Home
ಸುದ್ದಿಜಾಲ

Google Pay ನಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬಹುದು: ಹೇಗೆಂದು ತಿಳಿಯಿರಿ!

ಗೂಗಲ್‌ ಪೇ (Google Pay) ಎಂಬುದು ಡಿಜಿಟಲ್ ವ್ಯಾಲೆಟ್ ಮತ್ತು ಆನ್‌ಲೈನ್ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ಗೂಗಲ್‌ ನಿರ್ವಹಣೆ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಾಮಾನ್ಯ ವಿಚಾರ. ಅದರಲ್ಲೂ ಬಳಕೆದಾರರು ತಮ್ಮ ಮೊಬೈಲ್‌ ಬಳಕೆ ಮಾಡಿಕೊಂಡು ಸುಲಭ ಪಾವತಿ ಪ್ರಕ್ರಿಯೆ ನಡೆಸಬಹುದಾಗಿದೆ. ಈ ನಡುವೆ ಕ್ರೆಡಿಟ್ ಕಾರ್ಡ್‌ ಅನ್ನೂ ಸಹ ಬಳಕೆ ಮಾಡಿಕೊಂಡು ಯುಪಿಐ ಪಾವತಿಗೆ ಅನುವು ಮಾಡಿಕೊಟ್ಟಿದೆ.

ಹೌದು,ಹಲವಾರು ಜನರು ಕ್ರೆಡಿಟ್‌ ಕಾರ್ಡ್ ಹೊಂದಿದ್ದರೂ ಸಹ ಅದನ್ನು ಪೋನ್‌ ಪೇ ಅಥವಾ ಗೂಗಲ್ ಪೇ ನಲ್ಲಿ ಬಳಕೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ.ಈ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಗೂಗಲ್‌ ಪೇ ಕ್ರೆಡಿಟ್‌ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಅನುವು ಮಾಡಿಕೊಟ್ಟಿದೆ.ಇದರಿಂದಾಗಿ ಸಾಕಷ್ಟು ಜನರಿಗೆ ಭಾರೀ ಅನುಕೂಲ ಆದಂತಾಗಿದೆ. ಹಾಗಿದ್ರೆ, ಇದರ ಬಳಕೆ ಹೇಗೆ?, ಯಾವೆಲ್ಲಾ ಕ್ರೆಡಿಟ್‌ ಕಾರ್ಡ್‌ಗಳಿಗೆ ಬೆಂಬಲ ನೀಡಲಿದೆ? ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

Google Pay ನಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬಹುದು....

ಹೆಚ್ಚಾದ ಯುಪಿಐ ವಹಿವಾಟು: ಕೆಲವು ವರ್ಷಗಳಿಂದೀಚೆಗೆ ಭಾರತದಲ್ಲಿ ಆನ್‌ಲೈಟ್‌ ವಹಿವಾಟು ಹೆಚ್ಚಾಗುತ್ತಿದೆ. ಅದರಲ್ಲೂ ಯುಪಿಐ ಮೂಲಕ ಮಾಡಿದ ವಹಿವಾಟುಗಳ ಸಂಖ್ಯೆಯಲ್ಲಿ ಭಾರತವು ಅಗ್ರ ಸ್ಥಾನದಲ್ಲಿದ್ದು, ಮಾರ್ಚ್ 2023 ರಲ್ಲಿ 8.7 ಶತಕೋಟಿ ಯುಪಿಐ ವಹಿವಾಟು ನಡೆಸಲಾಗಿದ್ದು, NPCI ಮಾಸಿಕ ವಹಿವಾಟು ಎಣಿಕೆಯಲ್ಲಿಈ ದೊಡ್ಡ ಬೆಳವಣಿಗೆಯನ್ನು ವರದಿ ಮಾಡಿದೆ. ಈ ನಡುವೆ ಈ ಬೆಳವಣಿಗೆ ಕಂಡುಬಂದಿದೆ.

