ಭಾರತದಲ್ಲಿ ಶೀಘ್ರವೇ ಪಿಕ್ಸೆಲ್ 8 ಹಾಗೂ ಪಿಕ್ಸೆಲ್ 8 ಪ್ರೊ ಲಾಂಚ್: ಬೆಲೆ ಎಷ್ಟು ಗೊತ್ತಾ!?
ಗೂಗಲ್‌ನ ಮುಂದಿನ ಸರಣಿಯ ಪಿಕ್ಸೆಲ್ ಫೋನ್‌ಗಳ (Google Pixel Phone) ಅನಾವರಣದ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಅಂದರೆ ಪಿಕ್ಸೆಲ್ 8 ಪ್ರೊ ಮತ್ತು ಪಿಕ್ಸೆಲ್ 8 ಭಾರತದಲ್ಲಿ ಲಾಂಚ್ ಆಗಲಿದ್ದು, ಈಗಾಗಲೇ ಈ ಫೋನ್‌ಗಳ ಕೆಲವು ಲೀಕ್ ಫೀಚರ್ಸ್ ವರದಿಯಾಗಿವೆ. ಅದರಂತೆ ಈಗ ಈ ಫೋನ್‌ಗಳ ಬೆಲೆ ಬಗ್ಗೆಯೂ ಮಾಹಿತಿ ತಿಳಿದುಬಂದಿದೆ.
ಹೌದು, ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8 ಪ್ರೊ ಮತ್ತು ಪಿಕ್ಸೆಲ್ 8 (Google Pixel 8 Pro, Pixel 8) ಕೆಲವೇ ತಿಂಗಳಲ್ಲಿ ಲಾಂಚ್ ಆಗಲಿವೆ ಎನ್ನಲಾಗಿದೆ. 3 ಪ್ರಮುಖ ಪೀಳಿಗೆಯ ಪಿಕ್ಸೆಲ್ ಸರಣಿಗಳನ್ನು ಕೈಬಿಟ್ಟ ನಂತರ ಈಗ ಗೂಗಲ್ ತನ್ನ ಪ್ರಮುಖ ಪಿಕ್ಸೆಲ್ 7 ಸರಣಿಯನ್ನು ಇಲ್ಲಿ ಘೋಷಣೆ ಮಾಡಿತ್ತು. ಈಗ ಇದರ ಮುಂದಿನ ಸರಣಿಯ ಫೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡುವ ಬಗ್ಗೆ ತಿಳಿಸಲಾಗಿದ್ದು, ಈ ಫೋನ್‌ಗಳ ನಿರೀಕ್ಷಿತ ಬೆಲೆ ಹಾಗೂ ಕೆಲವು ಲೀಕ್ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿರಿ.

ಪಿಕ್ಸೆಲ್ 8 ಸರಣಿಯ ನಿರೀಕ್ಷಿತ ಬೆಲೆ: ದಿ ಟೆಕ್ ಔಟ್‌ಲುಕ್ ಹಾಗೂ ಟಿಪ್‌ಸ್ಟಾಲ್ ಪರಾಸ್ ಗುಗ್ಲಾನಿ ಪ್ರಕಾರ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಯುರೋಪ್‌ನಲ್ಲಿ ಗಣನೀಯವಾಗಿ ಹೆಚ್ಚಿನ ಬೆಲೆಗಳನ್ನು ಹೊಂದಿರಬಹುದು ಎನ್ನಲಾಗಿದೆ. ಆದರೆ, ಭಾರತದಲ್ಲಿ ಈ ಬೆಲೆಗಳು ಸಾಮಾನ್ಯವಾಗಿ ಯುರೋಪಿಯನ್ ಮಾರುಕಟ್ಟೆಗಳಿಗಿಂತ ಸ್ವಲ್ಪ ಕಡಿಮೆ ಇರಲಿದೆ.
