ಗೂಗಲ್ ಪಿಕ್ಸಲ್ 7 ಫೋನ್ ಮೇಲೆ ಬರೋಬ್ಬರಿ 15,799ರೂ. ಡಿಸ್ಕೌಂಟ್! ಬೊಂಬಾಟ್ ಕೊಡುಗೆ
ಗೂಗಲ್ ಪಿಕ್ಸಲ್ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಕ್ಯಾಮೆರಾ ಫೀಚರ್ಸ್‌ಗೆ ಹೆಸರಾಗಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಳಿಸಿಕೊಂಡಿದೆ. ಈ ನಡುವೆ ಈ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಎರಡನೇ ಬಾರಿಗೆ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದೇ ತಿಂಗಳ ಆರಂಭದಲ್ಲಿ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿತ್ತು.
ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಗೂಗಲ್ ಪಿಕ್ಸಲ್ 7(Google Pixel 7) ಸ್ಮಾರ್ಟ್‌ಫೋನ್ ಖರೀದಿ ಮೇಲೆ ಇದೀಗ ಡಿಸ್ಕೌಂಟ್ ರೂಪದಲ್ಲಿ 15,799ರೂ.ಹಣವನ್ನು ಉಳಿತಾಯ ಮಾಡಬಹುದು. ಅದಾಗ್ಯೂ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್ನೂ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದು. ಈ ಫೋನ್ 50 ಮೆಗಾಪಿಕ್ಸಲ್ ಪ್ರಮುಖ ಸೆನ್ಸರ್ ಹೊಂದಿದ್ದು, 4,335mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಡಿಸ್ಕೌಂಟ್ ವಿವರವನ್ನು ತಿಳಿಯೋಣ ಬನ್ನಿ.

ಗೂಗಲ್ ಪಿಕ್ಸಲ್ 7 ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.32 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ನೊಂದಿಗೆ ವಿಶೇಷ ಎನಿಸಿದೆ. ಜೊತೆಗೆ 1000 ನಿಟ್ಸ್ ಕನಿಷ್ಠ ಹಾಗೂ 1400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಇನ್ನುಳಿದಂತೆ ಈ ಫೋನ್ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.
ಗೂಗಲ್ ಪಿಕ್ಸಲ್ 7 ಫೋನ್ ಪ್ರೊಸೆಸರ್: ಈ ಫೋನ್‌ನ ಪ್ರೊಸೆಸರ್ ವಿಷಯಕ್ಕೆ ಬಂದರೆ ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್ ಬಲ ಪಡೆದಿದ್ದು, ಆಂಡ್ರಾಯ್ಡ್ 13 ರನ್ ಆಗಲಿದೆ. ಇದರೊಂದಿಗೆ ಮಾಲಿ G710 MP7 ಗ್ರಾಫಿಕ್ ಶಕ್ತಿ ಪಡೆದುಕೊಂಡಿದ್ದು, 8 GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಈ ಫೋನ್ ಕಾಣಿಸಿಕೊಂಡಿದೆ.
ಗೂಗಲ್ ಪಿಕ್ಸಲ್ 7 ಕ್ಯಾಮೆರಾ ರಚನೆ : ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾರ್ಥಮಿಕ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಹೊಂದಿದೆ. ಇದರೊಂದಿಗೆ ಡ್ಯುಯಲ್ ಎಲ್ಇಡಿ ಫ್ಲ್ಯಾಶ್, ಪಿಕ್ಸೆಲ್ ಶಿಫ್ಟ್, ಆಟೋ ಎಚ್‌ಡಿಆರ್, ಪನೋರಮಾ ಫೀಚರ್ಸ್ ಸಹ ಇದೆ. ಇನ್ನು ಸೆಲ್ಫಿ ಉದ್ದೇಶಕ್ಕೆ ಈ ಫೋನ್ 10 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಹೊಂದಿದೆ.

ಗೂಗಲ್ ಪಿಕ್ಸಲ್ 7 ಬ್ಯಾಟರಿ ಸಾಮರ್ಥ್ಯ: ಈ ಫೋನ್ 4355 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 20W ವೈರ್ಡ್ ಚಾರ್ಜಿಂಗ್ ಹಾಗೂ 20W ವಾಯರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಅದರಲ್ಲೂ ಅರ್ಧಗಂಟೆಯಲ್ಲಿ ವೈರ್ಡ್ ಚಾರ್ಜಿಂಗ್ ಮೂಲಕ ಅರ್ಧ ಬ್ಯಾಟರಿ ಭರ್ತಿಯಾಗಲಿದೆ.
ಗೂಗಲ್ ಪಿಕ್ಸಲ್ 7 ಫೋನ್‌ನ ಡಿಸ್ಕೌಂಟ್ ವಿವರ: ಪ್ರಮುಖ ವಿಷಯಕ್ಕೆ ಬರುವುದಾದರೆ ಈ ಫೋನ್ ಸಾಮಾನ್ಯ ಬೆಲೆ 59,999ರೂ.ಗಳಾಗಿದೆ. ಆದರೆ, ಅಮೆಜಾನ್‌ನಲ್ಲಿ 26% ಡಿಸ್ಕೌಂಟ್ ಲಭ್ಯ ಇದ್ದು, ಈ ಮೂಲಕ 15,799 ರೂ.ಗಳ ದೊಡ್ಡ ಮೊತ್ತದ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಈ ಫೋನ್ ಅನ್ನು ನೀವು 44,200ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಇದಿಷ್ಟೇ ಅಲ್ಲದೆ ಈ ಫೋನ್ ಖರೀದಿಗೆ ವಿವಿಧ ಆಯ್ಕೆಗಳನ್ನು ನೀಡಲಾಗಿದ್ದು, ಇಂಡಸ್‌ಇಂಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ನಲ್ಲಿ1,500ರೂ. ವರೆಗೆ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದು ಹಾಗೂ HSBC ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 250ರೂ. ವರೆಗೆ ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ 1,772ರೂ. ಗಳ ಆರಂಭಿಕ ಇಎಮ್‌ಐ ಆಯ್ಕೆ ಸಹ ಲಭ್ಯ.


Click it and Unblock the Notifications








