ಎಂಟ್ರಿಗೆ ಸಜ್ಜಾದ 'ಗೂಗಲ್ ಪಿಕ್ಸಲ್ 8 ಪ್ರೊ'!..ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಶುರುವಾಗುತ್ತಾ?
ಗೂಗಲ್ ಸಂಸ್ಥೆಯ ಇತ್ತೀಚಿನ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಸರಣಿಯು ಇನ್ನು ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತಿದೆ. ಅದರ ಬೆನ್ನಲ್ಲೇ ಗೂಗಲ್ ತನ್ನ ಮುಂದಿನ ಪಿಕ್ಸಲ್ ಸರಣಿ ಲಾಂಚ್ ಮಾಡಲು ಸಕಲ ರೀತಿ ಸಜ್ಜಾಗುತ್ತಿದೆ. ಅಂದಹಾಗೆ ನೂತನ ಬರಲಿರುವ ಗೂಗಲ್ ಪಿಕ್ಸಲ್ 8 ಸರಣಿಯು ಹೊಸ ಟೆನ್ಸರ್ G3 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುವುದು ಬಹುತೇಕ ಖಚಿತವಾಗಿದೆ.
ಹೌದು, ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ನೂತನ ಗೂಗಲ್ ಪಿಕ್ಸಲ್ 8 ಸರಣಿಯಯನ್ನು ಬಿಡುಗಡೆ ಮಾಡಲು ತಯಾರಾಗಿದೆ. ಈ ಸರಣಿಯ ಗೂಗಲ್ ಪಿಕ್ಸಲ್ 8 ಪ್ರೊ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಗೂಗಲ್ ಪಿಕ್ಸಲ್ 8 ಪ್ರೊ ಫೋನ್ ಈ ವರ್ಷದ ಕೊನೆಯ ಭಾಗದಲ್ಲಿ ದೇಶಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಗೂಗಲ್ ಪಿಕ್ಸಲ್ 8 ಫೋನಿನಲ್ಲಿ ಸಂಸ್ಥೆಯ ಟಾಪ್-ಆಫ್-ಲೈನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕಂಪನಿಯ ಕಸ್ಟಮ್-ಅಭಿವೃದ್ಧಿಪಡಿಸಿದ ಟೆನ್ಸರ್ ಜಿ 3 SoC ಅನ್ನು ಒಳಗೊಂಡಿರುವುದು ಖಚಿತ ಎನ್ನಲಾಗಿದೆ. ಹಾಗೆಯೇ ಟೈಟಾನ್ ಸೆಕ್ಯುರಿಟಿ ಚಿಪ್ ಸಹ ಪಡೆದಿರಲಿದೆ. ಗೂಗಲ್ ಪಿಕ್ಸಲ್ 8 ಪ್ರೊ ಮೊಬೈಲ್ 12GB RAM ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ, ಪ್ರೊಸೆಸರ್ ಮತ್ತು ಕ್ಯಾಮೆರಾ ಫೀಚರ್ಸ್ ಮಾಹಿತಿ :
ಅಲ್ಲದೇ ಗೂಗಲ್ ಪಿಕ್ಸಲ್ 8 ಪ್ರೊ ಫೋನ್ 6.7 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಈ ಡಿಸ್‌ಪ್ಲೇಯು QHD+ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇರಲಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇನ್ನು ಈ ಫೋನ್ 12GB RAM ಜೊತೆಗೆ 128 GB ಸ್ಟೋರೇಜ್ ವೇರಿಯಂಟ್ ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿರಲಿದೆ.
ಗೂಗಲ್ ಪಿಕ್ಸಲ್ 8 ಪ್ರೊ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಇರುವ ನಿರೀಕ್ಷೆಗಳಿವೆ. ಈ ಮೊಬೈಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಪೋರ್ಟ್ ನೋಮದಿಗೆ 50 ಮೆಗಾಪಿಕ್ಸಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಗೂಗಲ್ ಪಿಕ್ಸೆಲ್ 8 ಪ್ರೊ 64 ಮೆಗಾಪಿಕ್ಸಲ್‌ನ ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ 48 ಮೆಗಾಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ.
ಇತ್ತೀಚಿನ ವರದಿಯ ಪ್ರಕಾರ ಗೂಗಲ್ ಪಿಕ್ಸೆಲ್ 8 ಸರಣಿಯು ಪ್ರಾಥಮಿಕ ಕ್ಯಾಮೆರಾಗಾಗಿ ಸ್ಯಾಮ್‌ಸಂಗ್‌ನ GN2 ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಇನ್ನು ಇದರ ಅಲ್ಟ್ರಾ ವೈಡ್ ಕ್ಯಾಮೆರಾವು 0.49x ಜೂಮ್ ಅನುಪಾತದೊಂದಿಗೆ ಸೋನಿ IMX787 ಅನ್ನು ಪಡೆದಿರಲಿದೆ. ಕೊನೆಯದಾಗಿ ಟೆಲಿಫೋಟೋ ಕ್ಯಾಮರಾ 48 ಮೆಗಾಪಿಕ್ಸಲ್ ಸ್ಯಾಮ್‌ಸಂಗ್ GN5 ಸೆನ್ಸಾರ್ ಹೊಂದಿರಲಿದೆ. ಇದರೊಂದಿಗೆ 5x ಆಪ್ಟಿಕಲ್ ಜೂಮ್ ಸಪೋರ್ಟ್ ಇರಲಿದೆ.
ಹಾಗೆಯೇ ಗೂಗಲ್ ಪಿಕ್ಸಲ್ 8 ಪ್ರೊ ಫೋನ್ ಸೆಲ್ಫಿ ಕ್ಯಾಮೆರಾಗಾಗಿ, 11 ಮೆಗಾಪಿಕ್ಸಲ್ ಸ್ಯಾಮ್‌ಸಂಗ್ JN1 ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಈ ಪಿಕ್ಸಲ್ 8 ಪ್ರೊ ಫೋನ್ 4950mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದೆ. ಲೀಕ್ ಮಾಹಿತಿಗಳ ಪ್ರಕಾರ, ಈ ಫೋನ್ 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಒದಗಿಸಲಿದೆ. ಹಾಗೆಯೇ ಪಿಕ್ಸೆಲ್ 8 ಪ್ರೊ ಹಿಂಭಾಗದಲ್ಲಿ ತಾಪಮಾನ ಸೆನ್ಸಾರ್ ಸಹ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








