Home
ಸುದ್ದಿಜಾಲ

Google: ಸ್ಯಾಮ್‌ಸಂಗ್‌ನ ಈ ಎರಡು ಆಪ್‌ಗಳು ಡೇಂಜರ್‌.. ವಾರ್ನಿಂಗ್‌ ಕೊಟ್ಟ ಗೂಗಲ್!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬೃಹತ್‌ ಬೇಡಿಕೆ ಪಡೆದುಕೊಂಡಿವೆ. ಅಷ್ಟೇ ಅಲ್ಲದೆ ಭಾರತದಲ್ಲಿ ಹಬ್ಬದ ಋತುವಿನಲ್ಲಿ ನಡೆಸಿದ ವಿಶೇಷ ಸೇಲ್‌ಗಳಲ್ಲಿ ಸ್ಯಾಮ್‌ಸಂಗ್‌ ಫೋನ್‌ಗಳನ್ನೇ ಹೆಚ್ಚು ಖರೀದಿ ಮಾಡಲಾಗಿದೆ. ಈ ನಡುವೆ ಸ್ಯಾಮ್‌ಸಂಗ್‌ ಸಂಬಂಧ ಶಾಕಿಂಗ್‌ ವರದಿಯೊಂದು ಹೊರಬಿದ್ದಿದೆ.

ಹೌದು, ಟೆಕ್‌ ದೈತ್ಯ ಗೂಗಲ್‌ (Google) ಇದೀಗ ಸ್ಯಾಮ್‌ಸಂಗ್‌ನ ಎರಡು ಆಪ್‌ಗಳು ಸ್ಮಾರ್ಟ್‌ಫೋನ್‌ಗಳಿಗೆ ದೊಡ್ಡ ಮಟ್ಟದಲ್ಲಿ ಹಾನಿಕಾರಕ ಎಂದು ಎಚ್ಚರಿಕೆ ನೀಡಿದೆ. ಇದರಿಂದಾಗಿ ಅದೆಷ್ಟೋ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಶಾಕ್‌ಗೆ ಒಳಗಾಗುವಂತೆ ಆಗಿದೆ. ಹಾಗಿದ್ರೆ, ಯಾವುವು ಆ ಡೇಂಜರ್ ಆಪ್‌ಗಳು?, ನೀವು ಸ್ಯಾಮ್‌ಸಂಗ್ ಫೋನ್ ಬಳಕೆ ಮಾಡುತ್ತಿದ್ರೆ ಅದನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Google: ಸ್ಯಾಮ್‌ಸಂಗ್‌ನ ಈ ಎರಡು ಆಪ್‌ಗಳು ಡೇಂಜರ್‌.. ವಾರ್ನಿಂಗ್‌ ಕೊಟ್ಟ ಗೂಗಲ್!

ಗೂಗಲ್‌ನಿಂದ ಎಚ್ಚರಿಕೆ: ಗೂಗಲ್‌ ಪ್ಲೇ ಪ್ರೊಟೆಕ್ಟ್‌ (Google Play Protect) ಇದೀಗ ಎರಡು ಸ್ಯಾಮ್‌ಸಂಗ್‌ನ ಬಹು ಜನಪ್ರಿಯ ಆಪ್‌ಗಳಾದ ಮೆಸೆಜ್‌ಗಳು ಮತ್ತು ವಾಲೆಟ್‌ ಅನ್ನು ತಾತ್ಕಾಲಿಕ ಸರ್ವರ್ ವೈಫಲ್ಯದಿಂದ ಸಂಭಾವ್ಯ ಹಾನಿಕಾರಕವೆಂದು ಗುರುತಿಸಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಆಪ್‌ಗಳು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸಬಹುದು ಎಂದು ಎಚ್ಚರಿಕೆ ನೀಡಿದೆ.

