Home
ಸುದ್ದಿಜಾಲ

ಗೂಗಲ್‌ ಪಿಕ್ಸಲ್‌ 6 ಖರೀದಿಸಲು ಇದುವೇ ಸಕಾಲ!..ಸಖತ್‌ ಡಿಸ್ಕೌಂಟ್‌!

ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಸಂಸ್ಥೆಯು 2021 ರಲ್ಲಿ ಬಿಡುಗಡೆ ಮಾಡಿರುವ ಗೂಗಲ್‌ ಪಿಕ್ಸಲ್‌ 6 ಸ್ಮಾರ್ಟ್‌ಫೋನ್‌ ಕೆಲವು ಅತ್ಯುತ್ತಮ ಫೀಚರ್ಸ್‌ಗಳಿಂದ ಫೋನ್‌ ಪ್ರಿಯರ ಮನ ಗೆದ್ದಿದೆ. ಈ ಸ್ಮಾರ್ಟ್‌ಫೋನಿನ ಕ್ಯಾಮೆರಾ ಸಹ ಉತ್ತಮವಾಗಿದೆ. ಸದ್ಯ ಗ್ರಾಹಕರಿಗೆ ಗುಡ್‌ನ್ಯೂಸ್‌ ಇದ್ದು, ಈ ಫೋನ್‌ ಬೆಲೆಯಲ್ಲಿ ಸಖತ್ ಡಿಸ್ಕೌಂಟ್‌ ಪಡೆದಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಗೂಗಲ್‌ ಪಿಕ್ಸಲ್‌ 6 ಸ್ಮಾರ್ಟ್‌ಫೋನ್‌ 128 GB ಸ್ಟೋರೇಜ್‌ನ ವೇರಿಯಂಟ್‌ 37,999ರೂ. ಗಳ ಆಫರ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಮೂಲ ದರ ಅಮೆಜಾನ್‌ ತಾಣ ದಲ್ಲಿ 95,990ರೂ. ಆಗಿದೆ.

ಗೂಗಲ್‌ ಪಿಕ್ಸಲ್‌ 6 ಖರೀದಿಸಲು ಇದುವೇ ಸಕಾಲ!..ಸಖತ್‌ ಡಿಸ್ಕೌಂಟ್‌!

ಇದರೊಂದಿಗೆ ಗೂಗಲ್‌ ಪಿಕ್ಸಲ್‌ 6 ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಎಕ್ಸ್‌ಚೇಂಜ್ ಆಫರ್‌, ಬ್ಯಾಂಕ್‌ ಕೊಡುಗೆ ಸೇರಿದಂತೆ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಸಹ ದೊರೆಯುತ್ತವೆ. ಹಾಗಾದರೆ ಗೂಗಲ್‌ ಪಿಕ್ಸಲ್‌ 6 ಸ್ಮಾರ್ಟ್‌ ಫೋನಿನ ಫೀಚರ್ಸ್‌ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ 6 ಖರೀದಿಸಲು ಇದುವೇ ಸಕಾಲ!..ಸಖತ್‌ ಡಿಸ್ಕೌಂಟ್‌!

ಗೂಗಲ್‌ ಪಿಕ್ಸೆಲ್‌ 6 : ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಗೂಗಲ್‌ ಪಿಕ್ಸೆಲ್‌ 6 ಸ್ಮಾರ್ಟ್‌ಫೋನ್‌ 90 Hz ರಿಫ್ರೆಶ್ ರೇಟ್‌ ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಹೊಂದಿದೆ.

ಗೂಗಲ್‌ ಪಿಕ್ಸಲ್‌ 6 ಖರೀದಿಸಲು ಇದುವೇ ಸಕಾಲ!..ಸಖತ್‌ ಡಿಸ್ಕೌಂಟ್‌!

ಗೂಗಲ್‌ ಪಿಕ್ಸೆಲ್‌ 6 : ಪ್ರೊಸೆಸರ್‌ ಸಾಮರ್ಥ್ಯ ಯಾವುದು

ಗೂಗಲ್‌ ಪಿಕ್ಸೆಲ್‌ 6 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಗೂಗಲ್ ಟೆನ್ಸರ್ (5 nm) SoC ಪ್ರೊಸೆಸರ್‌ ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲ ಪಡೆದಿದ್ದು, ಇತ್ತೀಚಿನ ಆಂಡ್ರಾಯ್ಡ್‌ 13 ಓಎಸ್‌ಗೆ ಅಪ್‌ಡೇಟ್‌ ಸೌಲಭ್ಯ ಪಡೆದಿದೆ. ಈ ಗೂಗಲ್‌ ಪಿಕ್ಸೆಲ್‌ 6 ಸ್ಮಾರ್ಟ್‌ಫೋನ್‌ 8 GB RAM +128 GB ಮತ್ತು 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಗೂಗಲ್‌ ಪಿಕ್ಸೆಲ್‌ 6 : ಡ್ಯುಯಲ್‌ ಕ್ಯಾಮೆರಾ ರಚನೆ

ಗೂಗಲ್‌ ಪಿಕ್ಸೆಲ್‌ 6 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಕ್ಯಾಮೆರಾವು ಹಲವಾರು ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಗೂಗಲ್‌ ಪಿಕ್ಸಲ್‌ 6 ಖರೀದಿಸಲು ಇದುವೇ ಸಕಾಲ!..ಸಖತ್‌ ಡಿಸ್ಕೌಂಟ್‌!

ಗೂಗಲ್‌ ಪಿಕ್ಸೆಲ್‌ 6 : ಬ್ಯಾಟರಿ ಬ್ಯಾಕ್‌ಅಪ್‌, ಇತರೆ ಸೌಲಭ್ಯಗಳು

ಗೂಗಲ್‌ ಪಿಕ್ಸೆಲ್‌ 6 ಸ್ಮಾರ್ಟ್‌ಫೋನ್‌ 4614 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. 30W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Google Pixel 6 available at Discount Price on Amazon; Check Deal Price and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+