ಗೂಗಲ್ ಪಿಕ್ಸೆಲ್ 8 ಸರಣಿ, ಪಿಕ್ಸೆಲ್ ವಾಚ್ 2 ಇಂದು ಲಾಂಚ್! ಲೈವ್ ಸ್ಟ್ರೀಮ್ ವೀಕ್ಷಣೆ ಹೇಗೆ? ನಿರೀಕ್ಷಿತ ಬೆಲೆ ಎಷ್ಟು?
ಗೂಗಲ್ ತನ್ನ ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಪಿಕ್ಸೆಲ್ 8 ಸರಣಿ ಮತ್ತು ಪಿಕ್ಸೆಲ್ ವಾಚ್ 2 (Pixel 8 series and Pixel Watch 2) ಅನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧವಾಗಿದೆ. ಈಗಾಗಲೇ ಭಾರತದಲ್ಲಿ ಈ ಡಿವೈಸ್‌ಗಳ ಸಂಬಂಧ ಸಾಕಷ್ಟು ಲೀಕ್ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಜನರು ಈ ಡಿವೈಸ್ ಅನ್ನು ಖರೀದಿ ಮಾಡಲು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಹೌದು, ಗೂಗಲ್‌ನ ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ (Made by Google) ಮೇಲೆ ತಿಳಿಸಿದ ಡಿವೈಸ್‌ಗಳೊಂದಿಗೆ ಇತರೆ ಡಿವೈಸ್‌ಗಳ ಬಗ್ಗೆಯೂ ಘೋಷಣೆ ಮಾಡುವ ಸಾಧ್ಯತೆ ಇದೆ. ಅಂದರೆ ಪಿಕ್ಸೆಲ್ ಬಡ್ಸ್ ಪ್ರೊ 2 ಅನ್ನು ಅನ್ನು ಸಹ ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ ಈ ಈವೆಂಟ್‌ನಲ್ಲಿ OLED ಡಿಸ್‌ಪ್ಲೇಗಳು ಸೇರಿದಂತೆ ಅತ್ಯಾಕರ್ಷಕ ಹೊಸ ವಿಷಯಗಳನ್ನು ಬಹಿರಂಗಪಡಿಸಲಿದೆ ಗೂಗಲ್. ಹಾಗಿದ್ರೆ, ಈ ಈವೆಂಟ್ ಅನ್ನು ವೀಕ್ಷಣೆ ಮಾಡುವುದು ಹೇಗೆ?, ಈ ಡಿವೈಸ್‌ಗಳ ನಿರೀಕ್ಷಿತ ಬೆಲೆ ಎಷ್ಟಿರಬಹುದು? ಎನ್ನುವುದನ್ನು ತಿಳಿಯೋಣ ಬನ್ನಿ.

