Home
ಸುದ್ದಿಜಾಲ

ಸಾಲಗಾರರು ಸಂತಸ ಪಡುವ ಸುದ್ದಿ ಇದು...ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ!

ಈಗಂತೂ ಸಾಕಷ್ಟು ಲೋನ್‌ ಆಪ್‌ಗಳು ಲಭ್ಯವಿದ್ದು, ನಿಮಗೆ ಅಗತ್ಯ ಇರುವಷ್ಟು ಹಣವನ್ನು ನೀಡುತ್ತವೆ. ಆದರೆ, ಹಣ ನೀಡಿ ಸುಮ್ಮನೆ ಇರುವುದಿಲ್ಲ ಬದಲಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ ಹಲವಾರು ವಿಭಾಗಗಳಿಗೆ ಎಂಟ್ರಿ ಕೊಟ್ಟು ನೀವೇನಾದರೂ ಹಣ ವಾಪಸ್‌ ಕೊಡದೇ ಹೋದರೆ ಮಾನಸಿಕವಾಗಿ ಕಿರುಕುಳ ನೀಡಲು ಮುಂದಾಗುತ್ತವೆ. ಇದರ ವಿರುದ್ಧ ಸಮರ ಸಾರಿರುವ ಗೂಗಲ್‌ ಹೊಸ ನಿರ್ಧಾರ ಪ್ರಕಟಿಸಿದೆ.

ಹೌದು, ಸಾಲಗಾರ ಆಪ್‌ಗಳು ನೀಡುವ ವಿಚಿತ್ರವಾದ ಹಿಂಸೆಗೆ ಹೆದರಿ ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೂಗಲ್‌ ಈ ರೀತಿಯ ಕಿರುಕುಳ ನೀಡುವ ಆಪ್‌ಗಳಿಗೆ ಕಡಿವಾಣ ಹಾಕಲಿದೆ. ಹಾಗಿದ್ರೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇರುವ ಹಲವಾರು ಲೋನ್‌ ಆಪ್‌ಗಳಿವೆ ವಿಧಿಸಿದ ಷರತ್ತುಗಳು ಏನು?, ಇದರಿಂದ ಸಾಲಗಾರರಿಗೆ ಆಗುವ ಪ್ರಯೋಜನ ಏನು? ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಸಾಲಗಾರರು ಸಂತಸ ಪಡುವ ಸುದ್ದಿ ಇದು...ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ!

ನಿಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುವುದಿಲ್ಲ: ಯಾವುದೇ ಆಪ್‌ಗಳು ಸಾಲ ನೀಡುವ ಮೊದಲೇ ನಿಮ್ಮ ಫೋಟೋ ಗ್ಯಾಲರಿ, ಸಂಪರ್ಕ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರವೇಶದ ಅನುಮತಿ ಪಡೆದಿಕೊಂಡಿರುತ್ತವೆ. ಇದಕ್ಕೆ ಕಾರಣ ನೀವು ಸಾಲವನ್ನು ಮರುಪಾವತಿ ಮಾಡದಿದ್ದಾಗ ಇಲ್ಲಿರುವ ಸಂಖ್ಯೆಗಳು ಹಾಗೂ ಫೋಟೋಗಳನ್ನು ಬಳಕೆ ಮಾಡಿಕೊಂಡು ನಿಮಗೆ ಹಿಂಸೆ ನೀಡಿ ಸಾಲವನ್ನು ಮರುಪಡೆಯುವ ಉದ್ದೇಶಕ್ಕಾಗಿ. ಆದರೆ, ಇನ್ಮುಂದೆ ಇದು ನಡೆಯುವುದಿಲ್ಲ.

ಆಪ್‌ಗಳು ಇನ್ಮುಂದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೂಕ್ಷ್ಮ ಡೇಟಾವನ್ನು ಪಡೆದುಕೊಳ್ಳಲು ಸಾಧ್ಯವಾಗದ ಹಾಗೆ ಮಾಡಲಾಗುತ್ತಿದೆ. ಈ ಮೂಲಕ ಸಾಲಗಾರ ಆಪ್‌ಗಳಿಗೆ ಮಿತಿಗಳನ್ನು ಹೇರಲಾಗಿದ್ದು, ಇದರಿಂದ ಹಲವಾರು ಬಳಕೆದಾರರಿಗೆ ಸಾಕಷ್ಟು ಸಂತೋಷ ಉಂಟಾಗಲಿದೆ. ಅದರಂತೆ ಈ ಆಪ್‌ಗಳಿಗಾಗಿ ವೈಯಕ್ತಿಕ ಸಾಲ ನೀತಿಗೆ ನವೀಕರಣವನ್ನು ಬಿಡುಗಡೆ ಮಾಡಲಾಗಿದೆ. ಇದು ಬಾಹ್ಯ ಸಂಗ್ರಹಣೆ, ಫೋಟೋಗಳು, ವಿಡಿಯೋಗಳು, ಸಂಪರ್ಕಗಳು, ನಿಖರವಾದ ಸ್ಥಳ ಮತ್ತು ಕರೆ ಲಾಗ್‌ಗಳನ್ನು ಪ್ರವೇಶಿಸದಂತೆ ತಡೆಯಲು ನಿರ್ದೇಶಿದೆ.

