Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ 7a ಫೋನ್‌ನ ಫೀಚರ್ಸ್‌ ಲೀಕ್‌; ಲಾಂಚ್‌ ಯಾವಾಗ!?

ಟೆಕ್‌ ದೈತ್ಯ ಗೂಗಲ್‌ನ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಕೈ ಬೀಸಿ ಕರೆಯುವ ಫೀಚರ್ಸ್‌ಗಳನ್ನು ಹೊಂದಿವೆ. ಅದರಂತೆ ಗೂಗಲ್‌ ಪಿಕ್ಸೆಲ್‌ 6 ಫೋನ್‌ಗಳಿಗೆ ಇತ್ತೀಚೆಗೆ ಆಫರ್‌ ಬೆಲೆ ಘೋಷಣೆ ಮಾಡಲಾಗಿದ್ದು, ಇದರ ನಡುವೆ ಈಗ ಗೂಗಲ್‌ ಪಿಕ್ಸೆಲ್‌ 7a ಫೋನ್‌ಗಳನ್ನು ಲಾಂಚ್‌ ಮಾಡಲು ಗೂಗಲ್ ಮುಂದಾಗಿದೆ.

ಹೌದು, ಗೂಗಲ್‌ ಪಿಕ್ಸೆಲ್‌ 7a (Google Pixel 7a ) ಸ್ಮಾರ್ಟ್‌ಫೋನ್‌ ಅನ್ನು ಮೇ ತಿಂಗಳಲ್ಲಿ ಲಾಂಚ್‌ ಮಾಡಲು ಗೂಗಲ್‌ ಮುಂದಾಗಿದೆಯಾದರೂ ಈ ಫೋನ್‌ನ ಬಗ್ಗೆ ಈಗಲೇ ಟೆಕ್‌ ವಲಯದಲ್ಲಿ ಹಲವು ವರದಿಗಳು ಹರಿದಾಡುತ್ತಿವೆ. ಅದರಂತೆ ಈ ಫೋನ್ ವಾಯರ್‌ಲೆಸ್‌ ಚಾರ್ಜಿಂಗ್‌ ನೊಂದಿಗೆ ಕಂಡುಬರಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಲೀಕ್‌ ಆದ ಮಾಹಿತಿ ಪ್ರಕಾರ ಈ ಫೋನ್‌ ಏನೆಲ್ಲಾ ಪ್ರಮುಖ ಫೀಚರ್ಸ್‌ಗಳನ್ನು ಹೊಂದಿರಬಹುದು ಎನ್ನುವುದನ್ನು ನೋಡೋಣ ಬನ್ನಿ.

ಗೂಗಲ್‌ ಪಿಕ್ಸೆಲ್‌ 7a ಫೋನ್‌ನ ಫೀಚರ್ಸ್‌ ಲೀಕ್‌; ಲಾಂಚ್‌ ಯಾವಾಗ!?

ಗೂಗಲ್‌ ಪಿಕ್ಸೆಲ್‌ 7a ನ ಪ್ರಮುಖ ಫೀಚರ್ಸ್‌

ಟಿಪ್‌ಸ್ಟರ್ ಮಾಹಿತಿ ಪ್ರಕಾರ ಗೂಗಲ್‌ ಪಿಕ್ಸೆಲ್‌ 7a ಸ್ಮಾರ್ಟ್‌ಫೋನ್ 6.1 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಎಲ್‌ಇಡಿ ಲೈಟ್ಸ್‌ನೊಂದಿಗೆ ಪಂಚ್ ಹೋಲ್ ಆಯ್ಕೆಯ ಡಿಸ್‌ಪ್ಲೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ಈ ಫೋನ್ ಪಿಕ್ಸೆಲ್ 7 ಸೀರೀಸ್‌ನಲ್ಲಿ ಕಂಡು ಬಂದಿರುವ ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದ್ದು, ಕನಿಷ್ಠ 6GBRAM ಹಾಗೂ 128GB ಇಂಟರ್‌ ಸ್ಟೋರೇಜ್ ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.

