Google Pixel: ಲಾಂಚ್‌ಗೂ ಮೊದಲೇ ಲೀಕ್ ಆಯ್ತು ಗೂಗಲ್ ಪಿಕ್ಸೆಲ್ 8a ಫೀಚರ್ಸ್! ಮಾರುಕಟ್ಟೆಯಲ್ಲಿ ಸಂಚಲನ
ಗೂಗಲ್ ಪಿಕ್ಸೆಲ್ ಫೋನ್‌ಗಳಿಗೆ (Google Pixel Phone) ವಿಶೇಷವಾದ ಬೇಡಿಕೆ ಇರುತ್ತವೆ. ಈ ನಡುವೆ ಲಾಂಚ್ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ಗೂಗಲ್ ಪಿಕ್ಸೆಲ್ 8a (Google Pixel 8a) ಸಂಚಲನ ಉಂಟು ಮಾಡಿದೆ. ಇದರಿಂದ ಸಾಕಷ್ಟು ಜನರು ಈ ಫೋನ್ ಖರೀದಿಗಾಗಿ ಕಾದುಕುಳಿತಿದ್ದಾರೆ.
ಹೌದು, ಗೂಗಲ್ ಪಿಕ್ಸೆಲ್ ಫೋನ್‌ಗಳು ವಿಶೇಷ ಶೈಲಿ ಹಾಗೂ ಆಕರ್ಷಕ ಫೀಚರ್ಸ್ ಆಯ್ಕೆ ಪಡೆಯವುದರ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ. ಅದರಂತೆ ಗೂಗಲ್ ಪಿಕ್ಸೆಲ್ 8a ಇನ್ನೇನು ಕೆಲವೇ ವಾರಗಳಲ್ಲಿ ಲಾಂಚ್ ಆಗಲಿದ್ದು, ಈ ಫೋನ್‌ನ ಲೀಕ್ ಫೀಚರ್ಸ್ ಬಹಳ ಸದ್ದು ಮಾಡುತ್ತಿದೆ. ಕೆಲವು ಲೀಕ್ ಮಾಹಿತಿ ಪ್ರಕಾರ ಈ ಫೋನ್ ಎಐ ಫೀಚರ್ಸ್ ಪಡೆಯಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಲೀಕ್ ಫೀಚರ್ಸ್ ಏನು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಪಿಕ್ಸೆಲ್ 8a: ಗೂಗಲ್ ಪಿಕ್ಸೆಲ್ 8a ಅನ್ನು ಮೇ 14 ರಂದು ಗೂಗಲ್ I/O 2024 ನಲ್ಲಿ ಲಾಂಚ್ ಮಾಡಲಾಗುತ್ತಿದೆ. ಆದರೆ, ಈಗಾಗಲೇ ಈ ಫೋನ್‌ನ ಕೆಲವು ಲೀಕ್ ಫೀಚರ್ಸ್ ಇತರೆ ಸ್ಮಾರ್ಟ್‌ಫೋನ್ ತಯಾರಿಕರಿಗೆ ನಡುಕ ಹುಟ್ಟುವಂತೆ ಮಾಡಿವೆ. ಯಾಕೆಂದರೆ ಈ ಫೋನ್ ಆಂಡ್ರಾಯ್ಡ್ 15 ಓಎಸ್ ಅನ್ನು ರನ್ ಮಾಡಲಿದೆ ಎನ್ನಲಾಗಿದ್ದು, ಜೆಮಿನಿ ಎಐ ನವೀಕರಣ ಪಡೆಯಲಿದೆ ಎಂದು ತಿಳಿದುಬಂದಿದೆ.
ಈ ಸ್ಮಾರ್ಟ್‌ಫೋನ್‌ನ ಲೀಕ್ ಮಾಹಿತಿಗಳನ್ನು ಗಮನಿಸುವುದಾದರೆ ಈ ಫೋನ್ 120Hz ರಿಫ್ರೆಶ್ ರೇಟ್ ಸೌಲಭ್ಯದೊಂದಿಗೆ 6.1 ಇಂಚಿನ FHD+ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಟೆನ್ಸರ್ G3 ಪ್ರೊಸೆಸರ್ (Tensor G3 processor) ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಪ್ರೊಸೆಸರ್ ಅನ್ನು ಟೈಟಾನ್ M2 ಭದ್ರತಾ ಚಿಪ್‌ನೊಂದಿಗೆ ಸಂಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದರೊಂದಿಗೆ 8GB LPDDR5X RAM ಮತ್ತು 128GB UFS 3.1 ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, OIS ಜೊತೆಗೆ 64 ಮೆಗಾಪಿಕ್ಸೆಲ್ ಸೋನಿ IMX787 ಪ್ರಾಥಮಿಕ ಕ್ಯಾಮೆರಾವನ್ನು, f/1.89 ದ್ಯುತಿರಂಧ್ರ ಮತ್ತು 1/1.73 ಇಂಚಿನ ಸೆನ್ಸರ್ ಆಯ್ಕೆಯೊಂದಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ 13 ಮೆಗಾಪಿಕ್ಸೆಲ್ ಸೋನಿ IMX712 ಅಲ್ಟ್ರಾವೈಡ್ ಶೂಟರ್ ಅನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.
ಹಾಗೆಯೇ ಈ ಫೋನ್ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ ಸೋನಿ IMX 712 ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್, 1,400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮತ್ತು ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದಂತದ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು ಎಂದು ಲೀಕ್ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಗೂಗಲ್ ಪಿಕ್ಸೆಲ್ 8a ನಿರೀಕ್ಷಿತ ಬೆಲೆ: ಈ ಫೋನ್ ಅನ್ನು ಮೊದಲೇ ತಿಳಿಸಿದಂತೆ ಮೇ 14 ರಂದು ಲಾಂಚ್ ಮಾಡಲಾಗುತ್ತಿದ್ದು, ಭಾರತವೂ ಸೇರಿದಂತೆ 30 ಇತರ ದೇಶಗಳಲ್ಲಿ ಚೊಚ್ಚಲ ಪ್ರವೇಶ ಪಡೆಯಲಿದೆ. ಜೊತೆಗೆ ಈ ಫೋನ್‌ಗೆ EUR 570 (ಭಾರತದಲ್ಲಿ ಅಂದಾಜು 51,450ರೂ.ಗಳು) ಬೆಲೆ ನಿಗದಿ ಮಾಡಲಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನೂ ಕೆಲವು ವರದಿಗಳಲ್ಲಿ ಬೆಲೆ 45,000 ರೂ.ಗಳಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








