Home
ಸುದ್ದಿಜಾಲ

ಗೂಗಲ್ ಪಿಕ್ಸೆಲ್ ವಾಚ್ 2 ಲಾಂಚ್‌; ಆಕರ್ಷಕ ಫೀಚರ್ಸ್‌, ಬೆಲೆ ಎಷ್ಟು?

ಗೂಗಲ್ ಪಿಕ್ಸೆಲ್ ವಾಚ್ 2 (Google Pixel Watch 2) ಅನ್ನು ಕೊನೆಗೂ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಈ ವಾಚ್‌ಗಾಗಿ ಭಾರತದಲ್ಲಿ ಅದೆಷ್ಟೋ ಜನರು ಕಾದು ಕುಳಿತಿದ್ದರು. ಕೊನೆಗೂ ಇದು ಲಾಂಚ್‌ ಆಗಿದ್ದು, ಈ ಮೂಲಕ ಭಾರತದ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಮುಂದಾಗಿದೆ.

ಹೌದು, ಗೂಗಲ್ ಪಿಕ್ಸೆಲ್ ವಾಚ್ 2 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ ಹಲವಾರು ಸುಧಾರಿತ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್ ವಾಚ್‌ಗೆ ಭಾರತದಲ್ಲಿ ಮುಂಗಡ-ಬುಕಿಂಗ್‌ಗೂ ಅನುವು ಮಾಡಿಕೊಡಲಾಗಿದೆ. ಹಾಗೂ ಈ ವಾಚ್‌ 24 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಪಿಕ್ಸೆಲ್ ವಾಚ್ 2 ಲಾಂಚ್‌; ಆಕರ್ಷಕ ಫೀಚರ್ಸ್‌, ಬೆಲೆ ಎಷ್ಟು?

ಗೂಗಲ್ ಪಿಕ್ಸೆಲ್ ವಾಚ್ 2 ಫೀಚರ್ಸ್‌: ಈ ಸ್ಮಾರ್ಟ್‌ವಾಚ್‌ ಅನ್ನು‌ ಹಿಂದಿನ ಮಾದರಿಗೆ ಹೋಲಿಕೆ ಮಾಡಿದ್ರೆ ಅಷ್ಟೇನು ಬದಲಾವಣೆ ಇಲ್ಲ. ಆದರೆ, ಫೀಚರ್ಸ್‌ನಲ್ಲಿ ಭಿನ್ನತೆ ಇದೆ. 41mm ಗಾತ್ರದ ಆಯ್ಕೆಯೊಂದಿಗೆ, 384 x 384 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 1.2 ಇಂಚಿನ ವೃತ್ತಾಕಾರದ OLED ಡಿಸ್‌ಪ್ಲೇ ಆಯ್ಕೆ ಈ ವಾಚ್‌ನಲ್ಲಿದ್ದು, ವಿವಿಧ ವಾಚ್‌ ಫೇಸ್‌ ಆಯ್ಕೆ ನೀಡಲಿದೆ. ಹಾಗೂ ಬಳಕೆದಾರರಿಗೆ ಸ್ಪಷ್ಟತೆ ಮತ್ತು ಮಾಹಿತಿ ಸಾಂದ್ರತೆಯನ್ನು ಸಮತೋಲನಗೊಳಿಸಲು ಆಯ್ಕೆಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ಹೆಚ್ಚುವರಿಯಾಗಿ ಈ ಸ್ಮಾರ್ಟ್‌ವಾಚ್ ಆಪ್ಟಿಕಲ್ ಹೃದಯ ಬಡಿತ ಮತ್ತು ರಕ್ತ-ಆಮ್ಲಜನಕ ಸೆನ್ಸರ್‌ ಅನ್ನು ಹೊಂದಿರಲಿದ್ದು, ಜೊತೆಗೆ ಒತ್ತಡ ಟ್ರ್ಯಾಕಿಂಗ್ ಮತ್ತು ನಿದ್ರೆಯ ಗುಣಮಟ್ಟದ ವರದಿಗಳನ್ನು ಸಹ ಈ ವಾಚ್‌ ನೀಡಲಿದೆ. ಆದಾಗ್ಯೂ, ಅದರ ಕೆಲವು ಪ್ರತಿಸ್ಪರ್ಧಿಗಳಂತೆ ಇಸಿಜಿ ಮಾನಿಟರಿಂಗ್ ಅನ್ನು ಇನ್ನೂ ಬೆಂಬಲಿಸದಿರುವುದು ಕೆಲವರಿಗೆ ಬೇಸರದ ವಿಷಯವಾಗಿರಬಹುದು.