ಪ್ಲೇ ಪ್ರೊಟೆಕ್ಟ್‌ ಎಂಬುದು ಭದ್ರತಾ ವ್ಯವಸ್ಥೆಯಾಗಿದ್ದು, ಸಾಮಾನ್ಯವಾಗಿ ಎಲ್ಲಾ ರೀತಿಯ ಆಪ್‌ಗಳ ಮೇಲೆ ಹದ್ದಿನ ಕಣ್ಣಿಡಲಿದೆ. ಅಂದರೆ ಹಾನಿಕಾರಕ ಆಪ್‌ಗಳು ಹಾಗೂ ಗೇಮ್‌ಗಳಿಗೆ ತನ್ನದೇ ಆದ ರೀತಿಯಲ್ಲಿ ವಾರ್ನಿಂಗ್‌ ನೀಡುವುದರ ಜೊತೆಗೆ ಎಚ್ಚರಿಕೆಯಿಂದ ಇರುವುದು ಹೇಗೆ ಎಂದು ಬಳಕೆದಾರರಿಗೆ ಸಲಹೆ ಸಹ ನೀಡುತ್ತದೆ. ಆದಾಗ್ಯೂ, ಈ ಎರಡೂ ಆಪ್‌ಗಳು ಕಾನೂನುಬದ್ಧಗಿಯೇ ಇವೆಯಾದರೂ ಪ್ಲೇ ಪ್ರೊಟೆಕ್ಟ್ ಮೆಸೆಜ್‌ಗಳು ಮತ್ತು ವಾಲೆಟ್ ಅನ್ನು ಹಾನಿಕಾರಕವೆಂದು ಉಲ್ಲೇಖಿಸಿದೆ.

Google: ಸ್ಯಾಮ್‌ಸಂಗ್‌ನ ಈ ಎರಡು ಆಪ್‌ಗಳು ಡೇಂಜರ್‌.. ವಾರ್ನಿಂಗ್‌ ಕೊಟ್ಟ ಗೂಗಲ್!

ಈ ಸಂಬಂಧ 9to5 ಗೂಗಲ್‌ನ ವರದಿಯ ಪ್ರಕಾರ, ಕೆಲವು ದಿನಗಳ ಹಿಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಕೆಲವು ಬಳಕೆದಾರರು ಗೂಗಲ್‌ ನ ಭದ್ರತಾ ಸೇವೆಯಾದ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ನಿಂದ ಈ ಆಪ್‌ಗಳ ಬಗ್ಗೆ ಎಚ್ಚರಿಕೆಯ ಮೆಸೆಜ್‌ಗಳನ್ನು ಸ್ವೀಕಾರ ಮಾಡಿದ್ದಾರೆ. ಈ ಆಪ್‌ಗಳು ಎಸ್‌ಎಮ್‌ಎಸ್‌, ಫೋಟೋಗಳು, ಆಡಿಯೊ ರೆಕಾರ್ಡಿಂಗ್‌ಗಳು ಅಥವಾ ಕರೆ ಇತಿಹಾಸದಂತಹ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿವೆ ಎಂದು ಆ ಮೆಸೆಜ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಎಚ್ಚರಿಕೆ ಬಳಿಕ ಸ್ಯಾಮ್‌ಸಂಗ್‌ ಮೆಸೆಜ್‌ ಮತ್ತು ವಾಲೆಟ್ ಆಪ್‌ಗಳಲ್ಲಿ ಕಂಡು ಬಂದ ಸಮಸ್ಯೆಗಳು ತಾತ್ಕಾಲಿಕ ಸರ್ವರ್ ವೈಫಲ್ಯದಿಂದ ಉಂಟಾಗಿವೆ ಎಂದು ತಿಳಿದಿದೆ ಜೊತೆಗೆ ಗೂಗಲ್ ಇದೀಗ ಸಮಸ್ಯೆಯನ್ನು ಪರಿಹರಿಸಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಈ ಆಪ್‌ಗಳನ್ನು ಎಂದಿನಂತೆ ಬಳಕೆ ಮಾಡಬಹುದು ಎಂದು ಹೇಳಿದೆ.

