Subscribe to Gizbot

ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

Posted By:

ಕಳೆದ ವರ್ಷದಿಂದೀಚೆಗೆ ಸ್ಮಾರ್ಟ್‌ಫೋನ್ ಸಾಗರದಲ್ಲಿ ಹೊಸ ಅಲೆಗಳೆದ್ದು ಹಳೆಯ ಅಲೆಗಳನ್ನು ಕೊಚ್ಚಿಕೊಂಡು ಹೋಗಿರುವಂತಹ ಮಾರ್ಪಾಡುಗಳು ಉಂಟಾಗಿವೆ. ಅತ್ಯುನ್ನತ ಸ್ಥಾನದಲ್ಲಿದ್ದ ಇತರ ಫೋನ್ ಬ್ರ್ಯಾಂಡ್‌ಗಳು ಕೂಡ ತಮ್ಮ ಸ್ಥಾನವನ್ನು ಇತರ ಫೋನ್ ಕಂಪೆನಿಗಳಿಗೆ ದಯಪಾಲಿಸಿವೆ.

ಓದಿರಿ: ಟೆಕ್ ಲೋಕದಲ್ಲೇ ದಾಖಲೆ ಬರೆಯಲಿರುವ ಅತಿದೊಡ್ಡ ಡೀಲ್ ಏನು?

ಉತ್ತಮ ಫೋನ್ ವೈಶಿಷ್ಟ್ಯಗಳು, ಬಜೆಟ್ ಸ್ಮಾರ್ಟ್‌ಫೋನ್‌ಗಳು ಹೀಗೆ ಪ್ರತಿಯೊಂದು ವಿಧದಲ್ಲಿ ಕೂಡ ಹೊಸ ಹೊಸ ಮಾರ್ಪಾಡುಗಳನ್ನು ಮೊಬೈಲ್ ಕಂಪೆನಿಗಳು ಇದೀಗ ಮಾಡಿದ್ದು ಈ ಬದಲಾವಣೆ ಫೋನ್ ಕ್ಷೇತ್ರದಲ್ಲಿ ಹೊಸ ಅಲೆಗೆ ಕಾರಣವಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಬದಲಾವಣೆಗೆ ಒಳಪಟ್ಟಿರುವ ಫೋನ್ ಕುರಿತಾದ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಓದಿರಿ: ಚಿತ್ರ ವಿಚಿತ್ರ ಅದ್ಭುತ ಫೋನ್ ಕೇಸ್‌ಗಳು

ಅದುವೇ ಶ್ಯೋಮಿ ಎಮ್ಐ 4i, ಮೈಕ್ರೋಮ್ಯಾಕ್ಸ್ ವೈಯು ಯುರೇಕಾ ಮತ್ತು ಲೆನೊವೊ ಎ7000. ಇದರಲ್ಲಿ ಯಾವುದಾದರೂ ಒಂದನ್ನು ಖರೀದಿಸಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ಇಲ್ಲಿದೆ ನಿಮ್ಮ ಬಯಕೆಗೆ ಅನುಗುಣವಾದ ಉತ್ತರಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಯು ಯುರೇಕಾ, ಲೆನೊವೊ ಎ7000 ಡಿಸ್‌ಪ್ಲೇ ಶ್ಯೋಮಿ ಎಮ್ಐ 4i

ವೈಯು ಯುರೇಕಾ, ಲೆನೊವೊ ಎ7000 ಡಿಸ್‌ಪ್ಲೇ ಶ್ಯೋಮಿ ಎಮ್ಐ 4i ಗಿಂತ ದೊಡ್ಡದು

ಮೂಲತಃ ಶ್ಯೋಮಿ ಎಮ್ಐ 4i, 5.0 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪಿಕ್ಸೆಲ್ ಡೆನ್ಸಿಟಿ 441 ppi ಆಗಿದೆ. ಇತರ ಫೋನ್ ಡಿಸ್‌ಪ್ಲೇ 5.5 ಇಂಚಾಗಿದ್ದರೂ ಪಿಕ್ಸೆಲ್ ಡೆನ್ಸಿಟಿ 267 ಪಿಪಿಐ ಆಗಿದೆ. ಇನ್ನು ಶ್ಯೋಮಿ ಎಮ್ಐ 4i ಪೂರ್ಣ ಎಚ್‌ಡಿ ರೂಪದಲ್ಲಿದ್ದು ಇತರ ಎರಡು ಡಿವೈಸ್‌ಗಳ ರೆಸಲ್ಯೂಶನ್ 720 x 1280 ಪಿಕ್ಸೆಲ್ಸ್ (HD) ಆಗಿದೆ.

