'ಗೂಗಲ್ ಪೇ' ಕೈ ಕೊಟ್ರೆ, ಯಾವುದಕ್ಕೂ ನಿಮ್ಮ ಫೋನಿನಲ್ಲಿ ಈ ಆಪ್ಸ್‌ ಇರಲಿ!

|

ಪ್ರಸ್ತುತ ಎಲ್ಲ ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಸಹ ಡಿಜಿಟಲ್ ಪೇಮೆಂಟ್ ಚಾಲ್ತಿಯಲ್ಲಿದೆ. ಯಾರಿಗಾದರೂ ಹಣ ವರ್ಗಾವಣೆ ಮಾಡಬೇಕಿದ್ದರು ಡಿಜಿಟಲ್‌ ಟ್ರಾನ್ಸಾಕ್ಶನ್ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಬಿಲ್ ಪೇಮೆಂಟ್, ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್‌ ಮಾಡಲು ಸಹ ಡಿಜಿಟಲ್ ಪೇಮೆಂಟ್ ಆಪ್ ಬಳಕೆ ಮಾಡಲಾಗುತ್ತಿದೆ. ಈ ಎಲ್ಲ ಸೇವೆಗಳನ್ನು ಬಹುತೇಕರು ಗೂಗಲ್ ಪೇ ಅಪ್ಲಿಕೇಶನ್ ಮೂಲಕವೇ ಮಾಡುತ್ತಾರೆ.

ಡಿಜಿಟಲ್ ಪೇಮೆಂಟ್ ಆಪ್ಸ್‌

ಹೌದು, ಡಿಜಿಟಲ್ ಪೇಮೆಂಟ್ ಆಪ್ಸ್‌ಗಳಲ್ಲಿ ಗೂಗಲ್ ಪೇ ಲೀಡಿಂಗ್‌ನಲ್ಲಿದ್ದು, ಹೆಚ್ಚು ಬಳಕೆದಾರರನ್ನು ಹೊಂದಿದೆ. ಕೆಲವು ಟ್ರಾನ್ಸಾಕ್ಶನ್‌ಗೆ ರಿವಾರ್ಡ್‌ ಸ್ಕ್ರಾಚ್‌ ಕಾರ್ಡ್‌ ನೀಡುವ ಮೂಲಕ ಗ್ರಾಹಕರನ್ನು ಸೆಳೆದಿದೆ. ಯುಪಿಐ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕವು ಅಥವಾ ಮೊಬೈಲ್ ನಂಬರ್ ನಮೂದಿಸುವ ಮೂಲಕ ಸುಲಭವಾಗಿ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಹೀಗೆ ಒಂದೇ ಸೂರಿನಡಿ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಗೂಗಲ್ ಪೇ ಅತ್ಯುತ್ತಮ ಆಪ್ ಹೌದು. ಆದರೆ ಗೂಗಲ್ ಪೇ ತರಹವೇ ಇತರೆ ಕೆಲವು ಪೇಮೆಂಟ್‌ ಆಪ್‌ಗಳು ಉತ್ತಮ ಸೇವೆ ನೀಡುತ್ತಿವೆ. ಹಾಗಾದರೆ ಗೂಗಲ್‌ ಪೇ ಗೆ ಪರ್ಯಾಯ ಪೇಮೆಂಟ್ ಆಪ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫೋನ್ ಪೇ (PhonePe app)

ಫೋನ್ ಪೇ (PhonePe app)

ಗೂಗಲ್ ಪೇ ಆಪ್‌ನಂತೆಯೇ ಸೇವೆ ಒದಗಿಸುತ್ತಿರುವ 'ಪೋನ್‌ ಪೇ' ಆಪ್‌ ಈಗಾಗಲೇ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈ ಆಪ್‌ನಲ್ಲಿಯೂ ಪೇಮೆಂಟ್ ಮಾಡಲು ಹಲವು ಆಯ್ಕೆಗಳಿವೆ. ಕ್ಯೂಆರ್‌-QR ಕೋಡ್‌ ಸ್ಕ್ಯಾನ್‌ ಸೌಲಭ್ಯವು ಸಹ ಇದೆ. ಫೋನ್‌ ಪೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಾಗುತ್ತವೆ.

