Google Pixel 8: ಗೂಗಲ್‌ನ ಆಟ ಈಗ ಶುರು... ಇಂದಿನಿಂದ ಪಿಕ್ಸೆಲ್ 8 ಫೋನ್ ಸೇಲ್ ಆರಂಭ! ಆಫರ್ ಏನಿದೆ?
ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು (Google Pixel smartphone) ಗ್ರಾಹಕರ ಮನಸೆಳೆದಿವೆ. ಈ ನಡುವೆ ಗೂಗಲ್ ಪಿಕ್ಸೆಲ್ 8 ಸರಣಿ (Google Pixel 8 series) ಫೋನ್‌ಗಳನ್ನು ಲಾಂಚ್ ಮಾಡಲಾಗಿದ್ದು, ಈ ಫೋನ್‌ಗಳನ್ನು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಆಕರ್ಷಣೀಯ ಫೋನ್‌ಗಳು ಅತ್ಯುತ್ತಮ ಬ್ಯಾಟರಿ ಹಾಗೂ ಕ್ಯಾಮರಾ ಫೀಚರ್ಸ್ ಪಡೆದುಕೊಂಡಿವೆ.
ಹೌದು, ಗೂಗಲ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾದ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ (Pixel 8 and Pixel 8 Pro) ಸ್ಮಾರ್ಟ್‌ಫೋನ್‌ಗಳು ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಈ ಎರಡು ಗೂಗಲ್ (Google) ಫೋನ್ ಗಳನ್ನು ನೀವು ಖರೀದಿಸಬಹುದುದೇ, ಈ ಬೆಲೆಗೆ ಈ ಫೋನ್‌ನಲ್ಲಿನ ಫೀಚರ್ಸ್ ಉತ್ತಮವೇ ಎಂಬಿತ್ಯಾದಿ ಇಂಟ್ರೆಸಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಪಿಕ್ಸೆಲ್ 8 ಬೆಲೆ ಎಷ್ಟು?: ಈ ಸ್ಮಾರ್ಟ್‌ಫೋನ್‌ನ 128GB ಸ್ಟೋರೇಜ್ ಆಯ್ಕೆಯ ಮೂಲ ವೇರಿಯಂಟ್‌ನ ಫೋನ್ 75,999 ರೂಗಳಲ್ಲಿ ಲಭ್ಯ ಇದೆ. ಹಾಗೆಯೇ 256GB ವೇರಿಯಂಟ್‌ಗೆ 82,999 ರೂಗಳನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್ ಅಥವಾ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದರೆ 8,000 ರಿಯಾಯಿತಿ ಪಡೆಯಬಹುದು.
ಹಾಗೆಯೇ ಗೂಗಲ್ ಪಿಕ್ಸೆಲ್ 8 ಪ್ರೊ ನ 12GB RAM + 128GB ಶೇಖರಣಾ ಆಯ್ಕೆಯ ಫೋನ್ ಅನ್ನು 106,999 ರೂಗಳಲ್ಲಿ ಖರೀದಿ ಮಾಡಬಹುದಾಗಿದೆ.ಇನ್ನು ಈ ಫೋನ್ ಖರೀದಿಗೆ ವಿನಿಮಯ ಆಫರ್ ಅನ್ನೂ ಸಹ ನೀಡಲಾಗಿದೆ. ಈ ಮೂಲಕ ಕಡಿಮೆ ಬೆಲೆಗೆ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಬಹುದು. ಅಷ್ಟೇ ಅಲ್ಲದೆ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವಾಗ ಹೆಚ್ಚುವರಿಯಾಗಿ 3,000 ರಿಯಾಯಿತಿ ಸಹ ಸಿಗಲಿದೆ.
ಗೂಗಲ್ ಪಿಕ್ಸೆಲ್ 8 ಫೀಚರ್ಸ್: ಈ ಫೋನ್ 6.2-ಇಂಚಿನ ಡಿಸ್ಪ್ಲೇ ಜೊತೆಗೆ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120 Hz ರಿಫ್ರೆಶ್ ರೇಟ್, ಕನಿಷ್ಠ ಬೆಜೆಲ್‌ಗಳು ಮತ್ತು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಉತ್ತಮ ಹೊಳಪನ್ನು ನೀಡಲಿದೆ. ಜೊತೆಗೆ ಈ ಫೋನ್ ಗೂಗಲ್‌ನ ಟೆನ್ಸರ್ 3 ಚಿಪ್‌ಸೆಟ್‌ನಿಂದ (Google Tensor 3 chipset) ಕಾರ್ಯನಿರ್ವಹಿಸಲಿದೆ.
ಉಳಿದಂತೆ ಈ ಫೋನ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 1.5 ಗಂಟೆಗಳಲ್ಲಿ ಪಿಕ್ಸೆಲ್ 8 ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಮತ್ತು 50MP ಮುಖ್ಯ ಕ್ಯಾಮರಾ ಆಯ್ಕೆ ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ. ಇದರ ಹೊಸ ಮ್ಯಾಕ್ರೋ ಫೋಕಸ್ ಫೀಚರ್ಸ್ ಕ್ಲೋಸ್-ಅಪ್ ಫೋಟೋಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
ಪಿಕ್ಸೆಲ್ 8 ಪ್ರೊ ಫೀಚರ್ಸ್: ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು ಬರೋಬ್ಬರಿ 2400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಸೂರ್ಯನಿಗೆ ಟಾರ್ಚ್ ಹಾಕುವ ಸಾಮರ್ಥ್ಯ ಈ ಫೋನ್‌ನಲ್ಲಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದುಕೊಂಡಿದ್ದು, ಇದರ ಅಲ್ಯೂಮಿನಿಯಂ ಫ್ರೇಮ್ ಫೋನ್ ಅನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ.

ಇನ್ನುಳಿದಂತೆ ಈ ಫೋನ್ ಗೂಗಲ್ ಟೆನ್ಸರ್ G3 (Google Tensor G3 4 nm) ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಟ್ರಿಪಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ 50 MP + 48 MP+48 MP ಸೆನ್ಸರ್ ಇದ್ದು, ಡ್ಯುಯಲ್-ಎಲ್ಇಡಿ ಫ್ಲ್ಯಾಶ್, ಪಿಕ್ಸೆಲ್ ಶಿಫ್ಟ್, ಅಲ್ಟ್ರಾ-ಎಚ್‌ಡಿಆರ್, ಪನೋರಮಾ, ಬೆಸ್ಟ್ ಟೇಕ್ ಫೀಚರ್ಸ್‌ಗಳನ್ನು ಈ ಸೆನ್ಸರ್ ಹೊಂದಿವೆ. ಅಷ್ಟೇ ಅಲ್ಲದೆ ಸೆಲ್ಫಿಗಾಗಿ 10.5 MP ಕ್ಯಾಮರಾ ಸೆನ್ಸರ್ ನೀಡಲಾಗಿದೆ.


Click it and Unblock the Notifications








