Home
ಸುದ್ದಿಜಾಲ

ಗೂಗಲ್‌ನ ಈ ಹೈ ಎಂಡ್‌ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಗೂಗಲ್‌ ಪಿಕ್ಸೆಲ್‌ 8 ಫೋನ್‌ ಗೂಗಲ್‌ ಸಂಸ್ಥೆಯು ಇತ್ತೀಚಿನ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ. ಈ ಫೋನ್‌ ಇದೀಗ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಬಲು ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಫೋನ್‌ ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯವನ್ನು ಪಡೆದಿದ್ದು, ಇದರ ಜೊತೆಗೆ 50 ಎಂಪಿ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮರಾ ಸೌಲಭ್ಯ ಸಹ ಪಡೆದುಕೊಂಡಿದೆ. ಫೀಚರ್ಸ್‌ ಜೊತೆಗೆ ಈ ಫೋನ್‌ ಡಿಸೈನ್‌ನಿಂದಲು ಆಕರ್ಷಕ ಲುಕ್ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾಟ್‌ ತಾಣದಲ್ಲಿ ಗೂಗಲ್‌ ಪಿಕ್ಸೆಲ್‌ 8 ( Google Pixel 8 ) ಸ್ಮಾರ್ಟ್‌ಫೋನ್‌ ಶೇ. 18% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಇನ್ನು ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 61,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಕೆಲವು ಆಯ್ದ ಬ್ಯಾಂಕ್‌ ಕೊಡುಗೆಗಳು ಸಹ ಖರೀದಿದಾರರಿಗೆ ಲಭ್ಯ ಆಗಲಿವೆ.

ಗೂಗಲ್‌ನ ಈ ಹೈ ಎಂಡ್‌ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಅಂದಹಾಗೆ ಈ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದರ ಸೆಲ್ಪಿ ಕ್ಯಾಮೆರಾವು 10.5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗಾದರೆ ಗೂಗಲ್‌ ಪಿಕ್ಸೆಲ್‌ 8 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸೆಲ್‌ 8 ಫೀಚರ್ಸ್‌ ಮಾಹಿತಿ

ಗೂಗಲ್‌ ಪಿಕ್ಸೆಲ್‌ 8 ಫೋನ್ 6.2 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಇದು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 120 Hz ರಿಫ್ರೆಶ್ ರೇಟ್, ಕನಿಷ್ಠ ಬೆಜೆಲ್‌ಗಳು ರಚನೆ ಮತ್ತು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಉತ್ತಮ ಬ್ರೈಟ್ನೆಸ್‌ ಅನ್ನು ಒದಗಿಸಲಿದೆ. ಇದರ ಜೊತೆಗೆ ಈ ಫೋನ್‌ ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ನಿಂದ (Google Tensor 3 chipset) ಕೆಲಸ ಮಾಡಲಿದೆ.

ಹಾಗೆಯೇ ಈ ಫೋನ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಇದ್ದು, 1.5 ಗಂಟೆಗಳಲ್ಲಿ ಪಿಕ್ಸೆಲ್ 8 ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಅಲ್ಲದೇ ಈ ಫೋನಿನ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮರಾವು ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ. ಇದರ ಹೊಸ ಮ್ಯಾಕ್ರೋ ಫೋಕಸ್ ಫೀಚರ್ಸ್‌ ಕ್ಲೋಸ್-ಅಪ್ ಫೋಟೋಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

ಪಿಕ್ಸೆಲ್‌ 8 ಪ್ರೊ ಫೀಚರ್ಸ್‌ ಮಾಹಿತಿ

ಪಿಕ್ಸೆಲ್‌ 8 ಪ್ರೊ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಹಾಗೆಯೇ ಇದು 2400 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಒಳಗೊಂಡಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದುಕೊಂಡಿದೆ.ಇನ್ನು ಇದು ಅಲ್ಯೂಮಿನಿಯಂ ಫ್ರೇಮ್ ರಚನೆ ಪಡೆದಿದ್ದು, ಈ ಫೋನ್‌ ಅನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ. ಅದೇ ರೀತಿ ಈ ಫೋನ್ ಗೂಗಲ್ ಟೆನ್ಸರ್ G3 (Google Tensor G3 4 nm) ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಅವುಗಳು ಕ್ರಮವಾಗಿ 50 ಎಂಪಿ + 48 ಎಂಪಿ +48 ಎಂಪಿ ಸೆನ್ಸರ್‌ ಆಗಿವೆ. ಹಾಗೆಯೇ ಡ್ಯುಯಲ್ LED ಫ್ಲ್ಯಾಶ್‌, ಪಿಕ್ಸೆಲ್ ಶಿಫ್ಟ್, ಅಲ್ಟ್ರಾ-HRD, ಪನೋರಮಾ, ಬೆಸ್ಟ್ ಟೇಕ್ ಫೀಚರ್ಸ್‌ಗಳನ್ನು ಈ ಸೆನ್ಸರ್‌ ಸೌಲಭ್ಯ ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 10.5 ಎಂಪಿ ಕ್ಯಾಮರಾ ಸೆನ್ಸರ್‌ ಆಯ್ಕೆ ಇದೆ.

Best Mobiles in India

English summary
Google Pixel 8 gets fabulous discount on Flipkart website. Check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+