ಹಗುರ ಫೋನ್

ಶ್ಯೋಮಿ ಎಮ್ಐ 4i ಹಗುರ ಫೋನ್

ಶ್ಯೋಮಿ ಎಮ್ಐ 4i ಹೆಚ್ಚು ಹಗುರ ಫೋನ್ ಆಗಿದ್ದು ಡೈಮೆನ್ಶನ್ 138.1 x 69.6 x 7.8 mm ಆಗಿದೆ. ಇದರ ತೂಕ 130 ಗ್ರಾಮ್‌ಗಳಾಗಿದೆ. ಲೆನೊವೊ ಎ7000 140 ಗ್ರಾಮ್ ತೂಕ ಉಳ್ಳದ್ದಾಗಿದ್ದು ಡೈಮೆನ್ಶನ್ 152.6 x 76.2 x 7.9 mm ಆಗಿದೆ. ವೈಯು ಯುರೇಕಾ 155 ಗ್ರಾಮ್ ಉಳ್ಳದ್ದಾಗಿದ್ದು 154 x 78 x 8.5 mm ಆಗಿದೆ.

ಬ್ಯಾಟರಿ

ಹೆಚ್ಚು ಶಕ್ತಿಯ ಬ್ಯಾಟರಿ

ಶ್ಯೋಮಿ ಫೋನ್ 3120 mAH, Li-Po, ವೈಯು ಯುರೇಕಾ 2500 mAH, Li-Po ಹಾಗೂ ಲೆನೊವೊ ಎ7000 2900 mAH, Li-Po ಬ್ಯಾಟರಿಯನ್ನು ಹೊಂದಿದೆ.

ಕ್ಯಾಮೆರಾ

ಶ್ಯೋಮಿ ಎಮ್ಐ4i ಮತ್ತು ವೈಯು ಯುರೇಕಾ ಕ್ಯಾಮೆರಾ ಲೆನೊವೊ ಎ7000 ಗಿಂತ ಉತ್ತಮವಾಗಿದೆ

ಶ್ಯೋಮಿ ಎಮ್ಐ4i ಮತ್ತು ವೈಯು ಯುರೇಕಾ 13 ಎಮ್‌ಪಿ ಕ್ಯಾಮೆರಾದೊಂದಿಗೆ ಬಂದಿದ್ದು, ಲೆನೊವೊ ಎ7000 8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದ್ದು ಇದು ಮೂರು ಫೋನ್‌ನಲ್ಲಿ ಒಂದೇ ಆಗಿದೆ.

ಆಂತರಿಕ ಸಂಗ್ರಹ

ಆಂತರಿಕ ಸಂಗ್ರಹ ಹೆಚ್ಚು

ಶ್ಯೋಮಿ ಎಮ್ಐ 4i ಮತ್ತು ವೈಯು ಯುರೇಕಾ 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡು ಬಂದಿದ್ದು ಲೆನೊವೊ ಎ7000 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡು ಬಂದಿದೆ.

ವಿಸ್ತರಣಾ ಸಾಮರ್ಥ್ಯವಿಲ್ಲ

ಶ್ಯೋಮಿ ಎಮ್ಐ 4i ನಲ್ಲಿ ವಿಸ್ತರಣಾ ಸಾಮರ್ಥ್ಯವಿಲ್ಲ

ಹೆಚ್ಚಿನ ಟೆಕ್ ಪರಿಣಿತರ ಪ್ರಕಾರ ಶ್ಯೋಮಿ ಎಮ್ಐ 4i ನ ಮುಖ್ಯ ಅಂಶ ಇದಾಗಿದೆ. ವೈಯು ಯುರೇಕಾ ಮತ್ತು ಲೆನೊವೊ ಎ7000 ವಿಸ್ತರಣಾ ಮೆಮೊರಿಯನ್ನು ಹೊಂದಿದ್ದು ಶ್ಯೋಮಿ ಎಮ್ಐ 4i ನಲ್ಲಿ ಈ ಅಂಶ ಇಲ್ಲ.

4ಜಿ

4ಜಿ ಸಂಪರ್ಕ

ಬಜೆಟ್ ಫೋನ್‌ಗಳು 4 ಜಿ ಸಂಪರ್ಕವನ್ನು ಪಡೆದುಕೊಂಡು ಮಾರುಕಟ್ಟೆಗೆ ಬರುತ್ತಿರುವುದು ನಿಜಕ್ಕೂ ಹರ್ಷದ ವಿಚಾರವಾಗಿದ್ದು ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 4ಜಿ ಡಿವೈಸ್‌ಗಳಾಗಿವೆ.

ಕಡಿಮೆ ಬೆಲೆ

ಶ್ಯೋಮಿ ಎಮ್ಐ 4i ಗಿಂತ ವೈಯು ಯುರೇಕಾ ಮತ್ತು ಲೆನೊವೊ ಎ7000 ಕಡಿಮೆ ಬೆಲೆಯದ್ದಾಗಿದೆ

ಬೆಲೆಗೆ ಅನುಸಾರವಾಗಿ ಶ್ಯೋಮಿ ಎಮ್ಐ 4i ರೂ 12,999 ಆಗಿದ್ದರೆ ವೈಯು ಯುರೇಕಾ ಮತ್ತು ಲೆನೊವೊ ಎ7000 ಒಂದೇ ಬೆಲೆಯಲ್ಲಿ ಅಂದರೆ ರೂ 8,999 ಕ್ಕೆ ಲಭ್ಯವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Since last year, a new wave has come in the smartphone ocean and blew out of the water some of the premium handset makers who held the supreme positions. They are Xiaomi Mi4i, Micromax Yu Yureka and Lenovo A7000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot