Home
ಸುದ್ದಿಜಾಲ

ಬಂದೇ ಬಿಡ್ತು ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌!..ಜಬರ್ದಸ್ತ್ ಫೀಚರ್ಸ್‌!

ಗೂಗಲ್‌ I/O 2023 ಕಾರ್ಯಕ್ರಮದಲ್ಲಿ ಗೂಗಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗೂಗಲ್‌ ಪಿಕ್ಸಲ್‌ ಫೋಲ್ಡ್‌ (Google Pixel Fold) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಗೂಗಲ್‌ ಸಂಸ್ಥೆಯ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ.

ಹೌದು, ಗೂಗಲ್‌ ಸಂಸ್ಥೆಯು ಹೊಸದಾಗಿ ಗೂಗಲ್‌ ಪಿಕ್ಸಲ್‌ ಫೋಲ್ಡ್‌ (Google Pixel Fold) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಫೋನ್‌ ಪ್ರೀಮಿಯಂ ಹಾರ್ಡ್‌ವೇರ್ ಮತ್ತು ಕೆಲವು ಸ್ಮಾರ್ಟ್ ಗೂಗಲ್ ಪಿಕ್ಸೆಲ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮುಖ್ಯವಾಗಿ ಇದು ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಬಂದೇ ಬಿಡ್ತು ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌!..ಜಬರ್ದಸ್ತ್ ಫೀಚರ್ಸ್‌!

ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, 5x ಆಪ್ಟಿಕಲ್ ಜೂಮ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನ್‌ ಕವರ್‌ ಸ್ಕ್ರೀನ್‌ನಲ್ಲಿ 8.3 ಮೆಗಾ ಪಿಕ್ಸಲ್‌ ಕ್ಯಾಮೆರಾ ಒಳಗೊಂಡಿದೆ. ಹಾಗಾದರೆ ಇನ್ನುಳಿದಂತೆ ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಡಿಸ್‌ಪ್ಲೇ ರಚನೆ : ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌ 5.8 ಇಂಚಿನ ಕವರ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 7.6 ಇಂಚಿನ ಹೊಂದಿಕೊಳ್ಳುವ ಸ್ಕ್ರೀನ್‌ ಪಡೆದಿದೆ. ಈ ಎರಡೂ ಸ್ಕ್ರೀನ್‌ಗಳು 120Hz ರಿಫ್ರೆಶ್ ದರವನ್ನು ಪಡೆದಿದ್ದು, OLED ಪ್ಯಾನೆಲ್‌ ಹೊಂದಿವೆ.

ಬಂದೇ ಬಿಡ್ತು ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌!..ಜಬರ್ದಸ್ತ್ ಫೀಚರ್ಸ್‌!

ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಪ್ರೊಸೆಸರ್ ಪವರ್ : ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌ ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಆಂಡ್ರಾಯ್ಡ್‌ 14 ಓಎಸ್‌ ಅಪ್‌ಡೇಟ್‌ ಸಪೋರ್ಟ್‌ ಸಹ ಒಳಗೊಂಡಿದೆ. ಇನ್ನು ಈ ಫೋನ್ 256GB / 512GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ.

ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಕ್ಯಾಮೆರಾ ಸೆನ್ಸಾರ್ : ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌ ತ್ರಿವಳಿ ಕ್ಯಾಮೆರಾ ಪಡೆದಿದ್ದು, ಅವುಗಳು ಕ್ರಮವಾಗಿ 48 ಮೆಗಾ ಪಿಕ್ಸಲ್‌ + 10.8 ಮೆಗಾ ಪಿಕ್ಸಲ್‌ + 10.8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಪೋರ್ಟ್‌ ಪಡೆದಿವೆ. ಇನ್ನು ಕಲರ್‌ ಸ್ಕ್ರೀನ್ನ್ಲಿ 8.3 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿದೆ.

ಬಂದೇ ಬಿಡ್ತು ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌!..ಜಬರ್ದಸ್ತ್ ಫೀಚರ್ಸ್‌!

ಕ್ಯಾಮೆರಾ ಫೀಚರ್ಸ್‌ : ಗೂಗಲ್‌ ಪಿಕ್ಸೆಲ್ ಫೋಲ್ಡ್ 5x ಆಪ್ಟಿಕಲ್ ಜೂಮ್, ರಿಯಲ್ ಟೋನ್, ನೈಟ್ ಸೈಟ್, ಪೋರ್ಟ್ರೇಟ್ ಫೋಟೋಗ್ರಫಿ ಮತ್ತು 10-ಬಿಟ್ HDR ವೀಡಿಯೊದೊಂದಿಗೆ ಸೂಪರ್ ರೆಸ್ ಜೂಮ್ ಅನ್ನು ಹೊಂದಿವೆ.

ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಬ್ಯಾಟರಿ ಬ್ಯಾಕ್‌ಅಪ್‌ : ಗೂಗಲ್‌ ಪಿಕ್ಸಲ್‌ ಫೋಲ್ಡ್‌ ಫೋನ್‌ 4,800mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 30W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇದು IPX8 ರೇಟಿಂಗ್ ಪಡೆದಿದ್ದು, ವಾಟರ್ ರೆಸಿಸ್ಟೆನ್ಸ್‌ ಸೌಲಭ್ಯ ಪಡೆದಿದೆ.

ಗೂಗಲ್ ಸಂಸ್ಥೆಯು ಇನ್ನೂ ಭಾರತದಲ್ಲಿ ತನ್ನ ನೂತನ ಪಿಕ್ಸೆಲ್ ಫೋಲ್ಡ್ ಅನ್ನು ಬಿಡುಗಡೆ ಮಾಡಿಲ್ಲ. ಈ ಮಡಚಬಹುದಾದ ಫೋನ್ ಯುಎಸ್, ಜರ್ಮನಿ, ಜಪಾನ್ ಮತ್ತು ಯುಕೆಗಳಲ್ಲಿ ಲಭ್ಯವಿರುತ್ತದೆ. ಕಂಪನಿಯು ಫೋಲ್ಡಬಲ್ ಫೋನ್ ಅನ್ನು ದೇಶದಲ್ಲಿ ಲಾಂಚ್ ಮಾಡುವ ಕುರಿತು ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ, ಸದ್ಯ ಭಾರತದಲ್ಲಿ ಗೂಗಲ್‌ ಪಿಕ್ಸಲ್‌ 7a ಮಾತ್ರ ಬಿಡುಗಡೆಯಾಗಿದೆ.

Best Mobiles in India

English summary
Google Pixel Fold with Tensor G2 launched globally: price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+