Home
ಸುದ್ದಿಜಾಲ

ಹೊಸ ಗೂಗಲ್‌ ಪಿಕ್ಸಲ್‌ ಫೋನ್‌ ಖರೀದಿಗೆ ಈ ಆಫರ್‌ ಬೆಸ್ಟ್‌;..ಸಖತ್ ಡಿಸ್ಕೌಂಟ್‌!

ಜನಪ್ರಿಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮಾರಾಟ ಮೇಳ ಚಾಲ್ತಿ ಇದ್ದು, ಈ ಸೇಲ್‌ನಲ್ಲಿ ಗೂಗಲ್‌ ಪಿಕ್ಸಲ್‌ 7a ಫೋನ್ ಫೋನ್‌ ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 8GB RAM ಮತ್ತು 128 GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ನಲ್ಲಿ ಬಿಗ್ ಸೇವಿಂಗ್ ಡೇಸ್ ಮಾರಾಟ ಲೈವ್ ಇದೆ. ಈ ಸೇಲ್‌ನಲ್ಲಿ ಗೂಗಲ್‌ ಪಿಕ್ಸಲ್‌ 7a ಫೋನ್‌ ಶೇ. 15% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 36,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಇತರೆ ಬ್ಯಾಂಕ್‌ ಆಫರ್‌ಗಳನ್ನು ಪಡೆದರೆ, ಈ ಫೋನ್‌ ಅನ್ನು ಮತ್ತಷ್ಟು ರಿಯಾಯಿತಿ ಬೆಲೆಗೆ ಖರೀದಿಸಲು ಚಾನ್ಸ್‌ ಇದೆ.

ಹೊಸ ಗೂಗಲ್‌ ಪಿಕ್ಸಲ್‌ ಫೋನ್‌ ಖರೀದಿಗೆ ಈ ಆಫರ್‌ ಬೆಸ್ಟ್‌;..ಸಖತ್ ಡಿಸ್ಕೌಂಟ್‌!

ಅಂದಹಾಗೆ ಗೂಗಲ್‌ ಸಂಸ್ಥೆಯ ಪಿಕ್ಸಲ್‌ 7a ಫೋನ್‌ ಟೆನ್ಸರ್ G2 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದ್ದು, ಜೊತೆಗೆ 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇನ್ನು ಇದರ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ 7a ಫೀಚರ್ಸ್‌ ಹೀಗಿವೆ

ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ 6.1 ಇಂಚಿನ OLED ಡಿಸ್‌ಪ್ಲೇ ಪಡೆದಿದ್ದು, ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ಗೆ ಸಪೋರ್ಟ್‌ ಅನ್ನು ಹೊಂದಿದೆ. ಹಾಗೆಯೇ ಇದು 90Hz ರಿಫ್ರೆಶ್ ರೇಟ್‌ ಆಯ್ಕೆ ಹೊಂದಿದ್ದು, ಈ ಫೋನಿನಲ್ಲಿ ಇದ್ದ 60Hz ರಿಫ್ರೆಶ್ ರೇಟ್‌ಗಿಂತ ಅಧಿಕ ಅಪ್‌ಗ್ರೇಡ್ ಸೌಲಭ್ಯ ಇದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾಗಾಗಿ ಮುಂಭಾಗದಲ್ಲಿ ಸಾಮಾನ್ಯ ಪನ್-ಹೋಲ್ ವಿನ್ಯಾಸದ ಆಯ್ಕೆ ನೀಡಲಾಗಿದೆ.

ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ ಟೆನ್ಸರ್ G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದ್ದು, ಇದರೊಂದಿಗೆ 5G ಫೋನ್ ಆಂಡ್ರಾಯ್ಡ್‌ 13 ಓಸ್‌ ಸಪೋರ್ಟ್‌ ಇದೆ. ಅಲ್ಲದೇ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಬೆಂಬಲ ಸಹ ಒಳಗೊಂಡಿದೆ. ಇದರೊಂದಿಗೆ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಕಾಣಬಹುದಾಗಿದೆ.

ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ 64 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 13 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್‌ ಸಹ ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಈ ಫೋನ್‌ ಹೊಂದಿದೆ.

ಗೂಗಲ್‌ ಪಿಕ್ಸಲ್‌ 7a ಫೋನ್‌ 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್‌ ಸೌಲಭ್ಯ ಕೂಡಾ ಇದ್ದು, ವಾಟರ್‌ ರೆಸಿಸ್ಟನ್ಸ್‌ಗಾಗಿ IP67 ರೇಟಿಂಗ್‌ ಆಯ್ಕೆ ಪಡೆದುಕೊಂಡಿದೆ.

ಗೂಗಲ್‌ ಪಿಕ್ಸಲ್‌ 7a ಫೋನ್‌ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ ಚಾರ್ಕೋಲ್‌, ಕೋರಲ್, ಸೀ ಹಾಗೂ ಸ್ನೋ ಕಲರ್ ಆಯ್ಕೆಗಳಲ್ಲಿ ಲಭ್ಯ ಇದ್ದು, ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Google Pixel 7a available at Huge Discount price on flipkart. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+