Home
ಸುದ್ದಿಜಾಲ

ಗೂಗಲ್‌ನ ಈ ಅತ್ಯುತ್ತಮ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಹಬ್ಬಗಳು, ವಿಶೇಷ ದಿನಗಳು ಬಂದರೆ ಇ ಕಾಮರ್ಸ್‌ ತಾಣಗಳು ಒಂದಿಲ್ಲೊಂದು ಆಫರ್‌ ಘೋಷಣೆ ಮಾಡುತ್ತ ಗ್ರಾಹಕರನ್ನು ಸೆಳೆಯುತ್ತವೆ. ಅದೇ ರೀತಿ ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ ಹಬ್ಬದ ಸೇಲ್‌ ಚಾಲ್ತಿ ಇದೆ. ಈ ಮಾರಾಟ ಮೇಳದಲ್ಲಿ ಗೂಗಲ್‌ ಸಂಸ್ಥೆಯು ಪಿಕ್ಸಲ್‌ 7a ಸ್ಮಾರ್ಟ್‌ಫೋನ್‌ ಬೊಂಬಾಟ್‌ ರಿಯಾಯಿತಿ ಪಡೆದಿದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ ಶೇ. 18% ರಷ್ಟು ನೇರ ರಿಯಾಯಿತಿ ಪಡೆದಿದ್ದು, 8 GB RAM + 128 GB ವೇರಿಯಂಟ್‌ ಫೋನ್‌ ಅನ್ನು 35,999ರೂ. ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಇದಲ್ಲದೇ ಆಯ್ದ ಬ್ಯಾಂಕ್ ಕೊಡುಗೆ, ಎಕ್ಸ್‌ಚೇಂಜ್‌ ಕೊಡುಗೆ ಹಾಗೂ ಇಎಮ್‌ಐ ಕೊಡುಗೆಗಳು ಕೂಡಾ ದೊರೆಯುತ್ತವೆ.

ಗೂಗಲ್‌ನ ಈ ಅತ್ಯುತ್ತಮ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಇನ್ನು ಈ ಮೊಬೈಲ್‌ ಟೆನ್ಸರ್ G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಗೂಗಲ್‌ ಪಿಕ್ಸಲ್‌ 7a ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿವರ ಹೀಗಿದೆ

ಗೂಗಲ್‌ ಪಿಕ್ಸಲ್‌ 7a ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ಗೆ ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದು 90Hzರಿಫ್ರೆಶ್ ರೇಟ್‌ ಆಯ್ಕೆ ಹೊಂದಿದ್ದು, ಪಿಕ್ಸಲ್‌ 6a ನಲ್ಲಿ ಇದ್ದ 60Hz ರಿಫ್ರೆಶ್ ರೇಟ್‌ಗಿಂತ ಅಧಿಕ ಅಪ್‌ಗ್ರೇಡ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾಗಾಗಿ ಮುಂಭಾಗದಲ್ಲಿ ಸಾಮಾನ್ಯ ಪನ್-ಹೋಲ್ ವಿನ್ಯಾಸದ ಆಯ್ಕೆ ಒದಗಿಸಲಾಗಿದೆ.

ಗೂಗಲ್‌ನ ಈ ಅತ್ಯುತ್ತಮ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಬಲವಾದ ಪ್ರೊಸೆಸರ್ ಸಾಮರ್ಥ್ಯ

ಗೂಗಲ್‌ ಪಿಕ್ಸಲ್‌ 7a ಸ್ಮಾರ್ಟ್‌ಫೋನ್ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದ್ದು, ಇದರ ಜೊತೆಗೆ 5G ಫೋನ್ ಆಂಡ್ರಾಯ್ಡ್‌ 13 ಓಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇದರೊಂದಿಗೆ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಬೆಂಬಲ ಸಹ ಒಳಗೊಂಡಿದೆ. ಇನ್ನುಳಿದಂತೆ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆನ್ಸಾರ್‌ ಮಾಹಿತಿ ಹೀಗಿದೆ

ಗೂಗಲ್‌ ಪಿಕ್ಸಲ್‌ 7a ಸ್ಮಾರ್ಟ್‌ಫೋನ್ 64 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 13 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್‌ ಸಹ ಪಡೆದುಕೊಂಡಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಈ ಫೋನ್‌ ಪಡೆದುಕೊಂಡಿದೆ.

ಗೂಗಲ್‌ನ ಈ ಅತ್ಯುತ್ತಮ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ ಸೌಲಭ್ಯಗಳ ಮಾಹಿತಿ

ಗೂಗಲ್‌ ಪಿಕ್ಸಲ್‌ 7a ಫೋನ್‌ 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 18W ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್‌ ಸೌಲಭ್ಯ ಕೂಡಾ ಇದ್ದು, ವಾಟರ್‌ ರೆಸಿಸ್ಟನ್ಸ್‌ಗಾಗಿ IP67 ರೇಟಿಂಗ್‌ ಆಯ್ಕೆ ಹೊಂದಿದೆ.

ಮೆಮೊರಿ ಹಾಗೂ ಕಲರ್ ಆಯ್ಕೆ

ಗೂಗಲ್‌ ಪಿಕ್ಸಲ್‌ 7a ಫೋನ್‌ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಇದಲ್ಲದೇ ಈ ಫೋನ್‌ ಚಾರ್ಕೋಲ್‌, ಕೋರಲ್, ಸೀ ಹಾಗೂ ಸ್ನೋ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Google Pixel 7a now available at reduced price in flipkart. check offer price, specifications and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+