Home
ಸುದ್ದಿಜಾಲ

ಗೂಗಲ್‌ ಪೇ ಅಥವಾ ಫೋನ್‌ಪೇ ಕೈ ಕೊಟ್ರೆ ಚಿಂತಿಸಬೇಡಿ, ಈ ಆಪ್‌ ಇದೆಯಲ್ಲ ಸಾಕು ಬಿಡಿ!

ಪ್ರಸ್ತುತ ಬಹುತೇಕ ನಾವೆಲ್ಲಾ ತರಕಾರಿ ಖರೀದಿಸಲಿ, ಸಿನಿಮಾ ಟಿಕೆಟ್, ಟ್ರೈನ್‌ ಟಿಕೆಟ್ ಬುಕ್ ಮಾಡಲಿ, ಮೊಬೈಲ್‌ ರೀಚಾರ್ಜ್‌, ಕರೆಂಟ್‌ ಬಿಲ್‌ ಹೀಗೆ ದೈನಂದಿನ ಹತ್ತು ಹಲವು ಕೆಲಸಗಳಿಗೆ ಯುಪಿಐ (UPI) ಪೇಮೆಂಟ್‌ ಮಾಡುತ್ತೇವೆ. ಅದರಲ್ಲಿಯೂ ಮುಖ್ಯವಾಗಿ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಆಯ್ಕೆಗಳಲ್ಲಿ ಗೂಗಲ್‌ ಪೇ ಅಥವಾ ಫೋನ್‌ಪೇ ಆಪ್‌ಗಳ ಬಳಕೆಯೇ ಅಧಿಕ. ಒಂದು ವೇಳೆ ನಿಮ್ಮ ಗೂಗಲ್‌ ಪೇ ಅಥವಾ ಫೋನ್‌ಪೇ ಆಪ್‌ ಕೆಲಸ ಮಾಡದಿದ್ರೆ?

ಕೆಲವೊಮ್ಮೆ ನೆಟ್‌ವರ್ಕ್‌

ಹೌದು, ಕೆಲವೊಮ್ಮೆ ನೆಟ್‌ವರ್ಕ್‌ ಸಮಸ್ಯೆ ಅಥವಾ ಸರ್ವರ್‌ ಸಮಸ್ಯೆ, ಇತರೆ ಕೆಲವು ಕಾರಣಗಳಿಂದಾಗಿ ಗೂಗಲ್‌ ಪೇ ಅಥವಾ ಫೋನ್‌ಪೇ ಆಪ್‌ ಸರಿಯಾಗಿ ಕೆಲಸ ಮಾಡದೇ ಇರಬಹುದು. ಇಂತಹ ವೇಳೆ ನಿಮ್ಮ ಫೋನಿನಲ್ಲಿ ಈ ಎರಡು ಯುಪಿಐ ಆಪ್‌ಗಳನ್ನು ಹೊರತು ಪಡಿಸಿ ಸಹ ನೀವು ಸುಲಭವಾಗಿ ಯುಪಿಐ ಪೇಮೆಂಟ್‌ ಮಾಡಬಹುದಾಗಿದೆ. ಅದಕ್ಕಾಗಿ ನೀವು ಬೇರೆ ಆಪ್‌ ಇನ್‌ಸ್ಟಾಲ್‌ ಮಾಡುವ ಅಗತ್ಯ ಇಲ್ಲವೇ ಇಲ್ಲ.

ವಾಟ್ಸಾಪ್‌ ಪೇ

ಸಾಮಾನ್ಯವಾಗಿ ಬಹುತೇಕ ಎಲ್ಲರ ಫೋನ್‌ಗಳಲ್ಲಿವಾಟ್ಸಾಪ್‌ ಪೇ ವಾಟ್ಸಾಪ್‌ ಅಪ್ಲಿಕೇಶನ್ ಇದ್ದೇ ಇರುತ್ತದೆ. ಹೀಗಾಗಿ ಬಳಕೆದಾರರು (Whatsapp UPI Payment) ಮೂಲಕ ಸಲಿಸಾಗಿ ಪೇಮೆಂಟ್‌ ಮಾಡಲು ಸಾಧ್ಯೆ, ಆದರೆ ಬಳಕೆದಾರರು ವಾಟ್ಸಾಪ್‌ ಪೇ ನಲ್ಲಿ ಬ್ಯಾಂಕ್‌ ಅಕೌಂಟ್‌ ಲಿಂಕ್ ಮಾಡಿರುವುದು ಅಗತ್ಯ ಇರುತ್ತದೆ. ಲಿಂಕ್ ಮಾಡುವುದು ಸಹ ಸುಲಭವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಪೇ ಫೀಚರ್

ವಾಟ್ಸಾಪ್‌ ಪೇ ಫೀಚರ್

ವಾಟ್ಸಾಪ್‌ ಪೇ ಫೀಚರ್ ಅನ್ನು ಕೆಲವು ತಿಂಗಳ ಹಿಂದೆ ಪ್ರಾರಂಭ ಮಾಡಲಾಗಿದ್ದು, ಇದು ಬಳಕೆದಾರರು ಮೆಸೆಜ್‌ ಕಳುಹಿಸುವ ಅದೇ ಅನುಕೂಲದಲ್ಲಿ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ. ಹೀಗಾಗಿ, ಪ್ರತ್ಯೇಕ ಆಪ್‌ ಅನ್ನು ಡೌನ್‌ಲೋಡ್ ಮಾಡದೆಯೇ, ಮೊಬೈಲ್ ಸಂಖ್ಯೆಗೆ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಹಣವನ್ನು ಕಳುಹಿಸಬಹುದು.

