Home
ಸುದ್ದಿಜಾಲ

Google Pixel: ಸ್ಮಾರ್ಟ್‌ಫೋನ್‌ ವಲಯದಲ್ಲಿ ಅಲೆ ಎಬ್ಬಿಸಲು ಬರುತ್ತಿದೆ ಗೂಗಲ್‌ ಪಿಕ್ಸೆಲ್‌ 9! ಹೇಗಿರಲಿದೆ ಈ ಫೋನ್?

ಟೆಕ್‌ ದೈತ್ಯ ಗೂಗಲ್‌ (Google) ಟೆಕ್‌ ವಲಯದ ಎಲ್ಲಾ ವಿಭಾಗಗಳಲ್ಲಿ ತನ್ನದೇ ಆದ ಪ್ರಭಾವ ಬೀರಿದೆ. ಅದರಲ್ಲೂ ಗೂಗಲ್‌ನ ಡಿವೈಸ್‌ಗಳಿಗೆ ವಿಶೇಷವಾದ ಜನಪ್ರಿಯತೆ ಇದ್ದು, ಈ ವಿಭಾಗದಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಅದರಂತೆ ಈಗ ಮುಂದಿನ ಸರಣಿಯ ಗೂಗಲ್‌ ಪಿಕ್ಸೆಲ್‌ ಫೋನ್‌ಗಳ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ.

ಹೌದು, ಗೂಗಲ್‌ ಪಿಕ್ಸೆಲ್‌ 8 ಸರಣಿ (Google Pixel 8 Series) ಫೋನ್‌ಗಳು ಈ ಕ್ಷಣಕ್ಕೂ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್‌ ಮಾಡುತ್ತಿವೆ. ಅದರಂತೆ ಇನ್ನಷ್ಟು ಆಕರ್ಷಣೆಯನ್ನು ಹೆಚ್ಚು ಮಾಡಲು ಇದೇ ಫೋನ್‌ ಅನ್ನು ಗೂಗಲ್‌ ಹೊಸ ಬಣ್ಣದಲ್ಲಿ ಘೋಷಣೆ ಮಾಡಿದೆ. ಇದು ಒಂದು ಕಡೆದ ಖುಷಿ ವಿಚಾರವಾದರೆ ಮುಂಬರುವ ಗೂಗಲ್ ಪಿಕ್ಸೆಲ್ 9 (Google Pixel 9) ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ?, ಇದು ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ವಲಯದಲ್ಲಿ ಅಲೆ ಎಬ್ಬಿಸಲು ಬರುತ್ತಿದೆ ಗೂಗಲ್‌ ಪಿಕ್ಸೆಲ್‌ 9!

ಗೂಗಲ್ ಪಿಕ್ಸೆಲ್ 9 ಸ್ಮಾರ್ಟ್‌ಫೋನ್‌: ಈ ವಾರದ ಆರಂಭದಲ್ಲಿ ಗೂಗಲ್‌ ಪಿಕ್ಸೆಲ್‌ 9 ಪ್ರೊ (Google Pixel 9 Pro) ನ ರೆಂಡರ್‌ ಬಹಳ ಸದ್ದು ಮಾಡಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಗೂಗಲ್ ಪಿಕ್ಸೆಲ್ 9 ನ ಕೆಲವು ವಿಶೇಷ ಬಗ್ಗೆ ಆನ್‌ಲೀಕ್ಸ್‌ ಪೋಸ್ಟ್‌ ಮಾಡಿದೆ. ಈ ಮೂಲಕ ಈ ಫೋನ್ ಫ್ಲಾಟ್ ಫ್ರೇಮ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದು ಪಿಕ್ಸೆಲ್ 9 ಪ್ರೊ ರಿಯರ್‌ ಪ್ಯಾನಲ್‌ ಅನ್ನು ದೃಢಪಡಿಸಿದೆ.

ಇನ್ನು ಪ್ರೊ ಅಲ್ಲದ ಪಿಕ್ಸೆಲ್ ಸ್ಮಾರ್ಟ್‌ಫೋನ್‌ ವೇರಿಯಂಟ್‌ನಲ್ಲಿ ಮೊದಲ ಬಾರಿಗೆ ಟೆಲಿಫೋಟೋ ಕ್ಯಾಮರಾ ಸೇರಿದಂತೆ ಟ್ರಿಪಲ್ ರಿಯರ್‌ ಕ್ಯಾಮೆರಾ ಇರಲಿದೆ ಎಂದು ತಿಳಿದುಬಂದಿದ್ದು, ಈ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಪ್ರೊ ಮಾದರಿಗಿಂತ ಕಡಿಮೆ ವೆಚ್ಚವನ್ನು ಹೊಂದುವ ಪರಿಣಾಮ ಇದು FHD + ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್‌ಫೋನ್‌ ವಲಯದಲ್ಲಿ ಅಲೆ ಎಬ್ಬಿಸಲು ಬರುತ್ತಿದೆ ಗೂಗಲ್‌ ಪಿಕ್ಸೆಲ್‌ 9!

