ಭಾರೀ ಡಿಸ್ಕೌಂಟ್‌ನಲ್ಲಿ 'ಗೂಗಲ್ ಪಿಕ್ಸಲ್ 6a' ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ!
ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 'ಬಿಗ್ ದೀಪಾವಳಿ ಸೇಲ್' (Big Diwali Sale) ಮಾರಾಟ ಪ್ರಾರಂಭವಾಗಿದೆ. ಈ ಸೇಲ್ ಇದೇ ಅಕ್ಟೋಬರ್ 11 (ಇಂದು) ಶುರುವಾಗಿದ್ದು, ಇದೇ ಅಕ್ಟೋಬರ್ 16 ರ ವರೆಗೂ ಲೈವ್ ಆಗಿರಲಿದೆ. ಈ ಮಾರಾಟದಲ್ಲಿ ಕೆಲವೊಂದು ಆಯ್ದ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಾಗಿದೆ. ಮುಖ್ಯವಾಗಿ ಗೂಗಲ್ ಪಿಕ್ಸಲ್ 6a ಸ್ಮಾರ್ಟ್‌ಫೋನ್ ವಿಶೇಷ ಗಮನ ಸೆಳೆದಿದೆ.

ಹೌದು, ದೀಪಾವಳಿ ಹಬ್ಬದ ಅಂಗವಾಗಿ ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ಬಿಗ್ ದೀಪಾವಳಿ ಸೇಲ್' (Big Diwali Sale) ಈಗಾಗಲೇ ಶಾಪಿಂಗ್ ಪ್ರಿಯರನ್ನು ಆಕರ್ಷಿಸಿದೆ. ಈ ಮಾರಾಟದಲ್ಲಿ ಕೆಲವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಬೊಂಬಾಟ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಗೂಗಲ್ ಸಂಸ್ಥೆಯ ಗೂಗಲ್ ಪಿಕ್ಸಲ್ 6a (Google Pixel 6a ) ಸ್ಮಾರ್ಟ್‌ಫೋನ್ ಭಾರೀ ಕೊಡುಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಗೂಗಲ್ ಪಿಕ್ಸಲ್ 6a (Google Pixel 6a) ಪ್ರಸ್ತುತ 34,199ರೂ. ಗಳಿಗೆ ಮಾರಾಟವಾಗುತ್ತಿದ್ದು, ಇದರ ಎಮ್‌ಆರ್‌ಪಿ ದರವು 43,999ರೂ. ಗಳು ಆಗಿದೆ. ಸದ್ಯ ಸೇಲ್‌ನಲ್ಲಿ ಈ ಫೋನ್ ಬ್ಯಾಂಕ್ ಕೊಡುಗೆಗಳ ಆಫರ್ ಸಹ ಪಡೆದಿದೆ. ಎಸ್‌ಬಿಐ ಮತ್ತು ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1,250ರೂ. ಗಳ ರಿಯಾಯಿತಿ ಪಡೆಯಬಹುದು. ಹಾಗೆಯೇ ಎಸ್‌ಬಿಐ ಕಾರ್ಡ್ ಬಳಕೆದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ 1,750ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಹಾಗಾದರೆ ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಒಳಗೊಂಡ 6.1 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದು ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಅನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ ಏನು?
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್ ಹೊಂದಿದೆ. ಇದು ಮಾಲಿ G78 MP20 ಸಪೋರ್ಟ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್ ಗೂಗಲ್ ಪಿಕ್ಸೆಲ್ 6 ಮತ್ತು ಗೂಗಲ್ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ಪವರ್ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.

ಕ್ಯಾಮೆರಾ ಸೆಟ್‌ಅಪ್ ಯಾವುದು?
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಮ್ಯಾಜಿಕ್ ಎರೇಸರ್ ಮತ್ತು ನೈಟ್‌ಸೈಟ್‌ನಂತಹ ಹಲವಾರು ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 4,306mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು ಅಡಾಪ್ಟಿವ್ ಬ್ಯಾಟರಿಯಾಗಿದ್ದು, ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್‌ನಲ್ಲಿರುವಾಗ 24 ಗಂಟೆಗಳು ಮತ್ತು 72 ಗಂಟೆಗಳವರೆಗೆ ಬ್ಯಾಕ್‌ಅಪ್ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.


Click it and Unblock the Notifications








