Google Pixel: ಗೂಗಲ್ ಪಿಕ್ಸೆಲ್ 9 ಪ್ರೊ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಗೊತ್ತಾ? ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
ಗೂಗಲ್ ಪಿಕ್ಸೆಲ್ (Google Pixel) ಫೋನ್‌ಗಳು ಬಳಕೆದಾರರಿಗೆ ಪ್ರೀಮಿಯಂ ಅನುಭವ ನಿಡಲಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಜನಪ್ರಿಯತೆ ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಗೂಗಲ್ ಪಿಕ್ಸೆಲ್ 9 ಪ್ರೊ (Google Pixel 9 Pro) ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.
ಹೌದು, ಗೂಗಲ್ ಪಿಕ್ಸೆಲ್ 9 ಪ್ರೊ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಲೀಕ್ ಆಗಿದ್ದು, ಈ ಮೂಲಕ ಗ್ರಾಹಕರಿಗೆ ಭಾರೀ ಕುತೂಹಲ ಉಂಟು ಮಾಡಲಾಗಿದೆ. ಈ ಫೋನ್ ವಿಶೇಷವಾದ ವಿನ್ಯಾಸ ಹೊಂದಿರಲಿದ್ದು, ಬಳಕೆದಾರರಿಗೆ ವಿವಿಧ ರೀತಿಯ ಅನುಕೂಲ ನೀಡುವ ತಂತ್ರಜ್ಞಾನದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಫೀಚರ್ಸ್ ಏನು?, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಪಿಕ್ಸೆಲ್ 9 ಪ್ರೊ: ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಕ್ಟೋಬರ್ 5, 2023 ರಂದು ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಂದರೆ ಲಾಂಚ್ ಆಗಲು ಸಾಕಷ್ಟು ವಾರಗಳು ಇರುವಾಗಲೇ ಈ ಫೋನ್ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳು ಕೇಳಿ ಬರುತ್ತಿವೆ. ಅಂದರೆ, ಈ ಫೋನ್ ಐಫೋನ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ನಂತೆಯೇ ಫ್ಲಾಟ್-ಎಡ್ಜ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.
ಜೊತೆಗೆ ಮುಂಬರುವ ಈ ಫೋನ್ ಪಂಚ್-ಹೋಲ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಇದರಲ್ಲಿ ಮತ್ತೊಂದು ಆಸಕ್ತಿದಾಯಕ ವಿನ್ಯಾಸದ ಅಂಶವೆಂದರೆ ಅಡಾಪ್ಟಿವ್ ಟಚ್ ತಂತ್ರಜ್ಞಾನ. ಒನ್‌ಪ್ಲಸ್ 12 ಸರಣಿಯಲ್ಲಿ ಕಾಣುವ ಆಕ್ವಾ ಟಚ್‌ನಂತೆಯೇ ಇದು ಇರಲಿದೆ. ಆದರೆ, ಈ ಮುಂಬರುವ ಫೋನ್ ಇನ್ನಷ್ಟು ಹೆಚ್ಚಿನ ಆಯ್ಕೆ ಪಡೆದಿರಲಿದೆ.