ಗ್ರಾಹಕರು ಬ್ಯಾಂಕ್‌ಗೆ ನೊಂದಾಯಿತ ಮೊಬೈಲ್‌ನಂಬರ್‌ನಿಂದ ಫೋನ್‌ ಪೇ ಖಾತೆ ಹೊಂದುವುದು. ಸೆಕ್ಯುರಿಟಿಗಾಗಿ ನಾಲ್ಕು ನಂಬರ್ನ ಪಿನ್‌ಸೆಟ್‌ ಮಾಡಿಕೊಳ್ಳುವ(UPI PIN) ಆಯ್ಕೆ ಇದೆ. ಪಾಸ್‌ಬುಕ್, ಬ್ಯಾಂಕ್ ಬ್ಯಾಲೆನ್ಸ್‌, ಟ್ರಾನ್ಸಾಕ್ಶನ್ ಹಿಸ್ಟರಿ ಸೌಲಭ್ಯಗಳು ಇವೆ.

ಪೇಟಿಎಮ್‌(Paytm )

ಪೇಟಿಎಮ್‌(Paytm )

ಪೇಟಿಎಮ್ ಆಪ್ ಸಹ ಈಗಾಗಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಗುರುತಿಸಿಕೊಂಡಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ ಫೋನ್‌ಗಳಲ್ಲಿ ಲಭ್ಯವಿದೆ. ಕ್ಯಾಶ್‌ಬ್ಯಾಕ್, ಡಿಸ್ಕೌಂಟ್, ಆಫರ್, ಗಿಫ್ಟ್‌ ವೊಚರ್‌ನಂತಹ ಸೌಲಭ್ಯಗಳು ಪೇಟಿಎಮ್‌ನಲ್ಲಿ ಲಭ್ಯವಾಗಲಿವೆ. ಗ್ರಾಹಕರು ಲೋನ್ ಪೇಮೆಂಟ್, ಬಿಲ್ ಪೇಮೆಂಟ್, ಫೋನ್ ರೀಚಾರ್ಜ್, ಆನ್‌ಲೈನ್‌ ಶಾಪಿಂಗ್ ಮಾಡಬಹುದು. ಸಣ್ಣ ಪುಟ್ಟ ಅಂಗಡಿಗಳಿಲ್ಲಿಯೂ ಸಹ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ಹಣ ವರ್ಗಾವಣೆ ಮಾಡಬಹುದು.

ಭೀಮ್ ಆಪ್ (BHIM)

ಭೀಮ್ ಆಪ್ (BHIM)

ಭೀಮ್‌ ಆಪ್ ಸಹ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಆಗಿದ್ದು, Unified Payments Interface (UPI) ಯುಪಿಐ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಪೇನಂಯತೆ UPI ID ಮತ್ತು QR ಕೋಡ್ ಬಳಸಿ ಭೀಮ್‌ ಆಪ್‌ನಲ್ಲಿ ಸಹ ನೇರವಾಗಿ ಖಾತೆಗೆ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಗೂಗಲ್ ಪೇ ಸ್ಟೋರ್‌ನಲ್ಲಿ ಭೀಮ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗ್ರಾಹಕರು ಅವರಿಗೆ ಸೂಕ್ತವಾಗ ಭಾಷೆ ಸೆಟ್‌ ಮಾಡುವ ಆಯ್ಕೆ ಇದೆ. ನಾಲ್ಕು ನಂಬರ್ ಪಿನ್ ನಂಬರ್ ಸೆಟ್‌ ಮಾಡುವ ಆಯ್ಕೆ ಸಹ ಇದೆ.

Most Read Articles
Best Mobiles in India

English summary
Google Pay Alternative Payments app phonepe, paytm and bhim. you can be downloaded from Play Store. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more