Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 1 hr ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 3 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 5 hrs ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ 'ಗೂಗಲ್ ನೆಸ್ಟ್ ಹಬ್ ಡಿಸ್‌ಪ್ಲೇ' ಬಿಡುಗಡೆ!..ಬೆಲೆ 9,999ರೂ!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಇಂಟರ್ನೆಟ್ ಆಧಾರಿತ ಸ್ಮಾರ್ಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಇತ್ತೀಚಿಗೆ ಗೂಗಲ್ ನೆಸ್ಟ್ ಹಬ್ ಡಿವೈಸ್ ಹೆಚ್ಚು ಗಮನಸೆಳೆದಿದೆ. ಇದೀಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಗೂಗಲ್ ನೆಸ್ಟ್ ಹಬ್ ಡಿವೈಸ್ ಅನ್ನು ಬಿಡುಗಡೆ ಮಾಡುವ ಮೂಲಕ ದೇಶಿಯ ಗ್ರಾಹಕರಿಗೆ ಭರ್ಜರಿ ಖುಷಿ ಸಮಾಚಾರ ನೀಡಿದೆ.

ಹೌದು, ಗೂಗಲ್ ಸಂಸ್ಥೆಯು ದೇಶಿಯ ಗ್ರಾಹಕರಿಗೆ 'ಗೂಗಲ್ ನೆಸ್ಟ್ ಹಬ್' ಡಿವೈಸ್ ಅನ್ನು ಲಾಂಚ್ ಮಾಡಿದ್ದು, ಈ ಡಿವೈಸ್ ಗೂಗಲ್ ಅಸಿಸ್ಟಂಟ್ ಆಧಾರದಲ್ಲಿ ಕೆಲಸ ಮಾಡಲಿದೆ. ಈ ಡಿವೈಸ್ ಶಿಯೋಮಿ, ಎಲ್‌ಜಿ, ಸಿಸ್ಕಾ, ಫಿಲಿಪ್ಸ್, ಟಿಪಿ-ಲಿಂಕ್, ಸೇರಿದಂತೆ ಸುಮಾರು 3500 ವಿವಿಧ ಬ್ರ್ಯಾಂಡ್ ಉತ್ಪನ್ನಗಳಿಗೆ ಕನೆಕ್ಟ್ ಮಾಡಬಹುದಾದ ಸೌಲಭ್ಯವನ್ನು ಪಡೆದಿದೆ. ಹಾಗೂ ಸುಮಾರು 200 ಡಿವೈಸ್‌ಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.

ಗೂಗಲ್ ಅಸಿಸ್ಟಂಟ್ ಸೌಲಭ್ಯವಿರುವುದರಿಂದ ಮನೆಯ ಸ್ಮಾರ್ಟ್ ಉತ್ಪನ್ನಗಳನ್ನು ವಾಯಿಸ್ ಮೂಲಕ ನಿಯಂತ್ರಿಸುವ ಅನುಕೂಲ ಹೊಂದಿದೆ. ಯೂಟ್ಯೂಬ್ ವಿಡಿಯೊಗಳನ್ನು ವೀಕ್ಷಿಸಬಹುದಾದ ಆಯ್ಕೆ ಗ್ರಾಹಕರಿಗೆ ದೊರೆಯಲಿದೆ. ಹಾಗಾದರೇ ಗೂಗಲ್ ಸಂಸ್ಥೆಯ ಗೂಗಲ್ ನೆಸ್ಟ್ ಹಬ್ ಡಿವೈಸ್ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳಿಂದ ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿವೈಸ್ ವಿನ್ಯಾಸ
7 ಇಂಚಿನ ಟಚ್‌ಸ್ಕ್ರೀನ್ ಪ್ಯಾನಲ್ ಹೊಂದಿರುವ ಈ ಡಿವೈಸ್ ಎರಡು ಫಾರ್‌ಫೀಲ್ಡ್ ಮೈಕ್ರೋಫೋನ್‌ಗಳನ್ನು ಮತ್ತು ಫುಲ್ ರೇಂಜ್ ಸ್ಪೀಕರ್ ಪಡೆದಿದೆ. ಜೊತೆಗೆ ಆಂಬಿಯಂಟ್ EQ ಲೈಟ್ ಸೆನ್ಸಾರ್ ಆಯ್ಕೆ ಇದ್ದು, ಡಿವೈಸ್ ವೈಫೈ 802.11ac ಆಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಒಳಗೊಂಡಿದ್ದು, 118x178.5x67.3mm ಸುತ್ತಳತೆಯ ಆಕಾರದಲ್ಲಿದೆ. ತೂಕವು 480 ಗ್ರಾಂ ಆಗಿದೆ.

