ಗೂಗಲ್ ನೆಕ್ಸಸ್ 6 ಫೋನ್ ಬ್ಯಾಟರಿ ದೋಷದಿಂದ ಸ್ಫೋಟ
ನೆಕ್ಸಸ್ 6 ನಲ್ಲಿರುವ ಬ್ಯಾಟರಿ ಇದೀಗ ಫೋನ್‌ಗೆ ಶತ್ರುವಾಗಿ ಪರಿಣಮಿಸಿದೆ. ಇದು ತೀರಾ ದುರ್ಬಲವಾಗಿದ್ದು ತಾಂತ್ರಿಕ ದೋಷಗಳನ್ನು ಒಳಗೊಂಡಿದೆ ಎಂಬುದು ತಿಳಿದು ಬಂದಿದೆ. ಬ್ಯಾಟರಿ ಲೀಕೇಜ್ ಉಂಟಾಗಿದ್ದು ಫೋನ್‌ನ ಸ್ಫೋಟಕ್ಕೆ ಇದರ ಬ್ಯಾಟರಿ ಕಾರಣವಾಗಿದೆ.

ನೆಕ್ಸಸ್ 6 ಸ್ಮಾರ್ಟ್‌ಫೋನ್ ಬಳಕೆದಾರರೊಬ್ಬರು ಈ ವಿಷಯವನ್ನು ಗಮನಕ್ಕೆ ತಂದಿದ್ದು ಅವರು ಬಳಸುತ್ತಿರುವ ಫೋನ್ ಬರಿಯ ಲೀಕ್ ಆಗದೆ ಫೋನ್ ಸ್ಫೋಟಕ್ಕೆ ಕಾರಣವಾಗಿದೆ. ಆದರೆ ಯಾವುದೇ ರೀತಿಯ ದುರಂತ ಇಲ್ಲಿ ಸಂಭವಿಸಿಲ್ಲ ಅದಾಗ್ಯೂ ಫೋನ್ ಊದಿಕೊಂಡಿರುವುದನ್ನು ಚಿತ್ರದಲ್ಲಿ ನಿಮಗೆ ಕಾಣಬಹುದಾಗಿದೆ.
ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?
ಗೂಗಲ್‌ನ ಜನಪ್ರಿಯ ಆವೃತ್ತಿ ಎಂದೇ ಹೆಸರು ಗಳಿಸಿಕೊಂಡಿರುವ ನೆಕ್ಸಸ್ ಇದುವರೆಗೆ ಯಾವುದೇ ರೀತಿಯ ದೋಷಗಳನ್ನು ಹೊಂದಿರಲಿಲ್ಲ. ಆದರೆ ನೆಕ್ಸಸ್ 6 ನಲ್ಲಿ ಉಂಟಾಗಿರುವ ಈ ಬ್ಯಾಟರಿ ದೋಷ ಉತ್ಪನ್ನದ ನಿರ್ಮಾಣದಲ್ಲಿ ಹೊಂದಿರುವ ತೊಡಕನ್ನು ತೋರಿಸುತ್ತಿದೆ. ಬಳಕೆದಾರರು ಈ ಕುರಿತು ಟ್ವೀಟ್ ಅನ್ನು ಮಾಡಿದ್ದು ಲೇಖನದಲ್ಲಿ ಅದನ್ನು ನಿಮಗೆ ಕಾಣಬಹುದಾಗಿದೆ.


Click it and Unblock the Notifications