ಇದರೊಂದಿಗೆ ಈ ವಿಶೇಷ ಫೋನ್‌ 152.8 x 71.9 x 8.5~12.0mm ಸುತ್ತಳತೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಇದು ಪಿಕ್ಸೆಲ್ 8 ನಲ್ಲಿನ 6.2 ಇಂಚಿನ ಡಿಸ್‌ಪ್ಲೇಗಿಂತ ಸ್ವಲ್ಪ ಚಿಕ್ಕದಾಗಿದೆ ಎಂದು ತೋರುತ್ತದೆ. ಅಷ್ಟೇ ಅಲ್ಲದೆ ಇದು ತೆಳ್ಳನೆಯ ಶೈಲಿಯನ್ನೂ ಪಡೆದಿರಲಿದೆ. ಉಳಿದಂತೆ ಈ ಫೋನ್‌ನಲ್ಲಿ ಬಟನ್ ಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.

ಅದಾಗ್ಯೂ ಸಿಮ್‌ ಸ್ಲಾಟ್ ಅನ್ನು ಎಡಭಾಗದಿಂದ ಕೆಳಕ್ಕೆ ಸರಿಸಲಾಗಿದೆ. ಇನ್ನು ಫೋನ್ ಲೋಹದ ಚೌಕಟ್ಟನ್ನು ಹೊಂದಿರುವ ಕಾರಣದಿಂದಾಗಿ ನೀವು ಆಂಟೆನಾ ಬ್ಯಾಂಡ್‌ಗಳನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೆ ರೆಡೊಂಡೋ ಎಂದು ಕರೆಯಲ್ಪಡುವ ಟೆನ್ಸರ್ G4, ಪಿಕ್ಸೆಲ್‌ 9 ಸರಣಿ ಫೋನ್‌ಗಳಿಗೆ ಶಕ್ತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇಷ್ಟಾದರೂ ಈ ಫೋನ್‌ನ ಇತರ ಫೀಚರ್ಸ್‌ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕೆಲವೇ ದಿನಗಳಲ್ಲಿ ಈ ಫೋನ್‌ನ ಫೀಚರ್ಸ್‌ ಬಹಿರಂಗವಾಗಲಿದ್ದು, ಹೆಚ್ಚಿನ ಮಾಹಿತಿಗೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

ಸ್ಮಾರ್ಟ್‌ಫೋನ್‌ ವಲಯದಲ್ಲಿ ಅಲೆ ಎಬ್ಬಿಸಲು ಬರುತ್ತಿದೆ ಗೂಗಲ್‌ ಪಿಕ್ಸೆಲ್‌ 9!

ಪಿಕ್ಸೆಲ್ 8 ಮತ್ತು 8 ಪ್ರೊ ಸ್ಮಾರ್ಟ್‌ಫೋನ್‌ ಹೊಸ ಕಲರ್‌ನಲ್ಲಿ: ಗೂಗಲ್ ಅಕ್ಟೋಬರ್‌ನಲ್ಲಿ ಪಿಕ್ಸೆಲ್ 8 ಮತ್ತು 8 ಪ್ರೊ (Pixel 8 and 8 Pro smartphones) ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿತ್ತು. ಪಿಕ್ಸೆಲ್ 8 ಅನ್ನು ಅಬ್ಸಿಡಿಯನ್, ಹ್ಯಾಝೆಲ್ ಮತ್ತು ರೋಸ್ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದರೆ ಪಿಕ್ಸೆಲ್‌ 8 ಪ್ರೊ ಅನ್ನು ಅಬ್ಸಿಡಿಯನ್, ಬೇ ಮತ್ತು ಪೊರ್ಚೆಲೈನ್ ಬಣ್ಣಗಳಲ್ಲಿ ಲಾಂಚ್ ಮಾಡಿತ್ತು. ಆದರೆ ಈಗ ಅಧಿಕೃತವಾಗಿ ಹೊಸ ಮಿಂಟ್ ಬಣ್ಣದ ಆಯ್ಕೆಯಲ್ಲಿ ಈ ಫೋನ್‌ ಅನ್ನು ಮತ್ತೆ ಪರಿಚಯಿಸಿದೆ.

Best Mobiles in India

English summary
Google Pixel 8 Series phones are making a big sound in the market right now. Accordingly, now some information about the Google Pixel 9 smartphone has been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+