Home
ಸುದ್ದಿಜಾಲ

Google Pixel ಫೋನ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌; ಈ ಚಾನ್ಸ್‌ ಬಿಡಬೇಡಿ!

ಟೆಕ್ ಹಿರಿಯಣ್ಣ ಗೂಗಲ್ ನೂತನ ಗೂಗಲ್‌ ಪಿಕ್ಸೆಲ್ 9 ಸರಣಿ ಅನ್ನಯ ಬಿಡುಗಡೆ ಮಾಡಿದ್ದೆ ತಡ, ಅದರ ಬೆನ್ನಲ್ಲೇ ಪಿಕ್ಸಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ಅರೇ ಅದೇನು ಅಂತೀರಾ.. ಗೂಗಲ್‌ ಪಿಕ್ಸೆಲ್ 9 ಸರಣಿ ಲಾಂಚ್ ಬಳಿಕ ಸಂಸ್ಥೆಯು ತನ್ನ ಪಿಕ್ಸಲ್‌ 8 (Pixel 8), ಪಿಕ್ಸಲ್‌ 8 ಪ್ರೊ (Pixel 8 Pro), ಪಿಕ್ಸಲ್‌ 8a (Pixel 8a) ಮತ್ತು ಪಿಕ್ಸಲ್‌ 7a (Pixel 7a) ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ.

ಹೌದು, ಗೂಗಲ್‌ ಸಂಸ್ಥೆಯು ತನ್ನ ತನ್ನ ಪಿಕ್ಸಲ್‌ 8 (Pixel 8), ಪಿಕ್ಸಲ್‌ 8 ಪ್ರೊ (Pixel 8 Pro), ಪಿಕ್ಸಲ್‌ 8a (Pixel 8a) ಮತ್ತು ಪಿಕ್ಸಲ್‌ 7a (Pixel 7a) ಫೋನ್‌ಗಳಿಗೆ 2,000ರೂ. ಗಳಿಂದ 7,000ರೂ. ಗಳ ವರೆಗೆ ದರ ಕಡಿತ ತಿಳಿಸಿದೆ. ಇದಲ್ಲದೇ ಆಯ್ದ ಬ್ಯಾಂಕ್‌ ಕಾರ್ಡ್‌ ಮೂಲಕ ಮತ್ತಷ್ಟು ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಹಾಗಾದರೇ ಈ ಪಿಕ್ಸಲ್‌ ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

Google Pixel ಫೋನ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌; ಈ ಚಾನ್ಸ್‌ ಬಿಡಬೇಡಿ

ಬೆಲೆ ಇಳಿಕೆ ಮಾಹಿತಿ

ಪಿಕ್ಸಲ್‌ 8 ಪ್ರೊ 128GB ವೇರಿಯಂಟ್‌ ಆಫರ್‌ ಬೆಲೆ 99,999ರೂ.
ಪಿಕ್ಸಲ್‌ 8 ಪ್ರೊ 256GB ವೇರಿಯಂಟ್‌ ಆಫರ್‌ ಬೆಲೆ 1,06,999ರೂ.

ಪಿಕ್ಸಲ್‌ 8 128GB ವೇರಿಯಂಟ್‌ ಆಫರ್‌ ಬೆಲೆ 71,999ರೂ.
ಪಿಕ್ಸಲ್‌ 8 256GB ವೇರಿಯಂಟ್‌ ಆಫರ್‌ ಬೆಲೆ 77,999ರೂ.

ಪಿಕ್ಸಲ್‌ 8a 128GB ವೇರಿಯಂಟ್‌ ಆಫರ್‌ ಬೆಲೆ 49,999ರೂ.
ಪಿಕ್ಸಲ್‌ 8a 256GB ವೇರಿಯಂಟ್‌ ಆಫರ್‌ ಬೆಲೆ 59,999ರೂ.
ಪಿಕ್ಸಲ್‌ 7a 128GB ವೇರಿಯಂಟ್‌ ಆಫರ್‌ ಬೆಲೆ 41,999ರೂ.

ಗೂಗಲ್‌ ಪಿಕ್ಸಲ್‌ 7a ಫೋನ್‌

ಗೂಗಲ್‌ ಪಿಕ್ಸಲ್‌ 7a ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ಗೆ ಸಪೋರ್ಟ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದು 90Hz ರಿಫ್ರೆಶ್ ರೇಟ್‌ ಆಯ್ಕೆ ಹೊಂದಿದೆ. ಇದು ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದರ ಜೊತೆಗೆ ಆಂಡ್ರಾಯ್ಡ್ 14 ಓಎಸ್ ಬೆಂಬಲ ಸಹ ಒಳಗೊಂಡಿದೆ. ಇದರೊಂದಿಗೆ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಮೊಬೈಲ್‌ 64 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 13 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್‌ ಸಹ ಪಡೆದುಕೊಂಡಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 18W ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ.

ಗೂಗಲ್‌ ಪಿಕ್ಸೆಲ್‌ 8 ಫೋನ್‌

ಗೂಗಲ್‌ ಸಂಸ್ಥೆಯ ಈ ಮೊಬೈಲ್‌ 6.2 ಇಂಚಿನ ಡಿಸ್ಪ್ಲೇ ಜೊತೆಗೆ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ನಿಂದ (Google Tensor 3 chipset) ಕೆಲಸ ನಿರ್ವಹಿಸಲಿದೆ. 50 ಮೆಗಾ ಪಿಕ್ಸಲ್‌ ಮುಖ್ಯ ಕ್ಯಾಮರಾ ಆಯ್ಕೆ ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ.

ಗೂಗಲ್‌ ಪಿಕ್ಸೆಲ್‌ 8 ಪ್ರೊ ಫೋನ್‌

ಗೂಗಲ್‌ ಪಿಕ್ಸೆಲ್‌ 8 ಪ್ರೊ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು ಬರೋಬ್ಬರಿ 2400 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ ಇದು ಗೂಗಲ್ ಟೆನ್ಸರ್ G3 (Google Tensor G3 4 nm) ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಮೂರು ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Google Pixel 8, Pixel 8 Pro, Pixel 7a Receive Huge Price Cut in India. check out all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+