ಇದರ ಕ್ಯಾಮೆರಾ ಫೀಚರ್ಸ್‌ಗಳ ಕಣ್ಣಾಡಿಸುವುದಾದರೆ ಈ ಫೋನ್ 64MP ಸೋನಿ IMX787 ಸೆನ್ಸರ್‌ ಹಾಗೂ 12MP ಸೆಕೆಂಡರಿ ಸೆನ್ಸರ್ ನೊಂದಿಗೆ ರಿಯರ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಸೆಲ್ಫಿ ಕ್ಯಾಮೆರಾದ ಬಗ್ಗೆ ಯಾವುದೇ ಮಾಹಿತಿ ಲೀಕ್ ಆಗದಿದ್ದರೂ ಸಹ ಇದು 10.8MP ಕ್ಯಾಮೆರಾ ಆಯ್ಕೆ ಹೊಂದಿರಬಹುದು ಎನ್ನಲಾಗಿದೆ. ಹಾಗೆಯೇ ಕ್ಯಾಮೆರಾ ವಿಚಾರದಲ್ಲಿ ಪಿಕ್ಸೆಲ್‌ 7 ಪ್ರೊ ನಂತೆಯೇ ಕಾಣಿಸಿಕೊಳ್ಳಬಹುದು ಎಂದೂ ಸಹ ಹೇಳಲಾಗುತ್ತಿದೆ.

ಗೂಗಲ್‌ ಪಿಕ್ಸೆಲ್‌ 7a ಫೋನ್‌ನ ಫೀಚರ್ಸ್‌ ಲೀಕ್‌; ಲಾಂಚ್‌ ಯಾವಾಗ!?

ಇನ್ನುಳಿದಂತೆ ಈ ಫೋನ್ ಆಂಡ್ರಾಯ್ಡ್ 13 ನಲ್ಲಿ ರನ್‌ ಆಗಲಿದ್ದು, 5W ವಾಯರ್‌ಲೆಸ್‌ ಚಾರ್ಜಿಂಗ್ ನ ಬೆಂಬಲ ಪಡೆದಿದೆ ಎಂದು ತೋರುತ್ತದೆ. ಜೊತೆಗೆ ಫೋನ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ಲಸ್‌ಗೆ ಹೋಲುವ ರಿಯರ್‌ ಶೈಲಿಯನ್ನೇ ಈ ಫೋನ್‌ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಫೋನ್‌ ಅನ್ನು ಮೇ 10 ರಂದು ಗೂಗಲ್‌ I/O 2023 ನಲ್ಲಿ ಘೋಷಣೆ ಮಾಡಲು ಗೂಗಲ್‌ ಮುಂದಾಗಿದೆ ಎಂದು ತಿಳಿದುಬಂದಿದೆ.

ಗೂಗಲ್‌ ಪಿಕ್ಸೆಲ್‌ 7 ಸರಣಿ ಸ್ಮಾರ್ಟ್‌ಫೋನ್‌

ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 7 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಅಕ್ಟೋಬರ್‌ 2022 ರಲ್ಲಿ ಲಾಂಚ್‌ ಮಾಡಲಾಗಿದ್ದು, ಇದರಲ್ಲಿ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಫೋನ್‌ಗಳು ಟೆನ್ಸಾರ್‌ G2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಪಿಕ್ಸೆಲ್ 7 ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಪಿಕ್ಸೆಲ್ 7 ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದೆ.

ಗೂಗಲ್‌ ಪಿಕ್ಸೆಲ್‌ 7a ಫೋನ್‌ನ ಫೀಚರ್ಸ್‌ ಲೀಕ್‌; ಲಾಂಚ್‌ ಯಾವಾಗ!?

ಭಾರತದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ 59,999ರೂ. ಬೆಲೆಯನ್ನು ಹೊಂದಿದ್ದು, ಇದು ಸ್ನೋ, ಅಬ್ಸಿಡಿಯನ್ ಮತ್ತು ಲೆಮೊನ್‌ಗ್ರಾಸ್ ಕಲರ್‌ ಅನ್ನು ಹೊಂದಿದೆ. ಹಾಗೆಯೇ ಗೂಗಲ್‌ ಪಿಕ್ಸೆಲ್‌ 7 ಪ್ರೊ ಸ್ಮಾರ್ಟ್‌ಫೋನ್‌ 84,999ರೂ.ಗಳ ಬೆಲೆಯನ್ನು ಹೊಂದಿದ್ದು, ಇದು ಹ್ಯಾಝೆಲ್, ಅಬ್ಸಿಡಿಯನ್ ಮತ್ತು ಸ್ನೋ ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Google is planning to launch the Google Pixel 7a smartphone in May and some features of this phone have been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+