128GB ಸ್ಟೋರೇಜ್ ಹೊಂದಿರುವ ಪಿಕ್ಸೆಲ್ 8 ಗೆ ಟ್ಯಾಕ್ಸ್‌ನೊಂದಿಗೆ EUR 874 ನಿಗದಿ ಮಾಡಲಾಗುತ್ತದೆ ಎನ್ನಲಾಗಿದೆ. ಅಂದರೆ ಭಾರತದಲ್ಲಿ ಸುಮಾರು 78,000ರೂ.ಗಳನ್ನು ಹೊಂದಿರಬಹುದು ಎನ್ನಲಾಗಿದೆ. ಇದರೊಂದಿಗೆ ಟ್ಯಾಕ್ಸ್ ಇಲ್ಲದೆ EUR 710 ಇದ್ದು, ಭಾರತದಲ್ಲಿ ಸುಮಾರು 63,370ರೂ.ಗಳಾಗಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಪಿಕ್ಸೆಲ್ 8 ಪ್ರೊ ಗೆ ಸಂಬಂಧಿಸಿದಂತೆ ಟ್ಯಾಕ್ಸ್ ಒಳಗೊಂಡಂತೆ 128GB ಸ್ಟೋರೇಜ್ ಆಯ್ಕೆಗೆ $1,235 ಇರಲಿದೆ ಎನ್ನಲಾಗಿದೆ. ಅಂದರೆ ಭಾರತದಲ್ಲಿ ಈ ಫೋನ್‌ಗೆ 1,10,220ರೂ.ಗಳ ಬೆಲೆ ಇರಲಿದೆ ಎಂದು ತಿಳಿದುಬಂದಿದೆ.
ಇನ್ನು ಭಾರತದಲ್ಲಿ ಸಾಮಾನ್ಯವಾಗಿ ಮೂಲ ನಿಗದಿತ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸಲಾಗುತ್ತದೆ. ಅಂದರೆ ಯುರೋಪಿನ ತೆರಿಗೆ ವ್ಯವಸ್ಥೆ ಇಲ್ಲಿ ಇಲ್ಲ. ಈ ಕಾರಣಕ್ಕಾಗಿಯೇ ಪಿಕ್ಸೆಲ್ 8 ಬೆಲೆ 60,000ರೂ.ಗಳಿಂದ ರಿಂದ 65,000 ರೂ.ಗಳ ವರೆಗೆ ಬೆಲೆ ಇರಬಹುದು ಎನ್ನಲಾಗಿದೆ. ಭಾರತದಲ್ಲಿ ಪಿಕ್ಸೆಲ್ 7 ಫೋನ್ ಅನ್ನು 59,999 ರೂಗಳಿಗೆ ಮತ್ತು ಪಿಕ್ಸೆಲ್ 7 ಪ್ರೊ ಅನ್ನು ರೂ 84,999 ಕ್ಕೆ ಅನಾವರಣ ಮಾಡಲಾಗಿದೆ. ಇನ್ನು ಹೊಸ ಪಿಕ್ಸೆಲ್ 8 ಸರಣಿಯು ಬಗ್ಗೆ ಅಕ್ಟೋಬರ್ 8 ರಂದು ಬೆಲೆ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪಿಕ್ಸೆಲ್ 8 ಪ್ರೀ ಬುಕ್ಕಿಂಗ್: ಈ ಫೋನ್‌ಗಳನ್ನು ಖರೀದಿ ಮಾಡುವವರಿಗೆ ಸಂತಸದ ಸುದ್ದಿ ಏನೆಂದರೆ ಮುಂಗಡ ಕೋರಿಕೆ ಆಯ್ಕೆ. ಬಿಡುಗಡೆ ಕಾರ್ಯಕ್ರಮದ ಮರುದಿನದಿಂದ ಫ್ಲಿಪ್‌ಕಾರ್ಟ್ ಮೂಲಕ ಈ ಪ್ರಕ್ರಿಯೆ ಆರಂಭ ಆಗಲಿದೆ ಎಂದು ಗೂಗಲ್ ಇಂಡಿಯಾ ದೃಢಪಡಿಸಿದೆ. ಹಾಗಿದ್ರೆ, ಈ ಫೋನ್‌ನ ಕೆಲವು ಲೀಕ್ ಫೀಚರ್ಸ್ ಅನ್ನು ನೋಡೋಣ ಬನ್ನಿ.
