Home
ಸುದ್ದಿಜಾಲ

ಮತ್ತೆ ದಿಢೀರ್‌ ಬೆಲೆ ಇಳಿಕೆ ಕಂಡ ಗೂಗಲ್‌ ಪಿಕ್ಸಲ್‌ 6a ಫೋನ್‌!..ಈಗ ಬೆಲೆ ಎಷ್ಟು?

ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಸಂಸ್ಥೆಯು ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಗೂಗಲ್‌ ಪಿಕ್ಸಲ್‌ 6a (Google Pixel 6a) ಖರೀದಿಸುವ ಗ್ರಾಹಕರಿಗೆ ಈಗ ಮತ್ತೆ ಭರ್ಜರಿ ಖುಷಿ ಸಮಾಚಾರ ಇದೆ. ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್‌ ಪಿಕ್ಸಲ್‌ 6a ಸ್ಮಾರ್ಟ್‌ಫೋನ್‌ ಗಮನ ಸೆಳೆಯುವ ಬೆಲೆ ಇಳಿಕೆ ಕಂಡಿದೆ.

ಹೌದು, ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್‌ ಪಿಕ್ಸಲ್‌ 6a (Google Pixel 6a) ಫೋನ್‌ ಶೇ. 34% ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಪಿಕ್ಸಲ್‌ 6a ಫೋನ್ 6 GB RAM + 128GB ಸ್ಟೋರೇಜ್‌ನ ವೇರಿಯಂಟ್‌ 43,999ರೂ. ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಕೊಡುಗೆಯಲ್ಲಿ 28,999ರೂ. ಗಳಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್ ಡಿಸ್ಕೌಂಟ್‌ ಕೊಡುಗೆ ದೊರೆಯುತ್ತದೆ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಲಭ್ಯ ಇವೆ.

ಮತ್ತೆ ದಿಢೀರ್‌ ಬೆಲೆ ಇಳಿಕೆ ಕಂಡ ಗೂಗಲ್‌ ಪಿಕ್ಸಲ್‌ 6a ಫೋನ್‌!..ಈಗ ಬೆಲೆ ಎಷ್ಟು?

- ಸಿಟಿ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,500ರೂ. ವರೆಗೆ
- ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ
- IDFC FIRST ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ
- ಇಂಡಸ್‌ಇಂಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ ಒಳಗೊಂಡ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಹೊಂದಿದೆ.

ಮತ್ತೆ ದಿಢೀರ್‌ ಬೆಲೆ ಇಳಿಕೆ ಕಂಡ ಗೂಗಲ್‌ ಪಿಕ್ಸಲ್‌ 6a ಫೋನ್‌!..ಈಗ ಬೆಲೆ ಎಷ್ಟು?

ಪ್ರೊಸೆಸರ್‌ ಸಾಮರ್ಥ್ಯ : ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್‌ ಹೊಂದಿದೆ. ಇದು ಮಾಲಿ G78 MP20 ಸಪೋರ್ಟ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್‌ ಗೂಗಲ್‌ ಪಿಕ್ಸೆಲ್‌ 6 ಮತ್ತು ಗೂಗಲ್‌ ಪಿಕ್ಸೆಲ್‌ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ಪವರ್‌ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ಸೆಟ್‌ಅಪ್‌ ಯಾವುದು : ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಮ್ಯಾಜಿಕ್ ಎರೇಸರ್ ಮತ್ತು ನೈಟ್‌ಸೈಟ್‌ನಂತಹ ಹಲವಾರು ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಮತ್ತೆ ದಿಢೀರ್‌ ಬೆಲೆ ಇಳಿಕೆ ಕಂಡ ಗೂಗಲ್‌ ಪಿಕ್ಸಲ್‌ 6a ಫೋನ್‌!..ಈಗ ಬೆಲೆ ಎಷ್ಟು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು : ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ 4,306mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು ಅಡಾಪ್ಟಿವ್ ಬ್ಯಾಟರಿಯಾಗಿದ್ದು, ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್‌ನಲ್ಲಿರುವಾಗ 24 ಗಂಟೆಗಳು ಮತ್ತು 72 ಗಂಟೆಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Google Pixel 6a is once again available for under Rs 28,000 in India. check offer price and specifications details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+