Home
ಸುದ್ದಿಜಾಲ

Google Pixel 9 Pro Fold ಫೋನ್‌ ಬಿಡುಗಡೆ!..ಅಚ್ಚರಿಯ ಫೀಚರ್ಸ್‌, ದುಬಾರಿ ಬೆಲೆ!

ಟೆಕ್ ದೊಡ್ಡಣ್ಣ ಎನಿಸಿರುವ ಗೂಗಲ್‌ (Google) ಸಂಸ್ಥೆಯು ಹೊಸದಾಗಿ ಗೂಗಲ್‌ ಪಿಕ್ಸಲ್‌ 9, ಗೂಗಲ್‌ ಪಿಕ್ಸಲ್‌ 9 ಪ್ರೊ, ಗೂಗಲ್‌ ಪಿಕ್ಸಲ್‌ 9 ‍XL ಸ್ಮಾರ್ಟ್‌ಫೋನ್‌ಗಳ ಜೊತೆಗೆ ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ (Google Pixel 9 Pro Fold) ಫೋನ್‌ ಅನ್ನು ಲಾಂಚ್ ಮಾಡಿದೆ. ಇದು ಗೂಗಲ್‌ ಸಂಸ್ಥೆಯ ಮೊದಲ ಫೋಲ್ಡ್‌ ಮಾದರಿಯ ಫೋನ್‌ ಆಗಿದ್ದು, ಈ ಫೋನ್‌ ಮೂಲಕ ಸಂಸ್ಥೆಯು ಮಾರುಕಟ್ಟೆಯ ಚಿತ್ತ ಸೆಳೆದಿದೆ.

ಹೌದು, ಗೂಗಲ್‌ ಕಂಪನಿಯು ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ (Google Pixel 9 Pro Fold) ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಫೋನ್‌ 48 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರೊಂದಿಗೆ ಗೂಗಲ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ.

Google Pixel 9 Pro Fold ಫೋನ್‌ ಬಿಡುಗಡೆ!..ಅಚ್ಚರಿಯ ಫೀಚರ್ಸ್‌, ದುಬಾರಿ ಬೆಲೆ!

ಅಂದಹಾಗೆ ಈ ಫೋನ್‌ 16GB + 256GB RAM ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದು 4,650mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.ಹಾಗಾದರೇ ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಸ್ಮಾರ್ಟ್‌ಫೋನಿನ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಫೀಚರ್ಸ್‌

ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಮೊಬೈಲ್‌ ಎರಡು ಸ್ಕ್ರೀನ್‌ ಅನ್ನು ಒಳಗೊಂಡಿದೆ. ಇದರ ಮುಖ್ಯ ಸ್ಕ್ರೀನ್‌ 8 ಇಂಚು ಆಗಿದ್ದು, ಇದು 2152x2076 ಪಿಕ್ಸಲ್‌ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದು OLED ಸೂಪರ್ ಆಕ್ಚುವಲ್ ಫ್ಲೆಕ್ಸ್ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿದೆ. ಇನ್ನು ಕವರ್‌ ಸ್ಕ್ರೀನ್‌ 6.3 ಇಂಚಿನ OLED ಡಿಸ್‌ಪ್ಲೇ ಅನ್ನು ಹೊಂದಿದ್ದು, 1080 x 2424 ಪಿಕ್ಸಲ್‌ ರೆಸಲ್ಯೂಶನ್ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಕೂಡಾ ಪಡೆದಿದೆ.

ಅಂದಹಾಗೆ ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಫೋನ್‌ ಗೂಗಲ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್‌ ಸಪೋರ್ಟ್‌ ಸಹ ಇದೆ. ಇನ್ನು ಈ ಫೋನ್‌ 16GB + 256GB RAM ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ ಪಡೆದುಕೊಂಡಿದೆ.

ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾವು 10.8 ಮೆಗಾಪಿಕ್ಸಲ್‌ ಸೆನ್ಸಾರ್‌ ಹಾಗೆಯೇ ತೃತೀಯ ಕ್ಯಾಮೆರಾವು 10.5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 10 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಎರಡು ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಫೋನ್‌ 4650 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಅನುಗುಣವಾಗಿ 45W (PPS ಚಾರ್ಜರ್) ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಅಲ್ಲದೇ ಗ್ರಾಹಕರು Qi ವೈರ್‌ಲೆಸ್ ಚಾರ್ಜರ್‌ಗಳನ್ನು ಬಳಸಿ ಚಾರ್ಜ್ ಮಾಡಬಹುದು. ಇದು IPX8 ರೇಟಿಂಗ್ ಸೌಲಭ್ಯ ಪಡೆದಿದ್ದು, ವಾಟರ್‌ ರೆಸಿಸ್ಟೆನ್ಸ್‌ ಸೌಲಭ್ಯ ಪಡೆದಿದೆ.

ಬೆಲೆ ಹಾಗೂ ಲಭ್ಯತೆ
ಗೂಗಲ್‌ ಪಿಕ್ಸಲ್‌ 9 ಪ್ರೊ ಫೋಲ್ಡ್‌ ಫೋನಿನ 16GB + 256GB RAM ಸ್ಟೋರೇಜ್‌ ವೇರಿಯಂಟ್‌ ಬೆಲೆಯು 1,72,999ರೂ. ಗಳು ಆಗಿದೆ. ಇನ್ನು ಈ ಫೋನ್‌ ಅಬ್ಸಿಡಿಯನ್ ಮತ್ತು ಪಿಂಗಾಣಿ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅಂದಹಾಗೆ ಇದೇ ಆಗಷ್ಟ್‌ 22 ರಂದು ಫ್ಲಿಪ್‌ಕಾರ್ಟ್‌, ಕ್ರೋಮಾ, ರಿಲಯನ್ಸ್‌ ಡಿಜಿಟಲ್‌ ತಾಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Google Pixel 9 Pro Fold With Tensor G4 Chipset Launched in India. check Price, Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+