Home
ಸುದ್ದಿಜಾಲ

ನಾಳೆಯಿಂದ ಗೂಗಲ್ ಪಿಕ್ಸಲ್ 7 ಪ್ರಿ-ಆರ್ಡರ್‌ಗೆ ಲಭ್ಯ; ಟಾಪ್‌ ಫೀಚರ್ಸ್‌ ಏನು?

ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಸರಣಿಯು ಇದೇ ಅಕ್ಟೋಬರ್‌ 6 ರಂದು ಬಿಡುಗಡೆ ಆಗಲಿದೆ. ಅದೇ ದಿನ (ಅ. 6) ಗೂಗಲ್ ಪಿಕ್ಸಲ್ 7 ಸರಣಿ ಫೋನ್‌ಗಳು ಪ್ರಿ-ಆರ್ಡರ್‌ಗೆ ಲಭ್ಯ ಆಗಲಿವೆ. ಇನ್ನು ನೂತನ ಗೂಗಲ್ ಪಿಕ್ಸಲ್ 7 ಸರಣಿಯು ಗೂಗಲ್‌ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಒಳಗೊಂಡಿರಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯ ನೂತನ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಸರಣಿ ಇದೇ ಅಕ್ಟೋಬರ್‌ 6 ರಂದು ಗ್ಲೋಬಲ್‌ ಲಾಂಚ್‌ ಆಗಲಿದೆ. ಇನ್ನು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ (Flipkart) ಗೂಗಲ್‌ ಪಿಕ್ಸಲ್‌ ಸರಣಿಗಾಗಿ (Pixel 7) ಮೀಸಲಾದ ಪುಟವನ್ನು ಪ್ರಕಟಿಸಿದೆ. ಈ ಫೋನ್‌ ಅನ್ನು ಮುಂಗಡವಾಗಿ ಆರ್ಡರ್ ಮಾಡುವವರು ಗೂಗಲ್‌ ಬಡ್ಸ್‌ A (Pixel Buds A) ಡಿವೈಸ್‌ ಅನ್ನು 5,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ ಲಿಸ್ಟ್‌ ಮಾಡಿದೆ.

ಟ್ರಿಪಲ್‌

ಗೂಗಲ್ ಪಿಕ್ಸಲ್ 7 ಪ್ರೊ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮೆರಾ ಸೆನ್ಸಾರ್‌ ರಚನೆ ಹೊಂದಿರಲಿದ್ದು, ಇನ್ನು ಪಿಕ್ಸಲ್ 7 ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಗೂಗಲ್ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಹೊಂದಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿರಲಿದೆ

ಡಿಸ್‌ಪ್ಲೇ ರಚನೆ ಹೇಗಿರಲಿದೆ

ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ OLED ಸ್ಕ್ರೀನ್‌ ಜೊತೆಗೆ QHD+ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯ 120Hz ರೀಫ್ರೇಶ್ ರೇಟ್‌ ಅನ್ನು ಹೊಂದಿರಲಿದ್ದು, ಸ್ಕ್ರಾಲಿಂಗ್ ಹೆಚ್ಚು ಸಯವಾಗಿರಲಿದೆ ಹಾಗೂ ವೇಗವಾಗಿರಲಿದೆ. ಹಾಗೆಯೇ LTPO ತಂತ್ರಜ್ಞಾನ ಇರಲಿದ್ದು, ಇದು ಸ್ಕ್ರೀನ್‌ ನಲ್ಲಿ ಡಿಸ್‌ಪ್ಲೇ ಮಾಡಲಾದ ವಸ್ತು (material) ಅವಲಂಬಿಸಿ ರಿಫ್ರೆಶ್ ದರವನ್ನು 1Hz ನಿಂದ 120Hz ಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಪ್ರೊಸೆಸರ್‌ ಪವರ್ ಏನು

ಪ್ರೊಸೆಸರ್‌ ಪವರ್ ಏನು

ಗೂಗಲ್ ಪಿಕ್ಸಲ್ 7 ಪ್ರೊ ಮತ್ತು ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್‌ಗಳು ಎರಡನೇ ತಲೆಮಾರಿನ Tensor G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿರುವದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಗೂಗಲ್ ಪಿಕ್ಸಲ್ 7 ಪ್ರೊ ವೇರಿಯಂಟ್‌ 12GB RAM + 256GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿರಲಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅದರಲ್ಲಿ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿರಲಿದೆ. 12 ಮೆಗಾ ಪಿಕ್ಸಲ್‌ ಅಲ್ಟ್ರಾ ವೈಲ್ಡ್‌ ಲೆನ್ಸ್‌ ಒಳಗೊಂಡಿರಲಿದೆ ಹಾಗೂ 48 ಮೆಗಾ ಪಿಕ್ಸಲ್‌ ಟೆಲಿಫೋಟೋ ಲೆನ್ಸ್‌ ಹೊಂದಿರಲಿದೆ. ಅದೇ ರೀತಿ ಸೆಲ್ಫಿ ಕ್ಯಾಮೆರಾ ಸಹ ಹೈ ಸೆನ್ಸಾರ್ ಪಡೆದಿರುವ ನಿರೀಕ್ಷೆಗಳು ಇವೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಕಂಪನಿಯು ಹಿಂದಿನ ಫೋನ್‌ಗಳಿಗಿಂತ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುವ ಸಾಧ್ಯತೆಗಳು ಇವೆ. ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಜೊತೆಗೆ 30W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಆದರೆ ಬಾಕ್ಸ್‌ನೊಂದಿಗೆ ಚಾರ್ಜರ್ ನೀಡುವುದಿಲ್ಲ ಎನ್ನಲಾಗಿದೆ.

Best Mobiles in India

English summary
Google Pixel 7 And 7 Pro Pre-Orders In India Start From October 6: Check Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+