ಉಳಿದಂತೆ ಈ ವಾಚ್‌ 5ATM/IP68 ರೇಟಿಂಗ್ ಅನ್ನು ಕಾಯ್ದುಕೊಂಡಿದೆ. ಇದು ಧೂಳಿನ ಪ್ರತಿರೋಧದ ಜೊತೆಗೆ ನೀವು ಪೂಲ್‌ಗಳಲ್ಲಿ ಈಜಲು ಸಹ ಅನುಕೂಲ ಮಾಡಿಕೊಡುತ್ತದೆ. ಇದರಿಂದ ಯಾವುದೇ ಸಮಸ್ಯೆ ವಾಚ್‌ಗೆ ಆಗುವುದಿಲ್ಲ. ಈ ವರ್ಷದ ಗಮನಾರ್ಹ ಸೇರ್ಪಡೆಯೆಂದರೆ UWB (ಅಲ್ಟ್ರಾ-ವೈಡ್‌ಬ್ಯಾಂಡ್) ಬೆಂಬಲ, ದಿಕ್ಕಿನ ಸೂಚನೆಯೊಂದಿಗೆ UWB-ಸಕ್ರಿಯಗೊಳಿಸಿದ ಡಿವೈಸ್‌ಗಳ ಹೆಚ್ಚು ನಿಖರವಾದ ಟ್ರ್ಯಾಕಿಂಗ್ ಭರವಸೆ ನೀಡುತ್ತದೆ. ಗೂಗಲ್ ತನ್ನ ಸ್ವಂತ ಟ್ರ್ಯಾಕಿಂಗ್ ಟ್ಯಾಗ್‌ಗಳನ್ನು ಬಿಡುಗಡೆ ಮಾಡದಿದ್ದರೂ, ಫೈಂಡ್ ಮೈ ಡಿವೈಸ್ ನೆಟ್‌ವರ್ಕ್ ಅನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ.

ಸ್ನಾಪ್‌ಡ್ರಾಗನ್ W5+ ಜನ್‌ 1 ಚಿಪ್‌ನ ಅಳವಡಿಕೆಯು ಅತ್ಯಂತ ಗಮನಾರ್ಹವಾದ ನವೀಕರಣಗಳಲ್ಲಿ ಪ್ರಮುಖವಾಗಿದ್ದು, ಇದು ಎಕ್ಸಿನೋಸ್ 9110 ಅನ್ನು ಬದಲಿಸುವ 4nm ಪ್ರೊಸೆಸರ್ ಆಗಿದೆ. 2GB RAM ನೊಂದಿಗೆ ಈ ವಾಚ್‌ ಕಾಣಿಸಿಕೊಂಡಿದ್ದು, ಈ ಹೊಸ ಚಿಪ್‌ಸೆಟ್ ಉತ್ತಮ ಕಾರ್ಯಕ್ಷಮತೆ ಮತ್ತು ಸುಧಾರಿತ ದಕ್ಷತೆಯನ್ನು ಭರವಸೆ ನೀಡುತ್ತದೆ.

ಉಳಿದಂತೆ ಬ್ಯಾಟರಿ ಸಾಮರ್ಥ್ಯದ ವಿಚಾರಕ್ಕೆ ಬರುವುದಾದರೆ 306mAh ಸಾಮರ್ಥ್ಯದ ಹಳೆಯ ಬ್ಯಾಟರಿ ಆಯ್ಕೆಯನ್ನೇ ಇದು ಹೊಂದಿದೆ. ಆದರೂ 24-ಗಂಟೆಗಳ ಬ್ಯಾಟರಿ ಅವಧಿಯನ್ನು ಕ್ಲೈಮ್ ಮಾಡುವುದರೊಂದಿಗೆ, ಯಾವಾಗಲೂ ಆನ್ ಡಿಸ್ಪ್ಲೇ ಫೀಚರ್ಸ್‌ ಆಯ್ಕೆಯನ್ನು ನೀಡಲಾಗಿದೆ. ಈ ಮೂಲಕ ಬಳಕೆದಾರರು ಈ ವಾಚ್‌ನಲ್ಲಿ ಆರೋಗ್ಯ, ಫಿಟ್‌ನೆಸ್‌ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್ ಪಿಕ್ಸೆಲ್ ವಾಚ್ 2 ಲಾಂಚ್‌; ಆಕರ್ಷಕ ಫೀಚರ್ಸ್‌, ಬೆಲೆ ಎಷ್ಟು?

ಗೂಗಲ್ ಪಿಕ್ಸೆಲ್ ವಾಚ್ 2 ಬೆಲೆ ವಿವರ:
ಹೊಸ ಗೂಗಲ್ ಪಿಕ್ಸೆಲ್ ವಾಚ್ 2 ಭಾರತದಲ್ಲಿ 39,900 ರೂ.ಗಳಾಗಿದೆ. ಲಾಂಚ್‌ ಭಾಗವಾಗಿ, ಹೊಸ ಪಿಕ್ಸೆಲ್ 8 ಅನ್ನು ಖರೀದಿಸುವವರು ಈ ಸ್ಮಾರ್ಟ್ ವಾಚ್ ಅನ್ನು ರಿಯಾಯಿತಿ ಬೆಲೆಯಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಇದರ ಬೆಲೆ 19,999 ರೂ.ಗೆ ಇಳಿಯುತ್ತದೆ. ಪಿಕ್ಸೆಲ್ ವಾಚ್ 2 ಅನ್ನು ಪಾಲಿಶ್ಡ್ ಸಿಲ್ವರ್/ಬೇ, ಮ್ಯಾಟ್ ಬ್ಲ್ಯಾಕ್/ಅಬ್ಸಿಡಿಯನ್ ಮತ್ತು ಇತರ ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

Best Mobiles in India

English summary
Google Pixel Watch 2 has been launched in India. The smartwatch is packed with a host of advanced features and pre-booking for the smartwatch in India has also been enabled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+