ಗೂಗಲ್ ಪಿಕ್ಸೆಲ್ 8 ಫೋನ್ 6.17 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆಯಲಿದೆ ಎನ್ನಲಾಗಿದೆ. ಜೊತೆಗೆ 1,400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 427 ppi ಅನ್ನು ಹೊಂದಿರಲಿದೆ ಎಂಬ ಮಾಹಿತಿ ಇದ್ದು, ಮುಂದಿನ ಪೀಳಿಗೆಯ ಪ್ರಮುಖ ಟೆನ್ಸರ್ G3 ಚಿಪ್‌ಸೆಟ್‌ನಲ್ಲಿ ರನ್ ಆಗುವ ನಿರೀಕ್ಷೆಯಿದೆ.
ಇದರೊಂದಿಗೆ ಪಿಕ್ಸೆಲ್ 8 ಫೋನ್ 50 ಮೆಗಾಪಿಕ್ಸೆಲ್ GN2 ಪ್ರಾಥಮಿಕ ಸೆನ್ಸರ್, 12 ಮೆಗಾಪಿಕ್ಸೆಲ್ IMX386 ಅಲ್ಟ್ರಾ-ವೈಡ್ ಸೆನ್ಸರ್ ಮತ್ತು ಟೈಮ್-ಆಫ್-ಫ್ಲೈಟ್ (ToF) ಸೆನ್ಸರ್ ಅನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದ್ದು, ಸುಧಾರಿತ HDR ಸೌಲಭ್ಯ ಇರಲಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ 30fps ನಲ್ಲಿ 8K ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನೂ ಸಹ ಈ ಫೋನ್ ಹೊಂದಿರಬಹುದು ಎಂದು ನಂಬಲಾಗಿದೆ. ಜೊತೆಗೆ ಸೆಲ್ಫಿಗಾಗಿ 11 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಉಳಿದಂತೆ ಈ ಫೋನ್ 4,485mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿರಲಿದೆ ಎನ್ನಲಾಗಿದ್ದು, 24W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂಬ ವದಂತಿಗಳಿವೆ. ಕಂಪನಿಯ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಫೋನ್‌ನೊಂದಿಗೆ ಚಾರ್ಜರ್ ನೀಡುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ 20W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ ಎಂದು ಶಂಕಿಸಲಾಗಿದೆ.
ಪಿಕ್ಸೆಲ್ 8 ಪ್ರಿ ನಿರೀಕ್ಷಿತ ಫೀಚರ್ಸ್: ಈ ಫೋನ್ 6.7 ಇಂಚಿನ QHD+ LTPO OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದೆ ಎನ್ನಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 11 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 50 ಮೆಗಾಪಿಕ್ಸೆಲ್ OIS ಸಕ್ರಿಯಗೊಳಿಸಿದ ಪ್ರಾಥಮಿಕ ಸೆನ್ಸರ್, 64 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 49-ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಸೇರಿದಂತೆ ಮೂರು ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದಿರಬಹುದು ಎಂದು ತಿಳಿದುಬಂದಿದೆ.

ಇದರೊಂದಿಗೆ ಈ ಫೋನ್ ಗೂಗಲ್ ಟೆನ್ಸರ್ G3 SoC ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದ್ದು, 27W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 4,950mAh ಸಾಮರ್ಥ್ಯದ ಬ್ಯಾಟರಿ ಹೊಂದಿರಬಹುದು ಎಂದು ತಿಳಿದುಬಂದಿದೆ. ಈ ಫೋನ್‌ನಲ್ಲೀ ಸಹ ಚಾರ್ಜರ್ ಅನ್ನು ಬಾಕ್ಸ್‌ನಲ್ಲಿ ಸೇರಿಸುವುದಿಲ್ಲ ಎನ್ನಲಾಗಿದೆ. ಉಳಿದಂತೆ 12GB RAM, 256GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದೆ ಎಂದು ಲೀಕ್ ಆದ ಮಾಹಿತಿಗಳಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications








