Google: ಗೂಗಲ್ ಪಿಕ್ಸೆಲ್ 8a ಫೋನ್‌ನ ಕಲರ್ ಹಾಗೂ ಆಕರ್ಷಕ ಫೀಚರ್ಸ್ ವಿಷಯ ಲೀಕ್!
ಗೂಗಲ್ ಪಿಕ್ಸೆಲ್ ಪೋನ್‌ಗಳು (Google Pixel Phone) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಪಿಕ್ಸೆಲ್ 8a (Google Pixel 8a)ನ ಹಲವಾರು ವಿಷಯಗಳು ಲೀಕ್ ಆಗುತ್ತಿವೆ. ಈ ಸ್ಮಾರ್ಟ್‌ಫೋನ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.
ಹೌದು, ಪ್ರೀಮಿಯಂ ಫೋನ್‌ಗಳಿಗೆ ಪೈಪೋಟಿ ನೀಡುವ ಫೋನ್‌ಗಳು ಎಂದರೆ ಪಿಕ್ಸೆಲ್ ಫೋನ್‌ಗಳು. ಇವು ವಿಶೇಷ ಕ್ಯಾಮೆರಾ ಹಾಗೂ ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಕೆಲಸ ಮಾಡುತ್ತವೆ. ಅದರಂತೆ ಪಿಕ್ಸೆಲ್ 8 ಸರಣಿಗೆ (Pixel 8 series) ಗೂಗಲ್‌ನ ಈ ಹೊಸ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಹಾಗಿದ್ರೆ, ಈ ಫೋನ್ ಬಗ್ಗೆ ಈವರೆಗೆ ತಿಳಿದುಬಂದ ಮಾಹಿತಿ ಏನು ಅನ್ನೋ ವಿವರ ಇಲ್ಲಿದೆ ನೋಡಿ.

ಗೂಗಲ್ ಪಿಕ್ಸೆಲ್ 8a ಫೋನ್: ಈ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿಗಳು ಲೀಕ್ ಆಗುತ್ತಿದ್ದು, ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ. ಇದರಲ್ಲಿ ಅಬ್ಸಿಡಿಯನ್, ಪಿಂಗಾಣಿ, ಬೇ ಮತ್ತು ಮಿಂಟ್, ಪ್ರಕಾಶಮಾನವಾದ ಆರೇಂಜ್ ಬಣ್ಣದಲ್ಲಿ ಈ ಫೋನ್ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಣ್ಣದ ಶ್ರೇಣಿಯನ್ನು ವಿಸ್ತರಣೆ ಮಾಡಲು ಗೂಗಲ್ ಮುಂದಾಗಿದೆ.
ಇದರ ಪೂರ್ವವರ್ತಿಯಾದ ಪಿಕ್ಸೆಲ್ 7a ನಂತೆಯೇ, ಪಿಕ್ಸೆಲ್ 8a ಅದರ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ವಿವಿಧ ಪರಿಸರದಲ್ಲಿ ಈ ಫೋನ್ ಉತ್ತಮವಾಗಿ ಕೆಲಸ ಮಾಡಲಿದೆ.
ಇದರ ಜೊತೆಗೆ ಪಿಕ್ಸೆಲ್ 8a ಟೆನ್ಸರ್ G3 ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದ್ದು, ಇದು ದೈನಂದಿನ ಕಾರ್ಯಗಳಿಗೆ ತಡೆರಹಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಡಿವೈಸ್ OIS ನೊಂದಿಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದ್ದು, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿರಲಿದೆ ಎನ್ನಲಾಗಿದ್ದು, ಪ್ರಭಾವಶಾಲಿ ಫೋಟೋಗ್ರಫಿ ಸಾಮರ್ಥ್ಯದ ಭರವಸೆ ನೀಡಲಾಗಿದೆ.

ಹೆಚ್ಚುವರಿ ಫೀಚರ್ಸ್ ವಿಚಾರಕ್ಕೆ ಬಂದರೆ ಈ ಫೋನ್ ಮ್ಯಾಜಿಕ್ ಎರೇಸರ್, ಆಡಿಯೊ ಮ್ಯಾಜಿಕ್ ಎರೇಸರ್, ಬೆಸ್ಟ್ ಟೇಕ್, ಸರ್ಕಲ್ ಟು ಸರ್ಕಲ್ ಮತ್ತು ಲೈವ್ ಟ್ರಾನ್ಸ್‌ಲೇಟ್‌ನಂತಹ ವಿವಿಧ ಎಐ ಫೀಚರ್ಸ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಪಿಕ್ಸೆಲ್ 8a ನೊಂದಿಗೆ ಸಮಗ್ರ ಬಳಕೆದಾರ ಅನುಭವವನ್ನು ನೀಡಲು ಗೂಗಲ್ ಗುರಿ ಹೊಂದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 24 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದ್ದು, ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.
ಈ ಫೋನ್‌ನ ಬೆಲೆ ವಿಚಾರಕ್ಕೆ ಬಂದರೆ 128GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ $499 ಬೆಲೆ ಹೊಂದಿರಲಿದೆ ಎನ್ನಲಾಗಿದ್ದು, 256GB ರೂಪಾಂತರದ ಬೆಲೆ $559 ಎಂದು ಲೀಕ್ ಮಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಅದಂತೆ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ಸ್ವಲ್ಪ ಹೆಚ್ಚಿರಬಹುದು ಎಂದೂ ಸಹ ಹೇಳಲಾಗಿದೆ. ಅಂದರೆ ಸುಮಾರು 43,999 ರೂ.ಗಳಾಗಿರಲಿದೆ ಎಂದು ತಿಳಿದುಬಂದಿದೆ.

ಅದರಂತೆ ಪಿಕ್ಸೆಲ್ 8 ಸರಣಿಯಂತೆಯೇ ಏಳು ವರ್ಷಗಳ ಆಂಡ್ರಾಯ್ಡ್ ಮತ್ತು ಭದ್ರತಾ ನವೀಕರಣಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, ಲಾಂಚ್ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಮೇ 14 ರಂದು ನಿಗದಿಪಡಿಸಲಾದ ಗೂಗಲ್ I/O ಈವೆಂಟ್‌ನಲ್ಲಿ ಈ ಫೋನ್ ಲಾಂಚ್ ಆಗಬಹುದು ಎಂಬ ಮಾಹಿತಿ ಇದೆ. ಈ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








