ಗೂಗಲ್ ಸಂಸ್ಥೆಯಿಂದ 'ಪಿಕ್ಸಲ್ 4' ಮತ್ತು 'ಪಿಕ್ಸಲ್ 4XL' ಲಾಂಚ್!..ಬೆಲೆ ಎಷ್ಟು?
ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 4 ಸ್ಮಾರ್ಟ್‌ಫೋನ್ ಸರಣಿಯು ನ್ಯೂಯರ್ಕ್‌ನಲ್ಲಿ ಬಿಡುಗಡೆ ಆಗಿದೆ. ನಿರೀಕ್ಷೆಯಂತೆ ಸಂಪೂರ್ಣ ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಸರಣಿಯು 'ಪಿಕ್ಸಲ್ 4' ಮತ್ತು 'ಪಿಕ್ಸಲ್ 4 XL' ವೇರಿಯಂಟ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯು (ಅ.15ರಂದು) 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ಗಳು 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್' ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ 6GB RAM, 90Hz ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಕ್ಸಿಜನ್ 10 ಓಎಸ್ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆದಿದೆ.

ಹಾಗೆಯೇ ಈ ಪಿಕ್ಸಲ್ 4 ಸರಣಿಯು ನಾಲ್ಕು ಹೊಸ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ ಲೈವ್ ಎಚ್‌ಆರ್‌ಡಿ, ವೈಟ್ ಬ್ಯಾಲೆನ್ಸ್, ಪೂರ್ಟ್ರೈಟ್ ಮೋಡ್ ಹಾಗೂ ನೈಟ್ ಸೈಟ್ ಆಯ್ಕೆಗಳಾಗಿವೆ. ಹಾಗಾದರೇ ಗೂಗಲ್ ಸಂಸ್ಥೆಯ 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 5.7 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ OLED ಪ್ಯಾನೆಲ್ ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ಸಾಂದ್ರತೆ 444ppi ಆಗಿದೆ. ಡಿಸ್‌ಪ್ಲೇಯ ರಿಫ್ರೇಶ್ ರೇಟ್ 90Hz ಆಗಿದ್ದು, HDR ಹೊಂದಿದೆ. ಇನ್ನು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ 6.3 ಇಂಚಿನ Qಹೆಚ್‌ಡಿ ಪ್ಲಸ್ OLED ಪ್ಯಾನೆಲ್ ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ಸಾಂದ್ರತೆ 537ppi ಆಗಿದೆ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ರಿಫ್ರೇಶ ರೇಟ್ ಸಹ 90Hz ಆಗಿದೆ.

ಪ್ರೊಸೆಸರ್ ಸಾಮರ್ಥ್ಯ
'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಈ ಎರಡು ಸ್ಮಾರ್ಟ್‌ಫೋನ್‌ಗಳು 'ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್' ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರ ಜೊತೆಗೆ ಆಂಡ್ರಾಯ್ಡ್ ಆಕ್ಸಿಜನ್ 10 ಓಎಸ್ ಬೆಂಬಲ ಪಡೆದಿವೆ. ಇದರೊಂದಿಗೆ 6GB RAM ಸಾಮರ್ಥ್ಯದ ಆಯ್ಕೆ ಇದ್ದು, ಜೊತೆಗೆ 64GB ಅಥವಾ 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿವೆ.

ಕ್ಯಾಮೆರಾ ವಿಶೇಷತೆ
'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಈ ಎರಡು ಸ್ಮಾರ್ಟ್‌ಫೋನ್‌ಗಳು ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/2.4 ಅಪರ್ಚರ್ ನೊಂದಿಗೆ 16ಎಂಪಿ ಸೆನ್ಸಾರ್ ಪಡೆದಿವೆ. ಹಾಗೆಯೇ ಸೆಕೆಂಡ ರಿಯರ್ ಕ್ಯಾಮೆರಾವು f/1.7 ಅಪರ್ಚರ್‌ನೊಂದಿಗೆ 12.2ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸೆಲ್ಫಿಗಾಗಿ 8ಎಂಪಿಯ ಸೆನ್ಸಾರ್ ಕ್ಯಾಮೆರಾ ನೀಡಲಾಗಿದ್ದು, 4K ವಿಡಿಯೊ ರೆಕಾರ್ಡಿಂಗ್ ಸೌಲಭ್ಯವನ್ನು ಪಡೆದಿವೆ.

ಬ್ಯಾಟರಿ ಲೈಫ್
'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 2,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇನ್ನು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ 3,700mAh ಸಾಮರ್ಥ್ಯದ ಬ್ಯಾಟರಿ ಲೈಫ್ ಪಡೆದುಕೊಂಡಿದೆ. ಇದರೊಂದಿಗೆ ಈ ಎರಡು ಸ್ಮಾರ್ಟ್‌ಫೋನ್‌ಗಳು 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಒದಗಿಸಿದ್ದು, ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿವೆ.

ಇತರೆ ಸೌಲಭ್ಯಗಳು
'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಈ ಎರಡು ಸ್ಮಾರ್ಟ್‌ಫೋನ್‌ಗಳು, ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಚಾರ್ಜಿಂಗ್ ಅಡಾಪ್ಟರ್(18wat), ಸಿಮ್ ಇಜೇಕ್ಷನ್ ಟೂಲ್, ಸೌಲಭ್ಯಗಳನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ
'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು ನ್ಯೂಯರ್ಕ್‌ನಲ್ಲಿ ಬಿಡುಗಡೆ ಆಗಿದ್ದು, 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಬೆಲೆಯು $799 (57,000ರೂ). ಹಾಗೆಯೇ 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ ಬೆಲೆಯು $899 (64,000ರೂ).


Click it and Unblock the Notifications