ವಾಟ್ಸಾಪ್‌ ಪೇ ಸಕ್ರಿಯ ಮಾಡಲು ಹೀಗೆ ಮಾಡಿರಿ:

ವಾಟ್ಸಾಪ್‌ ಪೇ ಸಕ್ರಿಯ ಮಾಡಲು ಹೀಗೆ ಮಾಡಿರಿ:

ಹಂತ 1: ಮೊದಲಿಗೆ ಆಂಡ್ರಾಯ್ಡ್‌ ಅಥವಾ ಐಓಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಬಳಿಕ, ನೀವು ಹಣವನ್ನು ವರ್ಗಾಯಿಸಲು ಬಯಸುವ ವ್ಯಕ್ತಿಯ ಚಾಟ್ ಅನ್ನು ತೆರೆಯಿರಿ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ನೇರವಾಗಿ ಪಾವತಿಗಳಿಗೆ ಟ್ಯಾಪ್ ಮಾಡಬಹುದು.

ಹಂತ 3: ಈಗ 'ನಿಮ್ಮ ಪಾವತಿ ವಿಧಾನವನ್ನು ಸೇರಿಸಿ' ಅನ್ನು ಟ್ಯಾಪ್ ಮಾಡಿ ಮತ್ತು ನಂತರ 'ಬ್ಯಾಂಕ್ ಖಾತೆಯನ್ನು ಸೇರಿಸಿ' ಕ್ಲಿಕ್ ಮಾಡಿ.

ಹಂತ 4: ನಂತರ, ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ.

ನೋಂದಾಯಿತ

ಹಂತ 5: ಮುಂದೆ, ನಿಮ್ಮ ಫೋನ್ ಸಂಖ್ಯೆಯನ್ನು ನೀವು ಚೆಕ್‌ ಮಾಡಬೇಕು. ಗಮನಾರ್ಹವಾಗಿ, ನಿಮ್ಮ ಫೋನ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀವು ಹೊಂದಿರಬೇಕು. ನೀವು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೆ, ವಾಟ್ಸಾಪ್‌ ಸಂಖ್ಯೆಯಂತೆಯೇ, ವಾಟ್ಸಾಪ್‌ ಅದನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ.

ಹಂತ 6: ಈಗ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸೇರಿಸಿ.

ಹಂತ 7: ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ವಾಟ್ಸಾಪ್‌ ಅನ್ನು ಅನುಮತಿಸಿ.

ಹಂತ 8: ಮುಂದುವರಿಸಿ ಕ್ಲಿಕ್ ಮಾಡಿ. ಈಗ, ನಿಮ್ಮ ಬ್ಯಾಂಕ್ ವಾಟ್ಸಾಪ್‌ ಮೂಲಕ ಯುಪಿಐ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಂಪರ್ಕ ಹೊಂದಿದೆ.

ವಾಟ್ಸಾಪ್‌ ಪೇ ಮೂಲಕ ಹಣವನ್ನು ಕಳುಹಿಸಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ ಪೇ ಮೂಲಕ ಹಣವನ್ನು ಕಳುಹಿಸಲು ಈ ಕ್ರಮ ಅನುಸರಿಸಿ:

ಹಂತ 1: ನೀವು ಹಣವನ್ನು ಕಳುಹಿಸಲು ಬಯಸುವ ಸಂಪರ್ಕದ ಚಾಟ್ ಅನ್ನು ತೆರೆಯಿರಿ ಅಥವಾ ಮೂರು-ಡಾಟ್ ಬಟನ್‌ನಿಂದ ನೇರವಾಗಿ ಪಾವತಿಗಳನ್ನು ತೆರೆಯಿರಿ.

ಹಂತ 2: ಸಂಖ್ಯೆ ಅಥವಾ QR ಕೋಡ್ ಬಳಸಿ ಪಾವತಿಯನ್ನು ಆಯ್ಕೆಮಾಡಿ.

ಹಂತ 3: ಈಗ ನೀವು ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ.

ಹಂತ 4: ನೋಂದಾಯಿತ ಬ್ಯಾಂಕ್‌ಗಾಗಿ ನಿಮ್ಮ UPI ಪಿನ್ ಸೆಟ್ ಅನ್ನು ನಮೂದಿಸಿ ಮತ್ತು ಪಾವತಿ ಕಳುಹಿಸು ಕ್ಲಿಕ್ ಮಾಡಿ.

Best Mobiles in India

English summary
Google pay or PhonePe not working? You Can send Through Whatsapp UPI Payment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+