Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್‌ ಪಿಕ್ಸೆಲ್‌ 8a ಖರೀದಿಗೆ ಲಭ್ಯ.. ಬೆಲೆ ಎಷ್ಟು? ಫೀಚರ್ಸ್‌ ಏನು?

ಗೂಗಲ್‌ ಕಂಪನಿಯು ಇತ್ತೀಚಿಗೆ ಹೊಸದಾಗಿ ಗೂಗಲ್‌ ಪಿಕ್ಸೆಲ್‌ 8a ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಭಿನ್ನ ಫೀಚರ್ಸ್‌ಗಳಿಂದ ಇದು ಗ್ರಾಹಕರನ್ನು ಸೆಳೆದಿದೆ. ಈ ಫೋನ್ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಇಂದು ಮುಂಜಾನೆ 6:30am ರಿಂದ ಭಾರತದಲ್ಲಿ ಮೊದಲ ಮಾರಾಟ ಪ್ರಾರಂಭಿಸಿದೆ.

ಹೌದು, ಗೂಗಲ್‌ ಸಂಸ್ಥೆಯ ಗೂಗಲ್‌ ಪಿಕ್ಸೆಲ್‌ 8a ಫೋನಿನ ಫಸ್ಟ್‌ ಸೇಲ್‌ ಇಂದು (ಮೇ 14) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಶುರುವಾಗಿದೆ. ಖರೀದಿದಾರರು ಈ ಫೋನ್‌ ಅನ್ನು ಪ್ರಿ-ಬುಕಿಂಗ್ ಮಾಡಬಹುದಾಗಿದೆ. 128GB ಸ್ಟೋರೇಜ್‌ನ ಈ ಫೋನಿನ ಆರಂಭಿಕ ಬೆಲೆಯು 52,999ರೂ. ಗಳು ಆಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್‌ ಪಿಕ್ಸೆಲ್‌ 8a ಖರೀದಿಗೆ ಲಭ್ಯ.. ಬೆಲೆ ಎಷ್ಟು?

ಹಾಗೆಯೇ ಆಯ್ದ ಕೆಲವು ಬ್ಯಾಂಕ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಇನ್ನು ಈ ಫೋನ್‌ ಅಬ್ಸಿಡಿಯನ್, ಪೊರ್ಸೈನ್, ಬೇ ಮತ್ತು ಅಲೋ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಗೂಗಲ್‌ ಪಿಕ್ಸೆಲ್‌ 8a ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸೆಲ್‌ 8a ಫೀಚರ್ಸ್‌

ಗೂಗಲ್‌ನ ಈ ಸ್ಮಾರ್ಟ್‌ಫೋನ್ 1080 x 2400 ರೆಸಲ್ಯೂಶನ್ ಮತ್ತು 430 PPI ಸಾಮರ್ಥ್ಯದ ಹೊಂದಿರುವ OLED ಆಕ್ಟುವಾ 6.1 ಇಂಚಿನ ಡಿಸ್‌ಪ್ಲೇ ಪಡೆದಿದೆ. ಇದು 120 Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಇದು ಬೆಂಬಲಿಸಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಆಲ್ವೇಸ್‌ ಆನ್ ಡಿಸ್‌ಪ್ಲೇ ಪಡೆದಿದ್ದು, ಗರಿಷ್ಠ ಬ್ರೈಟ್‌ನೆಸ್ 2000 ನಿಟ್ಸ್‌ ಆಗಿದೆ.

ಈ ಮೊಬೈಲ್‌ ಗೂಗಲ್‌ನ ಟೆನ್ಸರ್‌ G3 ಚಿಪ್‌ಸೆಟ್ ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದೆ. ಹಾಗೆಯೇ ಈ ಫೋನ್ 128GB ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಇದು ಆಂಡ್ರಾಯ್ಡ್‌ ಓಎಸ್‌ ಅಪ್‌ಗ್ರೇಡ್‌ಗಳನ್ನು ಒಳಗೊಂಡಂತೆ ಏಳು ವರ್ಷಗಳ ಸಾಫ್ಟ್‌ವೇರ್ ಸಪೋರ್ಟ್‌ ಸಹ ಪಡೆಯುತ್ತದೆ.

ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಥಮ ಕ್ಯಾಮೆರಾ 64 ಮೆಗಾಪಿಕ್ಸೆಲ್ ಆಗಿದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂಭಾಗದಲ್ಲಿ ನೀಡಲಾಗಿದೆ.

ಗೂಗಲ್‌ ಪಿಕ್ಸೆಲ್‌ 8a ಫೋನ್ 4492 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದರೊಂದಿಗೆ 27W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಹೊಂದಿದೆ. ಉಳಿದಂತೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳು ಇದ್ದು, ಮ್ಯಾಜಿಕ್ ಎಡಿಟರ್, ಬೆಸ್ಟ್ ಟೇಕ್, ಆಡಿಯೊ ಮ್ಯಾಜಿಕ್ ಎರೇಸರ್ ಮತ್ತು ಅಲ್ಟ್ರಾ ಎಚ್‌ಡಿಆರ್ ಮೋಡ್ ಸೇರಿದಂತೆ ಇನ್ನು ಹಲವು ಆಕರ್ಷಕ ಆಯ್ಕೆಗಳನ್ನು ಪಡೆದಿದೆ.

ಈ ಫೋನ್‌ ರಿಯರ್‌ ಪ್ಯಾನಲ್‌ ಮ್ಯಾಟ್ ಫಿನಿಶ್ ಮತ್ತು ಪಾಲಿಶ್ ಮಾಡಿದ ಅಲ್ಯೂಮಿನಿಯಂ ಫ್ರೇಮ್ ರಚನೆ ಅನ್ನು ಪಡೆದಿದೆ. ಇನ್ನು ಇದು ಒಟ್ಟಾರೆ 188 ಗ್ರಾಂ ತೂಕ ಹೊಂದಿದ್ದು, 152.1mm x 72.7mm x 8.9mm ಸುತ್ತಳತೆಯಲ್ಲಿ ಕಾಣಿಸಿಕೊಂಡಿದೆ.

ಈ ಫೋನ್‌ 128GB ಹಾಗೂ 256 GB ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಜೊತೆಗೆ ಅಬ್ಸಿಡಿಯನ್, ಪೊರ್ಸೈನ್, ಬೇ ಮತ್ತು ಅಲೋ ಕಲರ್‌ಆಯ್ಕೆಗಳಲ್ಲಿ ದೊರೆಯುತ್ತದೆ. ಇನ್ನು ಇದರ 128GB ವೇರಿಯಂಟ್‌ ಬೆಲೆಯು 52,999 ರೂ. ಗಳು ಹಾಗೂ ಇದರ 256 GB ವೇರಿಯಂಟ್‌ ಬೆಲೆಯು 59,999ರೂ. ಆಗಿದೆ.

Best Mobiles in India

English summary
Google Pixel 8a sale in India started via Flipkart. check offer price and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+