Home
ಸುದ್ದಿಜಾಲ

'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜು!..ಫೀಚರ್ಸ್‌ ಹೇಗಿವೆ?

ಟೆಕ್ ದಿಗ್ಗಜ್ ಗೂಗಲ್ ಸಂಸ್ಥೆಯು ಸಹ ಈಗಾಗಲೇ 'ಪಿಕ್ಸಲ್' ಹೆಸರಿನ ಸರಣಿ ಮೂಲಕ ಕೇಲವು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಸ್ಥೆಯು ಇದೀಗ 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಲು ತಯಾರಾಗುತ್ತಿದೆ. ಈ 'ಪಿಕ್ಸಲ್ 4' ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರಲ್ಲಿ ಬಾರಿ ಕುತೂಹಲ ಮೂಡಿಸಿದ್ದು, ಸಂಪೂರ್ಣ ಅಪ್‌ಗ್ರೇಡ್‌ ಫೀಚರ್ಸ್‌ಗಳು ಒಳಗೊಂಡಿರುವ ಸೂಚನೆ ನೀಡಿದೆ.

ಗೂಗಲ್ ಪಿಕ್ಸಲ್ 4

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಲಾಂಚ್‌ಗೆ ಸಿದ್ಧಗೊಳ್ಳುತ್ತಿದ್ದು, ಈ ಸರಣಿಯು 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ. ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರಲಿದ್ದು, ಜೊತೆಗೆ ಪಿಕ್ಸಲ್ ನ್ಯೂರಲ್‌ ಕೋರ್ ಆಯ್ಕೆಯ ಬೆಂಬಲವನ್ನು ಪಡೆದಿರಲಿದೆ. ಇದೇ ಅಕ್ಟೋಬರ್ 15 ರಂದು ಲಾಂಚ್ ಆಗಲಿದೆ ಎಂದು ಲೀಕ್ ಸುದ್ದಿಗಳು ಸುಳಿವು ನೀಡಿವೆ. ಹಾಗಾದರೇ ಗೂಗಲ್ ಪಿಕ್ಸಲ್ 4 ಸ್ಮಾರ್ಟ್‌ಫೋನ್ ಸರಣಿ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಬಹುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 5.7 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ OLED ಪ್ಯಾನೆಲ್ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇಯ ರಿಫ್ರೇಶ್‌ ರೇಟ್ 90Hz ಆಗಿರಲಿದೆ. ಇನ್ನು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ 6.3 Qಹೆಚ್‌ಡಿ ಪ್ಲಸ್‌ OLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿರಲಿದ್ದು, ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ರಿಫ್ರೇಶ ರೇಟ್‌ ಸಹ 90Hz ಆಗಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಗೂಗಲ್ ಸಂಸ್ಥೆಯ 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು 'ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌' ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರ ಜೊತೆಗೆ ಪಿಕ್ಸಲ್ ನ್ಯೂರಲ್‌ ಕೋರ್ ಸಪೋರ್ಟ್ ಪಡೆದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 6GB RAM ಸಾಮರ್ಥ್ಯವನ್ನು ಹೊಂದಿರಲಿದ್ದು, 64GB ಅಥವಾ 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಹೊಂದಿರಲಿವೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು ಹಿಂಬದಿಯಲ್ಲಿ 12ಎಂಪಿಯ ಸೆನ್ಸಾರ್‌ನಲ್ಲಿ ಡ್ಯುಯಲ್ ಪಿಕ್ಸಲ್ ಕ್ಯಾಮೆರಾ ಹೊಂದಿರಲಿದ್ದು, ಜೊತೆಗೆ ಸೆಲ್ಫಿಗಾಗಿ 16ಎಂಪಿ ಟೆಲಿಫೋಟೊ ಲೆನ್ಸ್‌ ಕ್ಯಾಮೆರಾ ಹೊಂದಿರಲಿವೆ. ಈ ಎರಡು ಸ್ಮಾರ್ಟ್‌ಫೋನ್ ಸ್ಟಿತಿಯೊ ಸ್ಪೀಕರ್ಸ್‌ಗಳನ್ನು, ಮೋಷನ್ ಸೆನ್ಸ್‌, ಫೇಸ್‌ ಅನ್‌ಲಾಕ್ ಫೀಚರ್‌, ಡಿಸ್‌ಪ್ಲೇ ಫಿಂಗರಪ್ರಿಂಟ್ ಸ್ಕ್ಯಾನರ್‌ ಸೌಲಭ್ಯಗಳು ಇರಲಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 2,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದೆ. ಇನ್ನು ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ 3,700mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಪಡೆದುಕೊಂಡಿರಲಿದೆ. ಇದರೊಂದಿಗೆ ಈ ಎರಡು ಸ್ಮಾರ್ಟ್‌ಫೋನ್‌ಗಳು ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು, ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಚಾರ್ಜಿಂಗ್ ಅಡಾಪ್ಟರ್(18wat), ಸಿಮ್ ಇಜೇಕ್ಷನ್ ಟೂಲ್, ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯುಲ್ ಆಯ್ಕೆಗಳನ್ನು ಪಡೆದಿರುತ್ತವೆ ಎನ್ನಲಾಗುತ್ತಿದೆ.

Best Mobiles in India

English summary
According to the leaked information The all-new Google Pixel 4 and Pixel 4 XL is set to launch on October 15. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+