ಗೂಗಲ್ ಪಿಕ್ಸಲ್ 6 ಪ್ರೊ ಮತ್ತು ಗೂಗಲ್ ಪಿಕ್ಸಲ್ 6 ಫೋನ್ ಫೀಚರ್ಸ್ ಲೀಕ್!
ಗೂಗಲ್ ಸಂಸ್ಥೆಯ ಬಹು ನಿರೀಕ್ಷಿತ ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ ಸರಣಿಯು ಬಿಡುಗಡೆಗೆ ಸಜ್ಜಾಗಿದ್ದು, ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ಲೀಕ್ ಆಗಿವೆ. ಗೂಗಲ್ ಪಿಕ್ಸಲ್ 6 ಫೋನ್ ಸರಣಿಯು ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಈ ಫೋನ್ ಸರಣಿಯ ಲೀಕ್ ಫೀಚರ್ಸ್‌ಗಳು ಗ್ರಾಹಕರನ್ನು ಅಚ್ಚರಿಗೊಳಿಸಿದ್ದು, ಬೆಲೆ ಎಷ್ಟು ಎನ್ನುವ ಪ್ರಶ್ನೇ ಮೂಡಿದೆ.

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯ ನೂತನ ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ ಲಾಂಚ್‌ಗೆ ತಯಾರಾಗುತ್ತಿವೆ. ಈ ಸರಣಿಯ ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಫೋನ್‌ಗಳ ಆಕರ್ಷಕ ಕ್ಯಾಮೆರಾ ಸೆನ್ಸಾರ್ ಹೊಂದಿರಲಿವೆ. ಅವುಗಳಲ್ಲಿ ಪಿಕ್ಸಲ್ 6 ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಇರಲಿದ್ದು, ಇನ್ನು ಪಿಕ್ಸಲ್ 6 ಪ್ರೊ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್ ಹೊಂದಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇಯ ಕರ್ವ್ ಮಾದರಿಯನ್ನು ಪಡೆದಿರಲಿದೆ. ಡಿಸ್‌ಪ್ಲೇಯಲ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ. ಇನ್ನು ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ 6.4 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯು ಫ್ಲ್ಯಾಟ್ ಮಾದರಿಯಲ್ಲಿ ಇರಲಿದೆ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸಾರ್ ಇರಲಿದೆ.

ಪ್ರೊಸೆಸರ್ ಸಾಮರ್ಥ್ಯ
ಗೂಗಲ್ ಪಿಕ್ಸಲ್ 6 ಪ್ರೊ ಮತ್ತು ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್‌ಗಳು ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿರುವದು ಬಹುತೇಕ ಖಚಿತ ಎನ್ನಲಾಗಿದೆ.

ಕ್ಯಾಮೆರಾ ವಿಶೇಷತೆ
ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅದರಲ್ಲಿ ಮುಖ್ಯ ಕ್ಯಾಮೆರಾವು ಹೈ ಎಂಡ್ ಸೆನ್ಸಾರ್ ಪಡೆದಿರಲಿದೆ. ಅದೇ ರೀತಿ ಗೂಗಲ್ ಪಿಕ್ಸಲ್ 6 ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು ಹೆಚ್ಚಿನ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ.

ಬ್ಯಾಟರಿ ಲೈಫ್
ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಕಂಪನಿಯು ಹಿಂದಿನ ಫೋನ್‌ಗಳಿಗಿಂತ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುವ ಸಾಧ್ಯತೆಗಳು ಇವೆ. ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ ಅಧಿಕ ಬ್ಯಾಟರಿ ಜೊತೆಗೆ ವಾಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಪಡೆಯುವ ನಿರೀಕ್ಷೆಗಳಿವೆ. ಅದೇ ರೀತಿ ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ ಸಹ ಹೆಚ್ಚಿನ ಬ್ಯಾಕ್‌ಅಪ್ ಬೆಂಬಲ ಪಡೆದಿರಲಿದ್ದು, ಜೊತೆಗೆ USB ಟೈಪ್-C ಪೋರ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿರಲಿದೆ.

ಇತರೆ ಸೌಲಭ್ಯಗಳು
ಗೂಗಲ್ ಪಿಕ್ಸಲ್ 6 ಪ್ರೊ ಮತ್ತು ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಅಪ್ಡೇಟ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿರಲಿದೆ. ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯುಲ್ ಆಯ್ಕೆಗಳನ್ನು ಪಡೆದಿರುತ್ತವೆ ಎನ್ನಲಾಗುತ್ತಿದೆ.


Click it and Unblock the Notifications








