Home
ಸುದ್ದಿಜಾಲ

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6a ಫೋನ್ ಲಾಂಚ್ ಮುಂದೂಡಿಕೆ!..ಕಾರಣ ಏನು?

ವಿಶ್ವ ಟೆಕ್ ದಿಗ್ಗಜ ಕಂಪೆನಿ ಎಂದೇ ಗುರುತಿಸಿಕೊಂಡಿರುವ ಗೂಗಲ್ ಈಗಾಗಲೇ ಪಿಕ್ಸಲ್ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಗೂಗಲ್ ಸಂಸ್ಥೆಯು 'ಗೂಗಲ್ ಪಿಕ್ಸೆಲ್ 6a' ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡುವುದಾಗಿ ಸೂಚಿಸಿತ್ತು. ಅದರೊಂದಿಗೆ ಪಿಕ್ಸೆಲ್ ವಾಚ್ ಡಿವೈಸ್ ಅನ್ನು ಸಹ ಬಿಡುಗಡೆ ಮಾಡುವುದಾಗಿತ್ತು. ಆದರೆ ಇದೀಗ ಈ ಡಿವೈಸ್‌ಗಳ ಲಾಂಚ್ ಅನ್ನು ಸಂಸ್ಥೆಯು ಮುಂದೂಡುವ ಸಾಧ್ಯತೆಗಳಿವೆ.

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6a ಫೋನ್ ಲಾಂಚ್ ಮುಂದೂಡಿಕೆ!..ಕಾರಣ ಏನು?

ಹೌದು, ಗೂಗಲ್ ಸಂಸ್ಥೆಯು ತನ್ನ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಮತ್ತು ಪಿಕ್ಸೆಲ್ ವಾಚ್ ಡಿವೈಸ್ ಗಳನ್ನು ಅಮೆರಿಕದಲ್ಲಿ ಜುಲೈ ಅಂತ್ಯದವರೆಗೆ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಗೂಗಲ್‌ ಪಿಕ್ಸೆಲ್‌ 6 ಫೋನ್‌ ಹಾಗೂ ಪಿಕ್ಸೆಲ್‌ ವಾಚ್‌ಗಳ ಬಿಡಿ ಭಾಗಗಳ (ಚಿಪ್) ದಾಸ್ತನು ಕೊರತೆ ಇದೆ ಎಂದು ಹೇಳಲಾಗುತ್ತಿರುವುದರಿಂದ ಗೂಗಲ್‌ ಈ ನಿರ್ಧಾರ ಕೈಗೊಂಡಿದೆ ಎಂದು ಆಂಡ್ರಾಯ್ಡ್ ಸೆಂಟ್ರಲ್ ವರದಿ ಮಾಡಿದೆ.

ಈ ನಿಟ್ಟಿನಲ್ಲಿ ಆಂಡ್ರಾಯ್ಡ್ ಫೋನ್‌ಗಳ ಬಿಡುಗಡೆ ಅನ್ನು ಗೂಗಲ್‌ ಜುಲೈಗೆ ಮುಂದೂಡಿದೆ ಎಂದು ಹೇಳಿದೆ. ಇನ್ನು 2022ರ ಮೇ 26ಕ್ಕೆ ಗೂಗಲ್ ಪಿಕ್ಸೆಲ್ 6A ಸ್ಮಾರ್ಟ್‌ಫೋನ್‌ ಮತ್ತು ಪಿಕ್ಸೆಲ್ ವಾಚ್ ಡಿವೈಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಈ ಮೊದಲು ಸಂಸ್ಥೆಯು ಹೇಳಿತ್ತು. ಈ ಡಿವೈಸ್‌ಗಳ ವಿಳಂಬದ ಹಿಂದೆ ಜಾಗತಿಕ ಚಿಪ್ ಕೊರತೆಯೂ ಇದೆ ಎಂದು ಹೇಳಲಾಗುತ್ತಿದೆ.

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6a ಫೋನ್ ಲಾಂಚ್ ಮುಂದೂಡಿಕೆ!..ಕಾರಣ ಏನು?

ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಫೀಚರ್ಸ್‌
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಈ ಹಿಂದಿನ ಗೂಗಲ್ ಪಿಕ್ಸೆಲ್ 5a ಫೋನಿಗೆ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌, ಪಿಕ್ಸೆಲ್ 5a ಫೋನಿಗಿಂತ ಚಿಕ್ಕ ಗಾತ್ರ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ವರದಿಯ ಪ್ರಕಾರ ಪಿಕ್ಸೆಲ್ 6a ಫೋನ್ 90Hz/120Hz ರಿಫ್ರೆಶ್ ದರದೊಂದಿಗೆ 6.2 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಹಾಗೆಯೇ ಗೂಗಲ್‌ ನ ಕಸ್ಟಮ್ ಟೆನ್ಸರ್ ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಬಹುದು. ಇದು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ನಲ್ಲಿ ಪ್ರದರ್ಶನವನ್ನು ನಡೆಸುತ್ತದೆ.

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6a ಫೋನ್ ಲಾಂಚ್ ಮುಂದೂಡಿಕೆ!..ಕಾರಣ ಏನು?

ಇನ್ನು ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗಿದೆ. ಪ್ರಾಥಮಿಕ ಕ್ಯಾಮೆರಾವು 12.2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿರುವ ನಿರೀಕ್ಷೆ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿರಬಹುದು ಎನ್ನಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ, ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಗೂಗಲ್‌ ಪಿಕ್ಸೆಲ್‌ 6 ಪ್ರೊ ಫೀಚರ್ಸ್‌
ಗೂಗಲ್ ಸಂಸ್ಥೆಯ ಈ ಹಿಂದಿನ ಜನಪ್ರಿಯ ಗೂಗಲ್‌ ಪಿಕ್ಸೆಲ್‌ 6 ಪ್ರೊ ಸ್ಮಾರ್ಟ್‌ಫೋನ್‌ ಸಹ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ 1,440 x 3,120 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದೆ. ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. 12GB RAM ಮತ್ತು 512GB ಡೀಫಾಲ್ಟ್ ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ರಚನೆ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ.

Best Mobiles in India

English summary
Google Pixel 6a Launch Reportedly Delayed Due to Chip shortage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+