ಗೂಗಲ್ ತನ್ನ ಮೇಡ್ ಬೈ ಗೂಗಲ್ ಅನ್ನು ಇಂದು ಸಂಜೆ ಹೋಸ್ಟ್ ಮಾಡಲು ಸಿದ್ಧವಾಗಿದೆ. ಪಿಕ್ಸೆಲ್ ವಾಚ್ 2 ಜೊತೆಗೆ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಅನ್ನು ಬಿಡುಗಡೆ ಮಾಡುವುದಾಗಿ ಗೂಗಲ್ ಈ ಹಿಂದೆ ದೃಢಪಡಿಸಿತ್ತು. ಆದಾಗ್ಯೂ, ಗೂಗಲ್ ಪಿಕ್ಸೆಲ್ ಬಡ್ಸ್ ಅನ್ನು ಸಹ ಅನಾವರಣಗೊಳಿಸುತ್ತದೆ ಎಂಬ ವದಂತಿಗಳು ಇವೆ. ಈವೆಂಟ್‌ನಲ್ಲಿ ಪ್ರೊ 2 ಸಹ ಇದೆ. ಆದರೆ, ಅಧಿಕೃತ ದೃಢೀಕರಣಕ್ಕೆ ಕಾಯಬೇಕಿದೆ.
ಈ ವಿಶೇಷ ಈವೆಂಟ್ ಅನ್ನು ವೀಕ್ಷಣೆ ಮಾಡುವುದು ಹೇಗೆ?: ಈ ಈವೆಂಟ್ ಅನ್ನು ಗೂಗಲ್‌ನ ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಈವೆಂಟ್ 7:30 PM ಗೆ ಆ ಪ್ರಾರಂಭವಾಗುತ್ತದೆ ಮತ್ತು ಗೂಗಲ್ ನ ವೆಬ್‌ಸೈಟ್, ಯೂಟ್ಯೂಬ್ ಚಾನಲ್ ಮೂಲಕವೂ ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲಾಗಿದೆ.
ಲಾಂಚ್ ಆಗಲಿರುವ ಫೋನ್‌ಗಳ ಅಂದರೆ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳ ಕೆಲವು ಲೀಕ್ ಮಾಹಿತಿ ಗಮನಿಸಿವುದಾದರೆ ಇವು OLED ಡಿಸ್ಪ್ಲೇಗಳೊಂದಿಗೆ ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡಲು ಸಿದ್ಧವಾಗಿವೆ ಎನ್ನಲಾಗಿದೆ. ಪಿಕ್ಸೆಲ್ 8 6.17 ಇಂಚಿನ ಪರದೆಯನ್ನು ಹೊಂದಿದ್ದರೆ ಪಿಕ್ಸೆಲ್ 8 ಪ್ರೊ 6.8 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.
ಇದರೊಂದಿಗೆ ಸುಗಮ ಕಾರ್ಯಗಳಿಗಾಗಿ ಎರಡೂ ಡಿಸ್‌ಪ್ಲೇಗಳು 120Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್ ಆಯ್ಕೆ ಪಡೆಯಲಿವೆ ಎನ್ನಲಾಗಿದ್ದು, ಗಮನಾರ್ಹವಾಗಿ, ಪ್ರೊ ಮಾದರಿಯು ಕರ್ವ್ಡ್ ಡಿಸ್‌ಪ್ಲೇ ಬದಲಾಗಿ ಫ್ಲಾಟ್ ಡಿಸ್ಪ್ಲೇ ಆಯ್ಕೆ ಪಡೆಯಲಿದೆ ಎಂದು ತೋರುತ್ತದೆ. ಉಳಿದಂತೆ ಈ ಎರಡೂ ಫೋನ್‌ಗಳು ಗೂಗಲ್ ನ ಅತ್ಯಾಧುನಿಕ ಟೆನ್ಸರ್ G3 ಚಿಪ್‌ನಿಂದ ಕಾರ್ಯನಿರ್ವಹಿಸಲಿವೆ.
ಮೂಲ ಪಿಕ್ಸೆಲ್ 8 ಫೋನ್ 8GB RAM ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಪ್ರೊ ರೂಪಾಂತರವು 12GB RAM ಆಯ್ಕೆ ಪಡೆದಿರಬಹುದು ಎಂದು ಹೇಳಲಾಗಿದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಪಿಕ್ಸೆಲ್ 8 ಬಳಕೆದಾರರಿಗೆ ದೀರ್ಘಾಯುಷ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಭಾವಶಾಲಿ ಏಳು ವರ್ಷಗಳ ಸಾಫ್ಟ್‌ವೇರ್ ಬೆಂಬಲವನ್ನು ನೀಡಲಾಗುತ್ತದೆ ಎಂದು ವದಂತಿಗಳು ಸೂಚಿಸುತ್ತವೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಪಿಕ್ಸೆಲ್ 8 ಪ್ರೊ ತನ್ನ ಕ್ಯಾಮೆರಾ ಸೆಟಪ್ ಅನ್ನು 48 MP ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡಿದೆ. ಆದರೆ, ಪಿಕ್ಸೆಲ್ 8 12 MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಎರಡು ಡಿವೈಸ್‌ಗಳು ಕ್ಲೋಸ್-ಅಪ್ ಫೋಟೋಗ್ರಫಿಗಾಗಿ ಮ್ಯಾಕ್ರೋ ಫೋಕಸ್ ಅನ್ನು ಬೆಂಬಲಿಸುತ್ತವೆ ಎಂದು ಹೇಳಲಾಗಿದೆ.

ಹೆಚ್ಚುವರಿಯಾಗಿ ಪಿಕ್ಸೆಲ್ 8 ಪ್ರೊ 48MP ಟೆಲಿಫೋಟೋ ಲೆನ್ಸ್ 5x ಜೂಮ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಬೆರಗುಗೊಳಿಸುವ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಎರಡೂ ಫೋನ್‌ಗಳು 10.5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿವೆ ಎಂದು ಲೀಕ್ ಆದ ಮಾಹಿತಿಯಿಂದ ತಿಳಿದುಬಂದಿದೆ. ಈ ಎಲ್ಲಾ ವಿಶೇಷ ಫೀಚರ್ಸ್ ಮೂಲಕ ಬಳಕೆದಾರರು ಈ ಫೋನ್‌ಗಳಲ್ಲಿ ಭಿನ್ನ ಅನುಭವ ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ $699 (ಅಂದಾಜು 58,000ರೂ.) ಮತ್ತು $899 (ಅಂದಾಜು 75,000ರೂ. ) ಆಗಿರಬಹುದು.


Click it and Unblock the Notifications