ಗೂಗಲ್‌ ಪೇ ನಲ್ಲಿ ಯಾವೆಲ್ಲಾ ಕ್ರೆಡಿಟ್‌ ಕಾರ್ಡ್‌ಗಳಿಗೆ ಬೆಂಬಲ: ಭಾರತದಲ್ಲಿನ ಗೂಗಲ್‌ ಪೇ ಬಳಕೆದಾರರು ಈಗ ರುಪೇ (RuPay) ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಯುಪಿಐ ಪಾವತಿಗಳನ್ನು ಮಾಡಬಹುದಾಗಿದೆ. ಈ ಮೂಲಕ ಈ ಕಾರ್ಡ್ ಹೊಂದಿರುವ ಬಳಕೆದಾರರು ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿಗಳಿಗೆ ಹಣ ಪಾವತಿ ಮಾಡಲು ಗೂಗಲ್‌ ಪೇ ಜೊತೆಗೆ ಲಿಂಕ್ ಮಾಡಬಹುದಾಗಿದೆ.

Google Pay ನಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬಹುದು....

ಯಾವೆಲ್ಲಾ ಬ್ಯಾಂಕ್‌ ಕಾರ್ಡ್‌ಗಳಿಗೆ ಲಭ್ಯ:ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ,ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್,ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್,ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರುಪೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಈ ಸೇವೆ ಲಭ್ಯ ಇದೆ. ಇದರೊಂದಿಗೆ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಶೀಘ್ರದಲ್ಲೇ ಇದಕ್ಕೆ ಸಂಯೋಜಿಸಲ್ಪಡುತ್ತವೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಗೂಗಲ್‌ ಪೇನಲ್ಲಿ ಕ್ರೆಡಿಟ್‌ ಕಾರ್ಡ್‌ಅನ್ನು ಹೇಗೆ ಸಕ್ರಿಯಗೊಳಿಸುವುದು ಎಂದು ತಿಳಿಯೋಣ ಬನ್ನಿ.

ಹಂತ 1: ಗೂಗಲ್ ಪೇ ಬಳಕೆ ಮಾಡುವ ಗ್ರಾಹಕರು ಮೊದಲು ನಿಮ್ಮ ಆಪ್‌ ಓಪನ್‌ ಮಾಡಿ. ನಿಮ್ಮ ಆಪ್‌ ಹಳೆಯ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದನ್ನು ಅಪ್‌ಡೇಟ್‌ ಮಾಡಿ. ನಂತರ ಪ್ರೊಫೈಲ್ ವಿಭಾಗದ ಮೇಲೆ ಟ್ಯಾಪ್‌ ಮಾಡಿದರೆ ರುಪೇ ಕ್ರೆಡಿಟ್ ಕಾರ್ಡ್ ಆನ್ ಯುಪಿಐ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಈ ವೇಳೆ ಯಾವ ಬ್ಯಾಂಕ್‌ ಎಂದು ಆಯ್ಕೆ ಮಾಡಿಕೊಳ್ಳಿ.

Google Pay ನಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬಹುದು....

ಹಂತ 2 : ಇದಾದ ನಂತರದಲ್ಲಿ ಕಾರ್ಡ್ ಸಂಖ್ಯೆ ಮತ್ತು ಅವಧಿ ಮುಗಿಯುವ ಕೊನೆಯ ಆರು ಅಂಕೆಗಳನ್ನು ತಪ್ಪಿಲ್ಲದೆ ಎಂಟ್ರಿ ಮಾಡಿ. ಈ ರೀತಿ ಮಾಡಿದಾಗ ನಿಮ್ಮ ಬ್ಯಾಂಕ್‌ ನಿಂದ ಒಂದು ಓಟಿಪಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ಇದನ್ನು ಅಗತ್ಯ ಸ್ಥಳದಲ್ಲಿ ಭರ್ತಿ ಮಾಡಿ ನಂತರ ಯುಪಿಐ ಪಿನ್‌ ಅನ್ನು ಹೊಂದಿಸಿ. ನಂತರದಲ್ಲಿ ರುಪೇ ಕ್ರೆಡಿಟ್‌ ಕಾರ್ಡ್‌ನ ಹಣವನ್ನು ನೀವು ವ್ಯಾಪಾರಿಗಳಿಗೆ, ಆನ್‌ಲೈನ್‌ ವ್ಯವಹಾರಗಳಿಗೆ ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
Google Pay now enables UPI payments through credit cards. Learn how to add a credit card, how to use it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+