ್ಸ್‌ಗಳನ್ನು ಸೇವ್ ಮಾಡಿಕೊಂಡು ಫೈಲ್ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಈ ಫೀಚರ್ಸ್‌ಗಳು ಯಾರಾದರೂ ಟೈಪ್ ಮಾಡುತ್ತಿರುವಾಗ ನೋಡುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಮೊಬೈಲ್ ಡೇಟಾ ಮತ್ತು ವೈ-ಫೈ ಮೂಲಕ ಮೆಸೆಜ್‌ಗಳನ್ನು ಕಳುಹಿಸುವುದು, ಓದುವ ರಸೀದಿಗಳನ್ನು ಸಕ್ರಿಯಗೊಳಿಸುವುದು ಮತ್ತು ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಹಂಚಿಕೊಳ್ಳುವುದು.
9ಟು5ಗೂಗಲ್ ಪ್ರಕಾರ, 'ಸೆಂಡ್ ಫೋಟೋ ಫಾಸ್ಟರ್' ಅನ್ನು ಸಕ್ರಿಯಗೊಳಿಸುವುದರಿಂದ ಫೈಲ್ ಗಾತ್ರವನ್ನು 60% ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ. ಅಲ್ಲದೇ ಜೂಮ್ ಮಾಡಿದಾಗ ಗುಣಮಟ್ಟದಲ್ಲಿನ ವ್ಯತ್ಯಾಸವು ಗಮನಾರ್ಹವಾಗಿದೆ.
ಗೂಗಲ್ ಮೆಸೆಜ್‌ನಲ್ಲಿ ಮೆಸೆಜ್‌ಗಳನ್ನು ಶೆಡ್ಯೂಲ್ ಮಾಡಲು ಹೀಗೆ ಮಾಡಿ:
ಹಂತ : 1 ಗೂಗಲ್ ಮೆಸೇಜ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಪ್ರಾರಂಭಿಸಿ
ಹಂತ : 2 ಟೆಕ್ಸ್ಟ್ ಮೆಸೆಜ್ ಅನ್ನು ರಚಿಸಿ
ಹಂತ : 3 ಬಾಣದ ಆಕಾರದಲ್ಲಿರುವ ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ.
ಹಂತ : 4 "ಕಳುಹಿಸುವ ವೇಳಾಪಟ್ಟಿ" ಪಾಪ್-ಅಪ್ ವಿಂಡೋ ಕಾಣಿಸುತ್ತದೆ.
ಹಂತ : 5 ನೀವು ಸಂದೇಶ ಕಳುಹಿಸಲು ಬಯಸುವ ಸಮಯವನ್ನು ಆಯ್ಕೆ ಮಾಡಿ.
ಹಂತ : 6 ಇದರಲ್ಲಿ ನೀವು ಹಲವಾರು ಪೂರ್ವನಿರ್ಧರಿತ ಸಮಯಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಅಥವಾ "ದಿನಾಂಕ ಮತ್ತು ಸಮಯವನ್ನು ಆರಿಸಿ" ಮತ್ತು ನೀವು ಇಷ್ಟಪಡುವ ನಿಖರವಾದ ಸಮಯವನ್ನು ಆರಿಸಿಕೊಳ್ಳಿ.
ಹಂತ : 7 ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ, ಇದು ನಿಗದಿತ ಟೆಕ್ಸ್ಟ್ ಎಂದು ಸೂಚಿಸಲು ಸಣ್ಣ ಗಡಿಯಾರ ಐಕಾನ್ ಹೊಂದಿದೆ.
ಒಂದು ವೇಳೆ ನೀವು ಗೂಗಲ್ ಮೆಸೇಜ್‌ನಲ್ಲಿ ಈ ಫೀಚರ್ಸ್‌ನ ಆಯ್ಕೆಯನ್ನು ಕಾಣದಿದ್ದರೆ, ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ತೆರೆಯಬಹುದು. ಇದರಲ್ಲಿ ಗೂಗಲ್ ಮೆಸೇಜ್ ಅನ್ನು ಸರ್ಚ್ ಮಾಡಿ ಮತ್ತು ಉತ್ಪನ್ನ ಪುಟದಲ್ಲಿ ಬೀಟಾ ಪ್ರೋಗ್ರಾಂ ಅನ್ನು ಆಯ್ಕೆ ಮಾಡಬಹುದು. ಇನ್ನು ಅಪ್ಲಿಕೇಶನ್ ಬಳಸುವಾಗ, ಸಂದೇಶಗಳನ್ನು ಸ್ವಯಂಚಾಲಿತವಾಗಿ ವಿವಿಧ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಇದರಿಂದ ನೀವು ಸಂಭಾಷಣೆಗಳನ್ನು ಸುಲಭವಾಗಿ ಹುಡುಕಬಹುದು.


Click it and Unblock the Notifications








