Home
ಸುದ್ದಿಜಾಲ

ಗೂಗಲ್‌ ಪಿಕ್ಸಲ್‌ 8 ಸರಣಿ ಲಾಂಚ್‌!..ಬೊಂಬಾಟ್‌ ಫೀಚರ್ಸ್‌..ಸಖತ್‌ ಆಫರ್‌!

ಟೆಕ್ ದೈತ್ಯ ಎಂದು ಗುರುತಿಸಿಕೊಂಡಿರುವ ಗೂಗಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗೂಗಲ್‌ ಪಿಕ್ಸಲ್‌ 8 ಸರಣಿಯನ್ನು ಇಂದು ( ಅ. 4 ) ಬಿಡುಗಡೆ ಮಾಡಿದೆ. ಈ ಸರಣಿಯು ಗೂಗಲ್‌ ಪಿಕ್ಸಲ್‌ 8 ಮತ್ತು ಗೂಗಲ್‌ ಪಿಕ್ಸಲ್‌ 8 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದ್ದು, ಈ ಎರಡು ಫೋನ್‌ಗಳು ಟೆನ್ಸರ್‌ G3 (Tensor G3) ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿವೆ.

ಹೌದು, ಗೂಗಲ್‌ ಕಂಪನಿಯು ಯುಎಸ್‌ಎನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೂಗಲ್‌ ಪಿಕ್ಸಲ್‌ 8 ಮತ್ತು ಗೂಗಲ್‌ ಪಿಕ್ಸಲ್‌ 8 ಪ್ರೊ ಮಾದರಿಗಳನ್ನು ಲಾಂಚ್ ಮಾಡಿದೆ. ಈ ದೈತ್ಯ ಫೋನ್‌ಗಳು ಆಂಡ್ರಾಯ್ಡ್‌ 14 ಓಎಸ್‌, 30W ವೈರ್ಡ್ / ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿವೆ. ಹಾಗೆಯೇ ಈ ಫೋನ್‌ಗಳು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌, ವೈ-ಫೈ 7 ಸೌಲಭ್ಯಗಳನ್ನು ಕೂಡಾ ಒಳಗೊಂಡಿವೆ.

ಗೂಗಲ್‌ ಪಿಕ್ಸಲ್‌ 8 ಸರಣಿ ಲಾಂಚ್‌!..ಬೊಂಬಾಟ್‌ ಫೀಚರ್ಸ್‌..ಸಖತ್‌ ಆಫರ್‌!

ಗೂಗಲ್‌ ಪಿಕ್ಸಲ್‌ 8 ಪ್ರೊ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಅಬ್ಸಿಡಿಯನ್, Porcelain, ಬೇ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಹಾಗೆಯೇ ಗೂಗಲ್‌ ಪಿಕ್ಸಲ್‌ 8 ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, Obsidian, ಹ್ಯಾಝೆಲ್, ರೋಸ್‌ ಕಲರ್‌ ಆಯ್ಕೆ ಅನ್ನು ಪಡೆದಿದೆ. ಹಾಗಾದರೆ ಗೂಗಲ್‌ ಪಿಕ್ಸಲ್‌ 8 ಮತ್ತು ಗೂಗಲ್‌ ಪಿಕ್ಸಲ್‌ 8 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ 8 ಫೀಚರ್ಸ್‌
ಗೂಗಲ್‌ ಪಿಕ್ಸಲ್‌ 8 ಫೋನ್‌ 6.2 ಇಂಚಿನ OLED ಪ್ಯಾನೆಲ್ ಹೊಂದಿದ್ದು, HD+ ರೆಸಲ್ಯೂಶನ್ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್‌ ಟೆನ್ಸರ್ G3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ. ಇದು 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಅಲ್ಲದೇ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 10.5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ರಚನೆ ಒದಗಿಸಲಾಗಿದೆ. ಹಾಗೆಯೇ 4,575mAh ಬ್ಯಾಟರಿ ಬ್ಯಾಕ್‌ಅಪ್‌ ಇದ್ದು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

ಗೂಗಲ್‌ ಪಿಕ್ಸಲ್‌ 8 ಪ್ರೊ ಫೀಚರ್ಸ್‌
ಗೂಗಲ್‌ ಪಿಕ್ಸಲ್‌ 8 ಪ್ರೊ ಫೋನ್‌ 6.7 ಇಂಚಿನ OLED ಪ್ಯಾನೆಲ್ ಹೊಂದಿದ್ದು, 2400nits ಬ್ರೈಟ್ನೆಸ್‌ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್‌ ಸಹ ಟೆನ್ಸರ್ G3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ. ಈ ಫೋನ್‌ 12GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಅಲ್ಲದೇ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇದರೊಂದಿಗೆ ಮುಂಭಾಗದಲ್ಲಿ 10.5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ರಚನೆ ಒದಗಿಸಲಾಗಿದೆ. ಹಾಗೆಯೇ 5050mAh ಬ್ಯಾಟರಿ ಬ್ಯಾಕ್‌ಅಪ್‌ ಇದ್ದು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ಪ್ರೊ ಫೋನಿನ 12GB+128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 1,06,999 ರೂ. ಗಳು ಆಗಿದೆ. ಹಾಗೆಯೇ ಗೂಗಲ್ ಪಿಕ್ಸೆಲ್ 8 ಫೋನಿನ 8GB+128GB ಸ್ಟೋರೇಜ್ ಆಯ್ಕೆ ಬೆಲೆಯು 75,999 ರೂ. ಆಗಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಪ್ರಿ-ಆರ್ಡರ್‌ಗೆ ಲಬ್ಯ ಇದ್ದು, ಆಕರ್ಷಕ ಬ್ಯಾಂಕ್‌ ಆಫರ್‌ ಸಹ ಲಭ್ಯ ಇದೆ.

Best Mobiles in India

English summary
Google Pixel 8 Pro and Pixel 8 With Tensor G3 SoC Launched. check Price in India and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+