Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ 6 ಪ್ರೊ 5G ಫೋನ್‌ಗೆ ಬೊಂಬಾಟ್‌ ಆಫರ್: 57% ಡಿಸ್ಕೌಂಟ್‌ ಅಂದ್ರೆ ನಂಬಲೇಬೇಕು!

ಗೂಗಲ್‌ ಪಿಕ್ಸೆಲ್‌ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ನಿರ್ಮಾಣ ಆಗಿದೆ. ಜೊತೆಗೆ ಈ ಫೋನ್‌ಗಳ ಬೆಲೆಯೂ ಸಹ ಅದೇ ರೀತಿ ಇದೆ. ಆದರೆ, ನೀವು ಈ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಹಾಗೂ ಹೆಚ್ಚಿನ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ.

ಹೌದು, ಗೂಗಲ್‌ ಪಿಕ್ಸೆಲ್‌ 6 ಪ್ರೊ 5G (Google Pixel 6 Pro 5G 12GB RAM) ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಬೆಲೆ ಇಳಿಕೆಯಾಗಿದ್ದು, 57%ಡಿಸ್ಕೌಂಟ್‌ ಮೂಲಕ ನೀವು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ ಕಳೆದ ಕೆಲ ತಿಂಗಳ ಹಿಂದೆಯೂ ಸಹ ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಹಾಗಿದ್ರೆ, ಈ ಫೋನ್‌ ಖರೀದಿ ಮೇಲೆ ಬ್ಯಾಂಕ್‌, ವಿನಿಮಯ ಆಫರ್‌ಏನು? ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್‌ ಪಿಕ್ಸೆಲ್‌ 6 ಪ್ರೊ 5G ಫೋನ್‌ಗೆ ಬೊಂಬಾಟ್‌ ಆಫರ್: 57% ಡಿಸ್ಕೌಂಟ್‌..

ಗೂಗಲ್‌ ಪಿಕ್ಸೆಲ್‌ 6 ಪ್ರೊ 5G ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ನೀವು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಅಥವಾ ಈ ಫೋನ್‌ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮೊದಲು ಇದರ ಪ್ರಮುಖ ಫೀಚರ್ಸ್‌ಗಳ ಬಗ್ಗೆ ತಿಳಿದುಕೊಂಡರೆ ಒಳಿತು. ಈ ಫೋನ್ 6.7 ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದ್ದು, 1,440x3,120 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ 10Hz ನಿಂದ 120Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನು ಆಯ್ಕೆ ಪಡೆದುಕೊಂಡಿದೆ.

ಗೂಗಲ್‌ ಪಿಕ್ಸಲ್‌ 6 ಪ್ರೊ 5G ಪ್ರೊಸೆಸರ್‌: ಈ ಫೋನ್ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಟೆನ್ಸರ್ 20-ಕೋರ್ ಜಿಪಿಯು ಬಲ ಹೊಂದಿದೆ. ಹಾಗೆಯೇ ಗೂಗಲ್ ಅಭಿವೃದ್ಧಿ ಪಡಿಸಿದ ಟೆನ್ಸರ್ ಚಿಪ್ CPU ಕಾರ್ಯಕ್ಷಮತೆಯನ್ನು 80X ಹೆಚ್ಚಿಸುತ್ತದೆ. ಇನ್ನುಳಿದಂತೆ 12 GB RAM ಮತ್ತು 512 GB ಡೀಫಾಲ್ಟ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ.

ಗೂಗಲ್‌ ಪಿಕ್ಸೆಲ್‌ 6 ಪ್ರೊ 5G ಫೋನ್‌ಗೆ ಬೊಂಬಾಟ್‌ ಆಫರ್: 57% ಡಿಸ್ಕೌಂಟ್‌..

ಗೂಗಲ್‌ ಪಿಕ್ಸಲ್‌ 6 ಪ್ರೊ 5G ಕ್ಯಾಮೆರಾ ರಚನೆ: ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 48MPಟೆಲಿಫೋಟೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 12MPಅಲ್ಟ್ರಾ-ವೈಡ್ ಲೆನ್ಸ್‌ ಆಯ್ಕೆ ಪಡೆದುಕೊಂಡಿದೆ. ಇನ್ನುಳಿದಂತೆ 4Xಆಪ್ಟಿಕಲ್ ಜೂಮ್ ಮತ್ತು 20xಜೂಮ್ ವರೆಗೆ ಪಿಕ್ಸೆಲ್‌ನ ಸೂಪರ್ ರೆಸ್ ಜೂಮ್‌ನ ಸುಧಾರಿತ ಆವೃತ್ತಿಯನ್ನು ಈ ಕ್ಯಾಮೆರಾಗಳು ಪಡೆದುಕೊಂಡಿವೆ. ಜೊತೆಗೆ 11ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಇದರಲ್ಲಿದೆ.

ಗೂಗಲ್‌ ಪಿಕ್ಸಲ್‌ 6 ಪ್ರೊ 5G ಬ್ಯಾಟರಿ ಹಾಗೂ ಇತರೆ: ಗೂಗಲ್‌ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ 5,003mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 23W ವಾಯರ್‌ಲೆಸ್‌ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರೊಂದಿಗೆ 'ಕ್ವಿಕ್ ಟ್ಯಾಪ್ ಟು ಸ್ನ್ಯಾಪ್' ಎಂಬ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ಲಾಕ್‌ಸ್ಕ್ರೀನ್‌ನಿಂದ ಸ್ನ್ಯಾಪ್‌ಚಾಟ್ ಕ್ಯಾಮೆರಾವನ್ನು ತೆರೆಯಲು ಬಳಕೆದಾರರಿಗೆ ಸುಲಭ ಅವಕಾಶ ನೀಡಲಿದೆ.

ಗೂಗಲ್‌ ಪಿಕ್ಸೆಲ್‌ 6 ಪ್ರೊ 5G ಫೋನ್‌ಗೆ ಬೊಂಬಾಟ್‌ ಆಫರ್: 57% ಡಿಸ್ಕೌಂಟ್‌..

ಗೂಗಲ್‌ ಪಿಕ್ಸಲ್‌ 6 ಪ್ರೊ 5G ಆಫರ್ ಬೆಲೆ ವಿವರ: ಈ ವಿಶೇಷ ಸ್ಮಾರ್ಟ್‌ಫೋನ್ 1,09,000ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 46,910ರೂ.ಗಳ ಬೆಲೆಗೆ ಕಾಣಿಸಿಕೊಂಡಿದೆ. ಅಂದರೆ 57% ವರೆಗೆ ರಿಯಾಯಿತಿ ನಿಗದಿ ಮಾಡಲಾಗಿದೆ. 46,910ರೂ.ಗಳ ಹೊರತಾಗಿ ನೀವು ವಿನಿಮಯ ಆಫರ್‌ ಬಳಕೆ ಮಾಡಿಕೊಂಡು ಈ ಫೋನ್‌ ಖರೀದಿ ಮೇಲೆ 20,550ರೂ.ವರೆಗೂ ಹಣ ಉಳಿತಾಯ ಮಾಡಬಹುದಾಗಿದೆ. ಇನ್ನು ಈ ಫೋನ್‌ ಅನ್ನು ಈ ಡಿಸ್ಕೌಂಟ್‌ ಬೆಲೆಗೆ ಅಮೆಜಾನ್‌ ನಲ್ಲಿ ಖರೀದಿ ಮಾಡಬಹುದು.

Best Mobiles in India

English summary
Google Pixel 6 Pro 5G smartphone got huge discount in amazon. A discount was announced for this phone last few months too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+