ಗೂಗಲ್ ಪಿಕ್ಸೆಲ್ 8 ಗೆ ಭಾರತದಲ್ಲಿ 21,000 ವರೆಗೆ ರಿಯಾಯಿತಿ!
ಆಫರ್ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಮುಂದಾಗಿದ್ದರೆ ನಿಮಗೆ ಇದು ಅತ್ಯುತ್ತಮ ಸಮಯ. ಯಾಕೆಂದರೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್‌ಗೆ (Google Pixel 8 smartphone) 21,000 ವರೆಗೆ ರಿಯಾಯಿತಿ ನೀಡಲಾಗಿದೆ.
ಹೌದು, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ದೊಡ್ಡ ಮಟ್ಟದ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ ಅನ್ನು 62,999 ರೂ.ಗಳ ಬೆಲೆಗೆ ಲಾಂಚ್ ಮಾಡಲಾಗಿತ್ತು. ಇದು ಗೂಗಲ್ ಪಿಕ್ಸೆಲ್ 8 ಟೆನ್ಸರ್ ಜಿ 3 SoC ನಿಂದ ಕಾರ್ಯನಿರ್ವಹಿಸಲಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಆಕ್ಟಾ-ಪಿಡಿ ಸೆನ್ಸರ್‌ನೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಏನು?, ಇದರ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಪಿಕ್ಸೆಲ್ 8: ಈ ಸ್ಮಾರ್ಟ್‌ಫೋನ್‌ಗೆ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಆಫರ್ ಘೋಷಣೆ ಮಾಡಲಾಗಿದೆ. ಇ-ಕಾಮರ್ಸ್ ಸೈಟ್‌ನಲ್ಲಿ ನಡೆಯುತ್ತಿರುವ ವಿಶೇಷ ಸೇಲ್‌ನಲ್ಲಿ ಪಿಕ್ಸೆಲ್ 8 ಗೆ 13,000 ರೂಗಳ ರಿಯಾಯಿತಿಯನ್ನು ನೀಡಲಾಗಿದ್ದು, ಇದನ್ನು 62,999 ರೂ.ಗಳ ಬೆಲೆಗೆ ಲಾಂಚ್ ಮಾಡಲಾಗಿತ್ತು. ಇದರ ಜೊತೆಗೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 8,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಇದರಿಂದಾಗಿ ಖರೀದಿ ಮಾಡುವವರು ಕೇವಲ 54,999 ರೂಪಾಯಿಗಳಿಗೆ ಇದನ್ನು ಕೊಂಡುಕೊಳ್ಳಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಪಿಕ್ಸೆಲ್ 8 6.2 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದ್ದು, 2,000 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದ್ದು, ಗೂಗಲ್ ಒನ್‌ನಿಂದ ಉಚಿತ ವಿಪಿಎನ್ ಮತ್ತು ಏಳು ವರ್ಷಗಳ ಓಎಸ್ ಮತ್ತು ನಿಯಮಿತ ಭದ್ರತಾ ನವೀಕರಣಗಳ ಭರವಸೆಯೊಂದಿಗೆ ಬರುತ್ತದೆ.

ಹಾಗೆಯೇ ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 8x ಸೂಪರ್-ರೆಸ್ ಡಿಜಿಟಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಆಕ್ಟಾ-ಪಿಡಿ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, AF ಮತ್ತು ಮ್ಯಾಕ್ರೋ ಸಾಮರ್ಥ್ಯಗಳೊಂದಿಗೆ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 10.5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ, 18W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,575 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಸಮಯದಲ್ಲಿ ಗೂಗಲ್ ಪಿಕ್ಸೆಲ್ 8 ಅನ್ನು ಖರೀದಿಸುವುದು ನಿಮಗೆ ಉತ್ತಮ ಎನಿಸಿದೆಯಾದರೂ ಈ ಫೋನ್ ಬೇಡ ಬೇರೆ ಫೋನ್ ಬೇಕು ಎಂದರೆ ಈ ಸೇಲ್‌ನಲ್ಲಿ ಇತರೆ ಫೋನ್‌ಗಳಿಗೂ ದೊಡ್ಡ ಆಫರ್ ನೀಡಲಾಗಿದೆ. ಅಂದರೆ ವಿವೋ, ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್‌ಗಳ ಇತರ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ಅದರಲ್ಲೂ ನೀವು ಈಗ ಫ್ಲ್ಯಾಗ್‌ಶಿಪ್ ಅಥವಾ ಮಿಡ್ ರೇಂಜ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್‌ಗಾಗಿ ಸರ್ಚ್ ಮಾಡುತ್ತಿದ್ದರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಿಮಗಾಗಿ ಈಗ ಲೈವ್ ಆಗಿದೆ. ಹಾಗೆಯೇ ಮೇ 9 ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲು ನಿಮಗೆ ಇಷ್ಟವಾದ ಸ್ಮಾರ್ಟ್ ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡಿ ಹಣ ಉಳಿತಾಯ ಮಾಡಬಹುದಾಗಿದೆ.


Click it and Unblock the Notifications








