Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ 8 ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ!

ಪಿಕ್ಸೆಲ್‌ ಫೋನ್‌ಗಳಿಗೆ (Google Pixel) ಇತ್ತೀಚೆಗೆ ಭಾರೀ ಬೇಡಿಕೆ ಇದೆ. ಈ ಫೋನ್‌ಗಳು ಪ್ರೀಮಿಯಂ ಫೋನ್‌ಗಳನ್ನೇ ಮೀರಿಸುವ ವಿಶೇಷ ಫೀಚರ್ಸ್ ಆಯ್ಕೆ ಪಡೆದಿದ್ದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿವೆ.

ಹೌದು, ಪಿಕ್ಸೆಲ್‌ ಫೋನ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದ್ದು, ಈ ನಡುವೆ ಗೂಗಲ್‌ ಪಿಕ್ಸೆಲ್‌ 8 (Google Pixel 8) ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಮೂಲಕ ಎಂದಿಗಿಂತಲೂ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯ ಇರಲಿದೆ. ಹಾಗಿದ್ರೆ, ಈ ಆಫರ್ ಅನ್ನು ಪಡೆಯುವುದು ಹೇಗೆ?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್‌ ಪಿಕ್ಸೆಲ್‌ 8 ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ!

ಗೂಗಲ್‌ ಪಿಕ್ಸೆಲ್‌ 8 ಗೆ ಆಫರ್: ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 75,999 ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್‌ ನಲ್ಲಿ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ ಈಗ 69,999ರೂ. ಗಳ ಬೆಲೆ ಇದೆ. ಅಲ್ಲದೆ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ಗೆ 82,999 ರೂ.ಗಳ ಬೆಲೆ ಇದ್ದು, ಇದನ್ನು 76,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಈ ವೇಳೆ ಗ್ರಾಹಕರು ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ ತ್ವರಿತ 10,000 ರೂ.ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಒಟ್ಟಾರೆ 16,000 ರೂ.ಗಳಷ್ಟು ಹಣವನ್ನು ಈ ಫೋನ್‌ಗಳ ಮೇಲೆ ಉಳಿಸಬಹುದಾಗಿದೆ. ಇದರಿಂದ ಈ ಫೋನ್‌ ಅನ್ನು ನೀವು 59,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕಾಂಬೊ ಆಫರ್‌ಗಳ ಮೂಲಕ 2,000 ವರೆಗೆ ಹೆಚ್ಚುವರಿ ರಿಯಾಯಿತಿಯನ್ನೂ ಸಹ ಪಡೆಯಬಹುದಾಗಿದೆ.

ಗೂಗಲ್‌ ಪಿಕ್ಸೆಲ್‌ 8 ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ!

ಅಲ್ಲದೆ ಅಪ್‌ಗ್ರೇಡ್ ಮಾಡಲು ಬಯಸುವವರು 56,000 ರೂ.ವರೆಗಿನ ಎಕ್ಸ್‌ಚೇಂಜ್ ಆಫರ್‌ನ ಪ್ರಯೋಜನ ಪಡೆಯಬಹುದಾಗಿದ್ದು, ಆಯ್ದ ಮಾಡೆಲ್‌ಗಳ ಮೇಲೆ ಹೆಚ್ಚುವರಿ 6,000 ರೂ ಗಳ ವಿಶೇಷ ರಿಯಾಯಿತಿ ಸಹ ಇದೆ. ಈ ಮೂಲಕ ಈ ಪ್ರೀಮಿಯಂ ಫೋನ್‌ ಅನ್ನು ಭಾರೀ ಅಗ್ಗದ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಕಡೆಗೂ ಕಣ್ಣಾಯಿಸೋಣ ಬನ್ನಿ.

ಗೂಗಲ್‌ ಪಿಕ್ಸೆಲ್ 8 ಫೀಚರ್ಸ್‌: ಈ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಮತ್ತು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ 6.2-ಇಂಚಿನ ಆಕ್ಟುವಾ ಒಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಗೂಗಲ್‌ನ ಆಂತರಿಕ ಟೆನ್ಸರ್ G3 ಪ್ರೊಸೆಸರ್‌ ಮತ್ತು ಟೈಟಾನ್ M2 ಕೊಪ್ರೊಸೆಸರ್ ಅನ್ನು ಹೊಂದಿದ್ದು, ಸುಗಮ ಕಾರ್ಯಕ್ಷಮತೆ ಮತ್ತು ವರ್ಧಿತ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ.

ಈ ಪಿಕ್ಸೆಲ್ 8 50 ಮೆಗಾಪಿಕ್ಸೆಲ್‌ ಪ್ರೈಮರಿ ಲೆನ್ಸ್‌ನೊಂದಿಗೆ ಕ್ಯಾಮೆರಾ ವಿಭಾಗದಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ. ಹಾಗೆಯೇ 12 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಆಕರ್ಷಕ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇನ್ನು ಸೆಲ್ಫಿಗಾಗಿ ಈ ಫೋನ್‌ನಲ್ಲಿ 10.5 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಇದರಲ್ಲಿನ ಎಐ ಫೀಚರ್ಸ್‌ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ.

ಗೂಗಲ್‌ ಪಿಕ್ಸೆಲ್‌ 8 ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ!

ಉಳಿದಂತೆ ಈ ಫೋನ್‌ ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್‌ 3.2 ಪೋರ್ಟ್‌ಗೆ ಬೆಂಬಲವನ್ನು ಪಡೆದಿದ್ದು, ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ, 4,575mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗೆಯೇ 27W ವೈರ್ಡ್ ಮತ್ತು 18W ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲವನ್ನು ಈ ಫೋನ್‌ ಪಡೆದಿದೆ.

Best Mobiles in India

English summary
Google Pixel 8 is now available with a discount of Rs 16,000. This smartphone will be available at a more affordable price than ever.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+