ಗೂಗಲ್ ನೆಸ್ಟ್ ಹಬ್ ಫೀಚರ್ಸ್‌ಗಳು
ಗೂಗಲ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿರುವ ಈ ಡಿವೈಸ್ ಗೂಗಲ್ ಸರ್ಚ್, ಯೂಟ್ಯೂಬ್ ವಿಡಿಯೊ ಮತ್ತು ಗೂಗಲ್ ಫೋಟೊ ಸೇರಿದಂತೆ ಗೂಗಲ್ ಕಂಪನಿಯ ಇತರೆ ಸೇವೆಗಳ ಆಯ್ಕೆಯನ್ನು ಹೊಂದಿದೆ. ಬಳಕೆದಾರರು ಸ್ಥಳ(ಗೂಗಲ್ ಮ್ಯಾಪ್), ಫೇವರೇಟ್ ವಿಡಿಯೊ, ಹಾಗೂ ನೆಸ್ಟ್ ಹಬ್‌ನಲ್ಲಿ ಸ್ಟೋರ್ ಆಗಿರುವ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಫೋಟೊಗಳನ್ನು ಸಹ ವೀಕ್ಷಿಸಬಹುದಾಗಿದೆ.

ವಾಯಿಸ್ ಅಸಿಸ್ಟಂಟ್
ಗೂಗಲ್‌ನ ಹೋಮ್ ಸ್ಪೀಕರ್‌ನಂತೆಯೇ ಈ ಡಿವೈಸ್ ಸಹ ಬಹು ವಾಯಿಸ್‌ಗಳನ್ನು ಮ್ಯಾಚ್ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ. ಹೇ ಗೂಗಲ್, ಗುಡ್‌ನೈಟ್ ಎಂದು ಹೇಳಿದರೇ ಅಲಾರಂ ಸೆಟ್ ಮಾಡುತ್ತದೆ, ಕನೆಕ್ಟ್ ಇರುವ ಲೈಟ್‌ಗಳು, ಸ್ಮಾರ್ಟ್‌ಟಿವಿಯನ್ನು ಆಫ್ ಮಾಡುತ್ತದೆ. ಹಾಗೆಯೇ ಹಲವು ಅಗತ್ಯ ಕೆಲಸಗಳನ್ನು ಬಳಕೆದಾರರು ವಾಯಿಸ್ ಕಂಟ್ರೋಲ್ ಮೂಲಕವೇ ನಿಯಂತ್ರಿಸಬಹುದು.

ಲಭ್ಯತೆ ಮತ್ತು ಬೆಲೆ
ಭಾರತೀಯ ಮಾರುಕಟ್ಟೆಯಲ್ಲಿ ಗೂಗಲ್ ನೆಸ್ಟ್ ಹಬ್ ಡಿವೈಸ್ ಬೆಲೆಯು 9,999ರೂ.ಗಳಾಗಿದ್ದು, ಚಾಕ್ ಮತ್ತು ಚಾರಕೋಲ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಫ್ಲಿಪ್‌ಕಾರ್ಟ್, ಟಾಟಾ ಕ್ಲಿಕ್, ಕ್ರೋಮ್ ಮತ್ತು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿರಲಿದೆ. ಫ್ಲಿಪ್‌ಕಾರ್ಟ್ ಮತ್ತು ಟಾಟಾ ಕ್ಲಿಕ್ ತಾಣಗಳಲ್ಲಿ ಆರಂಭಿಕ ಕೊಡುಗೆಯಾಗಿ ಆರಂಭಿಕ ಕೊಡುಗೆಯಾಗಿ, ಗೂಗಲ್ ಹಬ್‌ನೊಂದಿಗೆ 1,799ರೂ.ಗಳ ಮಿ ಸೆಕ್ಯುರಿಟಿ ಕ್ಯಾಮೆರಾ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470