ಗೂಗಲ್ ಸಂಸ್ಥೆಯ ಈ ಫೋನ್ ಇದೀಗ ಸಖತ್ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ!
ಟೆಕ್ ಮಾರುಕಟ್ಟೆಯಲ್ಲಿ ಗೂಗಲ್ ದೈತ್ಯ ಸಂಸ್ಥೆಯಾಗಿ ಎಂದು ಗುರುತಿಸಿಕೊಂಡಿದ್ದು, ಈ ಕಂಪನಿಯು ಕೆಲವು ಸ್ಮಾರ್ಟ್‌ಫೋನ್‌ಗಳ ಮೂಲಕ ಸಹ ಗ್ರಾಹಕರನ್ನು ಆಕರ್ಷಿಸಿದೆ. ಮುಖ್ಯವಾಗಿ ಪಿಕ್ಸಲ್ ಸರಣಿಯ ಫೋನ್‌ಗಳು ಫೀಚರ್ಸ್ ಹಾಗೂ ಕ್ಯಾಮೆರಾ ಆಯ್ಕೆಯಿಂದ ಗಮನ ಸೆಳೆದಿದೆ. ಆ ಪೈಕಿ ಇದೀಗ ಗೂಗಲ್ ಪಿಕ್ಸೆಲ್ 8 ಫೋನ್ ಫ್ಲಿಪ್‌ಕಾರ್ಟ್ ತಾಣದಲ್ಲಿ ಸಖತ್ ಬೆಲೆ ಇಳಿಕೆ ಪಡೆದಿದ್ದು, ಮತ್ತಷ್ಟು ಗಮನ ಸೆಳೆದಿದೆ.
ಹೌದು, ಅಮೆಜಾನ್ ಆನ್‌ಲೈನ್ ಫ್ಲಿಪ್‌ಕಾರ್ಟ್ ನಲ್ಲಿ ಗೂಗಲ್ ಪಿಕ್ಸೆಲ್ 8 (8 GB RAM + 128 GB) ಮೊಬೈಲ್ 75,999ರೂ. ಗಳ ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಕೆಲವು ಆಯ್ದ ಬ್ಯಾಂಕ್ ಕೊಡುಗೆ ಹಾಗೂ ಕ್ಯಾಶ್‌ಬ್ಯಾಕ್‌ಗಳು ಕೂಡಾ ಲಭ್ಯ ಆಗಲಿವೆ.

ಅಂದಹಾಗೆ ಗೂಗಲ್‌ನ ಈ ಮೊಬೈಲ್ ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಬಲ ಪಡೆದಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್ ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ನಿಂದ (Google Tensor 3 chipset) ಕೆಲಸ ನಿರ್ವಹಿಸಲಿದೆ. ಹಾಗಾದರೆ ಗೂಗಲ್ ಪಿಕ್ಸೆಲ್ 8 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗೂಗಲ್ ಪಿಕ್ಸೆಲ್ 8 ಫೋನಿನ ಫೀಚರ್ಸ್
ಗೂಗಲ್ ಸಂಸ್ಥೆಯ ಈ ಫೋನ್ 6.2 ಇಂಚಿನ ಡಿಸ್ಪ್ಲೇ ಜೊತೆಗೆ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120 Hz ರಿಫ್ರೆಶ್ ರೇಟ್, ಕನಿಷ್ಠ ಬೆಜೆಲ್‌ಗಳು ಮತ್ತು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಉತ್ತಮ ಬ್ರೈಟ್ನೆಸ್ ಅನ್ನು ನೀಡಲಿದೆ. ಇದರ ಜೊತೆಗೆ ಈ ಫೋನ್ ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ನಿಂದ (Google Tensor 3 chipset) ಕೆಲಸ ನಿರ್ವಹಿಸಲಿದೆ.

ಇನ್ನು ಉಳಿದಂತೆ ಈ ಫೋನ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಇದ್ದು, 1.5 ಗಂಟೆಗಳಲ್ಲಿ ಪಿಕ್ಸೆಲ್ 8 ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಹಾಗೆಯೇ 50ಎಂಪಿ ಮುಖ್ಯ ಕ್ಯಾಮರಾ ಆಯ್ಕೆ ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ. ಇದರ ಹೊಸ ಮ್ಯಾಕ್ರೋ ಫೋಕಸ್ ಫೀಚರ್ಸ್ ಕ್ಲೋಸ್-ಅಪ್ ಫೋಟೋಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
ಪಿಕ್ಸೆಲ್ 8 ಪ್ರೊ - ಫೀಚರ್ಸ್ ಹೀಗಿವೆ
ಗೂಗಲ್ ಸಂಸ್ಥೆಯ ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು ಬರೋಬ್ಬರಿ 2400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಅಧಿಕ ಬ್ರೈಟ್ನೆಸ್ ಸೌಲಭ್ಯ ಈ ಫೋನ್‌ನಲ್ಲಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದುಕೊಂಡಿದ್ದು, ಇದರ ಅಲ್ಯೂಮಿನಿಯಂ ಫ್ರೇಮ್ ಫೋನ್ ಅನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ.

ಅದೇ ರೀತಿ ಈ ಫೋನ್ ಗೂಗಲ್ ಟೆನ್ಸರ್ G3 (Google Tensor G3 4 nm) ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಮೂರು ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ 50 MP + 48 MP+48 MP ಸೆನ್ಸರ್ ಇದ್ದು, ಡ್ಯುಯಲ್-ಎಲ್ಇಡಿ ಫ್ಲ್ಯಾಶ್, ಪಿಕ್ಸೆಲ್ ಶಿಫ್ಟ್, ಅಲ್ಟ್ರಾ-ಎಚ್‌ಡಿಆರ್, ಪನೋರಮಾ, ಬೆಸ್ಟ್ ಟೇಕ್ ಫೀಚರ್ಸ್‌ಗಳನ್ನು ಈ ಸೆನ್ಸರ್ ಸೌಲಬ್ಯ ಪಡೆದಿದೆ. ಅಷ್ಟೇ ಅಲ್ಲದೆ ಸೆಲ್ಫಿಗಾಗಿ 10.5 ಎಂಪಿ ಕ್ಯಾಮರಾ ಸೆನ್ಸರ್ ಸೌಲಭ್ಯ ಕೂಡಾ ನೀಡಲಾಗಿದೆ.


Click it and Unblock the Notifications