ಈ ಅಡಾಪ್ಟಿವ್ ಟಚ್ ಫೀಚರ್ಸ್ ಬಳಕೆದಾರರ ಪರಿಸರ ಮತ್ತು ಚಟುವಟಿಕೆಯ ಆಧಾರದ ಮೇಲೆ ಆಟೋಮ್ಯಾಟಿಕ್ ಆಗಿ ಡಿಸ್ಪ್ಲೇಯನ್ನ ಸರಿಹೊಂದಿಸುತ್ತದೆ. ಈ ಮೂಲಕ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಕೆಲಸ ಮಾಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಟೆನ್ಸರ್ G4 ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, Qi2 ವೈರ್‌ಲೆಸ್ ಚಾರ್ಜಿಂಗ್ ಸ್ಟ್ಯಾಂಡರ್ಡ್ ಅನ್ನು ಬೆಂಬಲಿಸುವ ಮೊದಲ ಫೋನ್‌ಗಳಲ್ಲಿ ಪಿಕ್ಸೆಲ್ 9 ಪ್ರಮುಖವಾಗಿರಲಿದೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲದೆ ಗೂಗಲ್ ತನ್ನ ಇತ್ತೀಚಿನ ಆಂಡ್ರಾಯ್ಡ್ ಪುನರಾವರ್ತನೆಯನ್ನು ಪಿಕ್ಸೆಲ್ 9 ಸರಣಿಯ ಜೊತೆಗೆ ಅನಾವರಣಗೊಳಿಸುವ ನಿರೀಕ್ಷೆಯಿದೆ. ಆಂಡ್ರಾಯ್ಡ್ 15 ಓಎಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು ಎಂಬ ವದಂತಿ ಇದೆ. ಮುಖ್ಯವಾಗಿ ಈ ಫೋನ್ ಗೂಗಲ್ ನ ಜೆಮಿನಿ ಎಐ ಚಿಪ್‌ನಿಂದ ನಡೆಸಲ್ಪಡುವ ಹೊಸ ಪಿಕ್ಸೆಲ್ ಅಸಿಸ್ಟೆಂಟ್ ಅನ್ನು ಹೊಂದಿರಲಿದೆ ಎನ್ನುವ ಪಿಸುಮಾತುಗಳು ಸಹ ಇವೆ.
ಮೊದಲೇ ಪಿಕ್ಸೆಲ್ ಫೋನ್‌ಗಳು ತಮ್ಮ ಅಸಾಧಾರಣ ಕ್ಯಾಮೆರಾಗಳಿಗೆ ಹೆಸರುವಾಸಿಯಾಗಿವೆ. ಅದರಂತೆ ಈ ಪಿಕ್ಸೆಲ್ 9 ಸರಣಿಯೊಂದಿಗೆ ಗೂಗಲ್ ಮೊಬೈಲ್ ಫೋಟೋಗ್ರಫಿಯನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಸ್ಟ್ಯಾಂಡರ್ಡ್ ಪಿಕ್ಸೆಲ್ 9 ನಲ್ಲಿ ಟೆಲಿಫೋಟೋ ಲೆನ್ಸ್ ಅನ್ನು ನೀಡಲಾಗುತ್ತದೆ ಎನ್ನಲಾಗಿದೆ. ಇದು ಮೊದಲ ಬಾರಿಗೆ ಪ್ರೊ ಮಾದರಿಗೆ ಹೊಂದಾಣಿಕೆಯಾಗುತ್ತದೆ. ಕ್ಯಾಮರಾ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಐ ಚಾಲಿತ ಸಾಫ್ಟ್‌ವೇರ್ ಪ್ರಕ್ರಿಯೆಗೆ ಆದ್ಯತೆ ನೀಡುವ ತನ್ನ ಪ್ರವೃತ್ತಿಯನ್ನು ಗೂಗಲ್ ಮುಂದುವರಿಸುವ ಸಾಧ್ಯತೆಯಿದೆ.

ಗೂಗಲ್ ಪಿಕ್ಸೆಲ್ 9 ಪ್ರೊ ಬಿಡುಗಡೆ ದಿನಾಂಕ ಮತ್ತು ನಿರೀಕ್ಷಿತ ಬೆಲೆ: ಗೂಗಲ್ ತನ್ನ ಪಿಕ್ಸೆಲ್ ಫೋನ್‌ಗಳನ್ನು ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುತ್ತದೆ. ಈ ವರ್ಷವೂ ಸಹ, ಅಕ್ಟೋಬರ್ ಆರಂಭದಲ್ಲಿ ಲಾಂಚ್ ಆಗಲಿದೆ ಎಂದು ಭಾವಿಸಬಹುದಾಗಿದೆ. ಬೆಲೆಗೆ ಸಂಬಂಧಿಸಿದಂತೆ ಈ ಫೋನ್ 9 ಸುಮಾರು $700 (58,418 ರೂ.ಗಳು) ಮತ್ತು ಪ್ರೊ ಆವೃತ್ತಿಯು $1,000 (83,391ರೂ.ಗಳು) ರಿಂದ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಬಹುದು.


Click it and Unblock the Notifications