ಸಾಲಗಾರರು ಸಂತಸ ಪಡುವ ಸುದ್ದಿ ಇದು...ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ!

ಎಂದಿನಿಂದ ಜಾರಿ?: ಗೂಗಲ್‌ನ ಹಣಕಾಸು ಸೇವೆಗಳ ನೀತಿಗಳಿಗೆ ಈ ಬದಲಾವಣೆಗಳನ್ನು ಮೇ 31 ರಿಂದ ಜಾರಿಗೆ ತರಲಾಗುತ್ತಿದೆ. ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಭಾರತ ಮತ್ತು ಕೀನ್ಯಾದಲ್ಲಿ ವ್ಯಾಪಕವಾಗಿ ವರದಿಯಾಗಿದೆ ಇದರಿಂದ ಹೆಚ್ಚು ಸಮಸ್ಯೆ ಆಗುತ್ತಿವೆ ಎಂದು ವರದಿಯಾಗಿದೆ. ಆದರೆ, ಇನ್ನುಮುಂದೆ ಯಾವುದೇ ಸಮಸ್ಯೆ ಇಲ್ಲದೆ ಆಪ್‌ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.

ಇನ್ನು ಪರವಾನಗಿ ಪಡೆಯದ ಸಾಲದ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ನಿಷೇಧಿಸಲು ಕಂಪೆನಿಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಪಾಕಿಸ್ಥಾನದಲ್ಲಿ ಈ ರೀತಿಯ ಘಟನೆಗಳು ಹೆಚ್ಚು ಸಂಭವಿಸಿವೆ ಎನ್ನಲಾಗಿದೆ. ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಿಗೆ ಕ್ರೆಡಿಟ್ ಒದಗಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಗೂಗಲ್ ನಿರ್ದಿಷ್ಟ ಪರವಾನಗಿ ದಾಖಲಾತಿಯನ್ನು ಕಡ್ಡಾಯಗೊಳಿಸಿದೆ.

ಎಲ್ಲೆಲ್ಲಿ ಈ ನಿಯಮ ಅನ್ವಯ: ಭಾರತ, ಕೀನ್ಯಾ, ನೈಜೀರಿಯಾ, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ ಸೇರಿದಂತೆ ಮಾರುಕಟ್ಟೆಗಳಲ್ಲಿ ಹೊಸ ನೀತಿಯನ್ನು ಪರಿಚಯಿಸಲಾಗುತ್ತಿದ್ದು, ಈ ದೇಶಗಳಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು ಪ್ಲೇ ಸ್ಟೋರ್‌ನಲ್ಲಿ ಕೇವಲ ಒಂದು ಡಿಜಿಟಲ್ ಆಪ್‌ ಅನ್ನು ಮಾತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಅನವಶ್ಯಕ ಆಪ್‌ಗಳ ಅಭಿವೃದ್ಧಿಯನ್ನು ತಡೆಗಟ್ಟಲಾಗುತ್ತಿದೆ.

ಸಾಲಗಾರರು ಸಂತಸ ಪಡುವ ಸುದ್ದಿ ಇದು...ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ!

ಇದರೊಂದಿಗೆ ಸಾಲ ನೀಡುವ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳದವರು ಮತ್ತು ನೋಂದಾಯಿತ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC) ಅಥವಾ ಬ್ಯಾಂಕ್‌ಗಳು ಬಳಕೆದಾರರಿಗೆ ಸಾಲವನ್ನು ಸುಲಭಗೊಳಿಸಲು ಪ್ಲಾಟ್‌ಫಾರ್ಮ್‌ ಒದಗಿಸುತ್ತಿರುವವರು ಈ ವಿಷಯಗಳನ್ನು ಘೋಷಣೆಯಲ್ಲಿ ನಿಖರವಾಗಿ ಉಲ್ಲೇಖಿಸಬೇಕಾಗುತ್ತದೆ. ಹಾಗೆಯೇ ನೋಂದಾಯಿತ NBFCಗಳು ಮತ್ತು ಬ್ಯಾಂಕ್‌ಗಳ ಹೆಸರುಗಳನ್ನು ಆಪ್‌ನ ವಿವರಣೆಯಲ್ಲಿ ಪ್ರಮುಖವಾಗಿ ಬಹಿರಂಗಪಡಿಸಬೇಕು ಎಂದು ತಿಳಿಸಲಾಗಿದೆ.

Best Mobiles in India

English summary
Google released an update to its Personal Loans policy for apps on Play Store, which includes new restrictions that prevent apps from accessing photos, videos, contacts, precise location, and call logs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+