ಇದರೊಂದಿಗೆ ಸ್ಯಾಮ್‌ಸಂಗ್ ಕಮ್ಯುನಿಟಿ ಫೋರಮ್‌ನಲ್ಲಿನ ಮೆಸೆಜ್‌ ಸಹ ಈ ಮಾಹಿತಿಯನ್ನು ದೃಢೀಕರಿಸಿದೆ. ಅಂದರೆ ಸ್ಯಾಮ್‌ಸಂಗ್‌ ಆಪ್‌ ಬಳಸುವಾಗ ಡಿವೈಸ್‌ನ ಭದ್ರತಾ ಸಮಸ್ಯೆ ಇದೆ ಎಂದು ಹೇಳುವ ಪಾಪ್-ಅಪ್‌ನೊಂದಿಗೆ ವಿದ್ಯಮಾನವು ತಾತ್ಕಾಲಿಕ ವೈಫಲ್ಯದಿಂದ ಉಂಟಾಗಿದೆ ಎಂದು ತಿಳಿಸಲಾಗಿದೆ. ಈಗ ಅದನ್ನು ಪುನಃಸ್ಥಾಪಿಸಲಾಗಿದೆ ಮತ್ತು ಈ ಹಿಂದೆ ಹೇಗೆ ಬಳಕೆ ಮಾಡುತ್ತಿದ್ದಿರೋ ಅದೇ ರೀತಿಯಲ್ಲಿ ಬಳಕೆ ಮಾಡಬಹುದು ಎಂದೂ ಸಹ ಮಾಹಿತಿ ನೀಡಲಾಗಿದೆ.

ಏನಾದರೂ ಈ ಆಪ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಬಳಕೆದಾರರು ಗಂಭೀರ ಎಚ್ಚರಿಕೆಯನ್ನು ನಿರ್ಲಕ್ಷಿಸಬಹುದು ಅಥವಾ ಅವರ ಫೋನ್ ಅನ್ನು ರೀಸ್ಟಾರ್ಟ್‌ ಮಾಡಿ ಬಳಕೆ ಮಾಡಬಹುದು ಎಂದು ತಿಳಿಸಲಾಗಿದ್ದು, ಇದರೊಂದಿಗೆ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸ್ಟೋರೇಜ್‌ ಮತ್ತು ಡೇಟಾವನ್ನು ತೆರವುಗೊಳಿಸುವ ಮೂಲಕ ಮತ್ತೆ ಬಳಕೆ ಮಾಡಲು ಮುಂದಾಗಬಹುದು.

ಈ ರೀತಿ ಮಾಡಲು ನಿಮ್ಮ ಡಿವೈಸ್‌ನ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡಿ, ನಂತರದಲ್ಲಿ ಆಪ್‌ ಅನ್ನು ಆಯ್ಕೆ ಮಾಡಿ ಹಾಗೂ ಮೋರ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಈ ವೇಳೆ ಆಪ್‌ನ ಸೆಟ್ಟಿಂಗ್‌ಗಳನ್ನು ಮರುಹೊಂದಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಇದಾದ ನಂತರದಲ್ಲಿ ನಿಮ್ಮ ಡಿವೈಸ್‌ ಅನ್ನು ರೀಸ್ಟಾರ್ಟ್‌ ಮಾಡಿ.

Google: ಸ್ಯಾಮ್‌ಸಂಗ್‌ನ ಈ ಎರಡು ಆಪ್‌ಗಳು ಡೇಂಜರ್‌.. ವಾರ್ನಿಂಗ್‌ ಕೊಟ್ಟ ಗೂಗಲ್!

ಯಾವಾಗಲೂ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಅನ್ನು ಆನ್‌ ಮಾಡಿಯೇ ಇಡಿ: ನಿಮ್ಮ ಸ್ಮಾರ್ಟ್‌ಡಿವೈಸ್‌ ಅಂದರೆ ಸ್ಮಾರ್ಟ್‌ಫೋನ್‌ ಅನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದರೆ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಅನ್ನು ಆನ್‌ ಮಾಡಬೇಕು. ಇದಕ್ಕಾಗಿ ಪ್ಲೇ ಸ್ಟೋರ್‌ ಆಪ್‌ ಓಪನ್ ಮಾಡಿ. ಬಳಿಕ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ. ಪ್ಲೇ ಪ್ರೊಟೆಕ್ಟ್‌ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿದ್ರೆ ಸಾಕು.

Best Mobiles in India

English summary
Tech giant Google has now warned that two apps from Samsung are highly harmful to smartphones. That means there is an error in the message and wallet apps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+