Home
ಸುದ್ದಿಜಾಲ

ಇಂದು Google Pixel 9 Pro ಸೇಲ್‌; ಪವರ್‌ಫುಲ್‌ ಪ್ರೊಸೆಸರ್‌, ಬೆಸ್ಟ್‌ ಕ್ಯಾಮೆರಾ!

ಗೂಗಲ್‌ ಮೊಬೈಲ್ ಸಂಸ್ಥೆಯು ನೂತನವಾಗಿ ಲಾಂಚ್‌ ಮಾಡಿರುವ ಗೂಗಲ್‌ ಪಿಕ್ಸಲ್‌ 9 ಪ್ರೊ 5G (Google Pixel 9 Pro) ಮೊಬೈಲ್‌ ಕೆಲವು ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್‌ ಇಂದು (ಅಕ್ಟೋಬರ್‌ 17 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್, ರಿಯಲನ್ಸ್‌ ಡಿಜಿಟಲ್‌ ಮೂಲಕ ಭಾರತದಲ್ಲಿ ಸೇಲ್‌ ಶುರು ಮಾಡಲಿದೆ. ಅಂದಹಾಗೆ ಈ ಮೊಬೈಲ್‌ ಗೂಗಲ್‌ Tensor G4 ಪ್ರೊಸೆಸರ್‌ ಹಾಗೂ ಟೈಟಾನ್‌ M2 ಸೆಕ್ಯುರಿಟಿ ಚಿಪ್‌ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ, ರಿಲಯನ್ಸ್‌ ಡಿಜಿಟಲ್‌ನಲ್ಲಿ ಇಂದು ಗೂಗಲ್‌ ಪಿಕ್ಸಲ್‌ 9 ಪ್ರೊ 5G (Google Pixel 9 Pro) ಸೇಲ್‌ ಪ್ರಾರಂಭ ಆಗಲಿದೆ. ಇನ್ನು ಈ ಮೊಬೈಲ್‌ 16GB RAM + 256GB ವೇರಿಯಂಟ್‌ ಆಯ್ಕೆ ಪಡೆದಿದ್ದು, ಹಾಗೆಯೇ ಇದು 4700mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ.

ಇಂದು Google Pixel 9 Pro ಸೇಲ್‌; ಪವರ್‌ಫುಲ್‌ ಪ್ರೊಸೆಸರ್‌, ಬೆಸ್ಟ್‌ ಕ್ಯಾಮೆರಾ

ಇನ್ನು ಗೂಗಲ್‌ ಸಂಸ್ಥೆಯ ಈ ದೈತ್ಯ ಮೊಬೈಲ್‌ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಮುಂಭಾಗದಲ್ಲಿ 42 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಇನ್ನುಳಿದಂತೆ ಗೂಗಲ್‌ ಪಿಕ್ಸಲ್‌ 9 ಪ್ರೊ 5G (Google Pixel 9 Pro) ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಗೂಗಲ್‌ ಪಿಕ್ಸಲ್‌ 9 ಪ್ರೊ 5G - ಫೀಚರ್ಸ್‌

ಗೂಗಲ್‌ ಪಿಕ್ಸಲ್‌ 9 ಪ್ರೊ 5G ಮೊಬೈಲ್‌ 6.3 ಇಂಚಿನ ಡಿಸ್‌ಪ್ಲೇ LTPO AMOLED ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1280 x 2856 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದುಕೊಂಡಿದೆ. ಇದರೊಂದಿಗೆ ಇದು 1-120 Hz ರಿಫ್ರೆಶ್ ರೇಟ್ ಸೌಲಭ್ಯ, 3000 nits ಗರಿಷ್ಠ ಬ್ರೈಟ್ನೆಸ್‌, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ Victus 2 ರಕ್ಷಣೆ ಸಹ ಪಡೆದಿದೆ.

ಗೂಗಲ್‌ ಪಿಕ್ಸಲ್‌ 9 ಪ್ರೊ 5G ಮೊಬೈಲ್‌ ಗೂಗಲ್‌ Tensor G4 ಪ್ರೊಸೆಸರ್‌ ಹಾಗೂ ಟೈಟಾನ್‌ M2 ಸೆಕ್ಯುರಿಟಿ ಚಿಪ್‌ ಸೌಲಭ್ಯ ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 16GB RAM + 256GB ವೇರಿಯಂಟ್‌ ಆಯ್ಕೆ ಪಡೆದಿದ್ದು, 7 ವರ್ಷಗಳ OS ನವೀಕರಣ ಮಾಡಲು ಸಪೋರ್ಟ್ ಮಾಡಲಿದೆ.

ಗೂಗಲ್‌ ಪಿಕ್ಸಲ್‌ 9 ಪ್ರೊ 5G ಮೊಬೈಲ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೌಲಭ್ಯ ಪಡೆದಿದೆ. ಇನ್ನು ಇದರ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮಾವಗಿ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿವೆ. ಮುಂಭಾಗದಲ್ಲಿ ಸಹ 42 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಗೂಗಲ್‌ ಪಿಕ್ಸಲ್‌ 9 ಪ್ರೊ 5G ಮೊಬೈಲ್‌ 4700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 27W ವೈರ್ಡ್ ಫಾಸ್ಟ್ ಚಾರ್ಜಿಂಗ್, 21W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು 5G SA/NA, 4G VoLTE, Wi-Fi 7 802.11be (2.4/5 GHz), ಬ್ಲೂಟೂತ್ 5.3 LE, GPS, USB ಟೈಪ್ C 3.2, NFC ಆಯ್ಕೆ ಒಳಗೊಂಡಿದೆ. ಇನ್ನು ಈ ಫೋನಿನ 16GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 1,09,999ರೂ. ಗಳು ಆಗಿದೆ. ಹಾಗೆಯೇ ಇದು ಹ್ಯಾಝೆಲ್, ಪಿಂಗಾಣಿ, ರೋಸ್ ಕ್ವಾರ್ಟ್ಜ್ ಮತ್ತು ಅಬ್ಸಿಡಿಯನ್ ಕಲರ್‌ ಆಯ್ಕೆಗಳಲ್ಲಿ ಸಿಗಲಿದೆ.

Best Mobiles in India

English summary
Google Pixel 9 Pro First Sale Today on Flipkart. Check Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+