ಲಾಂಚ್ ಆಗಿಯೇ ಬಿಡ್ತು Google Pixel 9 ಸರಣಿ!..ಅಬ್ಬಬ್ಬಾ ಏನ್ ಫೀಚರ್ಸ್!
ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಗೂಗಲ್ (Google) ಸಂಸ್ಥೆಯು ತನ್ನ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 9 (Google Pixel 9 series) ಸರಣಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಈ ಸರಣಿಯು ಗೂಗಲ್ ಪಿಕ್ಸಲ್ 9, ಗೂಗಲ್ ಪಿಕ್ಸಲ್ 9 ಪ್ರೊ, ಗೂಗಲ್ ಪಿಕ್ಸಲ್ 9 ಪ್ರೊ XL ಹಾಗೂ ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಮಾಡೆಲ್‌ಗಳನ್ನು ಒಳಗೊಂಡಿದ್ದು, ಈ ಮೂರು ಫೋನ್‌ಗಳು
ಹೌದು, ಗೂಗಲ್ ಕಂಪನಿಯು ಯುಎಸ್‌ಎನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೂಗಲ್ ಪಿಕ್ಸಲ್ 9 ಸರಣಿಯನ್ನು ಲಾಂಚ್ ಮಾಡಿದೆ. ಇದು ಹಿಂದಿನ ಪಿಕ್ಸಲ್ 8 ಸರಣಿಯ ಮುಂದುವರಿದ ಭಾಗವಾಗಿದ್ದು, ಆದರೆ ಈ ಬಾರಿ ಹೊಸದಾಗಿ ಫೋಲ್ಡ್ ಮಾಡೆಲ್ ಸೇರಿದೆ. ಇನ್ನು ಗೂಗಲ್ ಪಿಕ್ಸಲ್ 9, ಗೂಗಲ್ ಪಿಕ್ಸಲ್ 9 ಪ್ರೊ ಹಾಗೂ ಗೂಗಲ್ ಪಿಕ್ಸಲ್ 9 ಪ್ರೊ XL ಮೊಬೈಲ್‌ಗಳು ಆಕರ್ಷಕ ಫೀಚರ್ಸ್ ಜೊತೆಗೆ ಸ್ಟೈಲಿಶ್ ಲುಕ್ ಮೂಲಕ ಹೆಚ್ಚಿನ ಗಮನ ಸೆಳೆಯುವ ರಚನೆ ಪಡೆದಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್ ಪಿಕ್ಸಲ್ 9 ಫೀಚರ್ಸ್
ಗೂಗಲ್ ಪಿಕ್ಸಲ್ 9 ( Google Pixel 9 ) ಫೋನ್ 6.3 ಇಂಚಿನ OLED ಡಿಸ್‌ಪ್ಲೇ ಅನ್ನು ಹೊಂದಿದ್ದು, 1080 x 2424 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಕೂಡಾ ಪಡೆದಿದೆ. ಅಲ್ಲದೇ ಇದು ಟಾಪ್-ಎಂಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಸ್ಕ್ರೀನ್ ರಕ್ಷಣೆ ಪಡೆದಿದೆ. ಅಂದಹಾಗೆ ಈ ಫೋನ್ Tensor G4 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿದೆ. ಈ ಫೋನ್ 12GB RAM + 128GB ಮತ್ತು 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಅಲ್ಲದೇ ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಕ್ಯಾಮೆರಾವು 8x ಜೂಮ್ ಸೌಲಭ್ಯ ಸಹ ಪಡೆದಿದೆ. ಹಾಗೆಯೇ 4700mAh ಬ್ಯಾಟರಿ ಬ್ಯಾಕ್‌ಅಪ್ ಇದ್ದು, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಗೂಗಲ್ ಪಿಕ್ಸಲ್ 9 ಪ್ರೊ ಫೀಚರ್ಸ್
ಗೂಗಲ್ ಪಿಕ್ಸಲ್ 9 ಪ್ರೊ ( Google Pixel 9 Pro ) ಫೋನ್ 6.3 ಇಂಚಿನ LTPO OLED ಪ್ಯಾನೆಲ್ ಹೊಂದಿದ್ದು, 1280 x 2856 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್ ಸಹ ಟೆನ್ಸರ್ G3 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿದೆ. ಈ ಫೋನ್ 16GB RAM + 128GB ಹಾಗೂ 16GB + 1TB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಅಲ್ಲದೇ ಈ ನೂತನ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 48 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇದರೊಂದಿಗೆ 4700mAh ಬ್ಯಾಟರಿ ಬ್ಯಾಕ್‌ಅಪ್ ಇದ್ದು, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಗೂಗಲ್ ಪಿಕ್ಸಲ್ 9 ಪ್ರೊ XL ಫೀಚರ್ಸ್
ಗೂಗಲ್ ಪಿಕ್ಸಲ್ 9 ಪ್ರೊ XL ( Google Pixel 9 XL )ಫೋನ್ 6.8 ಇಂಚಿನ LTPO OLED ಪ್ಯಾನೆಲ್ ಹೊಂದಿದ್ದು, 1344 x 2992 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಕೂಡಾ ಪಡೆದಿದೆ. ಅಂದಹಾಗೆ ಈ ಫೋನ್ ಸಹ ಟೆನ್ಸರ್ G3 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿದೆ. ಈ ಫೋನ್ 16GB + 128GB, 16GB + 256GB, 16GB + 512GB ಹಾಗೂ 16GB + 1TB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಅಲ್ಲದೇ ಈ ನೂತನ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 48 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇದರೊಂದಿಗೆ 5,060mAh ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಇದರ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು 30 ನಿಮಿಷದಲ್ಲಿ 70% ನಷ್ಟು ಚಾರ್ಜಿಂಗ್ ಒದಗಿಸಲಿದೆ.
ಬೆಲೆ ಹಾಗೂ ಲಭ್ಯತೆ
ಗೂಗಲ್ ಪಿಕ್ಸಲ್ 9 ಫೋನಿನ ಆರಂಭಿಕ ಬೆಲೆ 74,999ರೂ. ಆಗಿದೆ
ಗೂಗಲ್ ಪಿಕ್ಸಲ್ 9 ಪ್ರೊ ಫೋನಿನ ಆರಂಭಿಕ ಬೆಲೆ 94,999ರೂ. ಆಗಿದೆ
ಗೂಗಲ್ ಪಿಕ್ಸಲ್ 9 ಪ್ರೊ XL ಫೋನಿನ ಆರಂಭಿಕ ಬೆಲೆ 1,14,999ರೂ. ಆಗಿದೆ.
ಇನ್ನು ಈ ಸರಣಿಯು ಅಬ್ಸಿಡಿಯನ್, ಪಿಂಗಾಣಿ, ವಿಂಟರ್‌ಗ್ರೀನ್, ಪಿಯೋನಿ, ಹ್ಯಾಝೆಲ್ ಮತ್ತು ರೋಸ್ ಕ್ವಾರ್ಟ್ಜ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಆಗಷ್ಟ್ 14 ರಿಂದ ಪ್ರಿ-ಆರ್ಡರ್ ಶುರುವಾಗಲಿದ್ದು, ಆ. 22 ಖರೀದಿಗೆ ಲಭ್ಯ ಆಗಲಿವೆ. ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ತಾಣಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








