Home
ಸುದ್ದಿಜಾಲ

Gmail: ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಈ ತಲೆನೋವು ಇರೋಲ್ಲ..

ಜಿಮೇಲ್‌ (Gmail) ಇಂದು ಎಲ್ಲಾ ಕಡೆ ಎಲ್ಲಾ ವಿಷಯಕ್ಕೆ ಬಳಕೆ ಆಗುತ್ತಿದೆ. ಅದರಂತೆ ಗೂಗಲ್‌ ಈ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಫೀಚರ್ಸ್‌ ಆಯ್ಕೆ ನೀಡುವ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಹಕಾರಿ ಆಗಿದೆ. ಈ ಬೆಳವಣಿಗೆ ನಡುವೆ ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಲಾಗಿದೆ.

ಹೌದು, ಗೂಗಲ್‌ ತನ್ನ ಜಿಮೇಲ್‌ಗೆ ಈಗಾಗಲೇ ಹೊಸ ಹೊಸ ಫೀಚರ್ಸ್‌ ಆಯ್ಕೆ ನೀಡಿದೆ. ಈ ಬೆಳವಣಿಗೆ ನಡುವೆ ತುಂಬಾ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಪರಿಣಾಮ ಇನ್ಮುಂದೆ ಜಿಮೇಲ್‌ನಲ್ಲಿ ಉತ್ತಮ ಅನುಭವ ಪಡೆಯಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಈ ತಲೆನೋವು ಇರೋಲ್ಲ..

ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಜಿಮೇಲ್‌ ಓಪನ್‌ ಮಾಡಿದ್ರೆ ಸಾಕು ಅಗತ್ಯ ಇಲ್ಲದ ಅದೆಷ್ಟೋ ಮೆಸೆಜ್‌ಗಳು ಕಾಣಿಸುತ್ತವೆ. ಇವುಗಳನ್ನು ಡಿಲೀಟ್‌ ಮಾಡುವುದೇ ಒಂದು ದೊಡ್ಡ ತಾಪತ್ರಯದ ಕೆಲಸ. ಇದಕ್ಕೆ ಕಡಿವಾಣ ಹಾಕಲೆಂದೇ ಜಿಮೇಲ್‌ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಅಂದರೆ ಸ್ಪ್ಯಾಮ್ ಮೆಸೆಜ್‌ಗಳ (Spam message) ಪ್ರಮಾಣವನ್ನು ಕಡಿಮೆ ಮಾಡಲು ಗೂಗಲ್‌ ಎಲ್ಲಾ ತಯಾರಿ ಮಾಡಿಕೊಂಡಿದೆ.

ಸಾಕಷ್ಟು ಮಾರ್ಕೆಟಿಂಗ್ ಕಂಪನಿಗಳು ಜನರಿಗೆ ನಿರಂತರವಾಗಿ ಇಮೇಲ್‌ಗಳನ್ನು ಕಳುಹಿಸುತ್ತಲೇ ಇರುತ್ತವೆ. ಇದರಿಂದ ಜಿಮೇಲ್‌ ನಲ್ಲಿನ ಸ್ಟೋರೇಜ್‌ ಸಾಮರ್ಥ್ಯ ಕಡಿಮೆಯಾಗುತ್ತಲೇ ಬರುತ್ತದೆ. ಜೊತೆಗೆ ಇವುಗಳನ್ನು ನೋಡಿ ಅದೆಷ್ಟೋ ಜನರಿಗೆ ತಲೆನೋವು ಸಹ ಬಂದಿರಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಗೂಗಲ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಂದರೆ ಯಾರಾದರೂ ಬೃಹತ್ ಇಮೇಲ್ ಕಳುಹಿಸಲು ಬಯಸಿದರೆ ಅವರು ಗೂಗಲ್‌ನ ಹೊಸ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಈ ತಲೆನೋವು ಇರೋಲ್ಲ..

ಇನ್ಮುಂದೆ ದೊಡ್ಡ ಪ್ರಮಾಣದಲ್ಲಿ ಇಮೇಲ್‌ಗಳನ್ನು ಕಳುಹಿಸುವ ಕಂಪನಿಗಳು ಮತ್ತು ಜನರು ತಮ್ಮ ಇಮೇಲ್‌ಗಳಲ್ಲಿ ನಿರಾಕರಣೆಗಳನ್ನು ಕಾಣಬಹುದಾಗಿದೆ. ಗೂಗಲ್‌ನ ಹೊಸ ನೀತಿಯ ಅಡಿಯಲ್ಲಿ, ಅವರು ಮೊದಲು ತಮ್ಮ ಮೆಸೆಜ್‌ಗಳನ್ನ ದೃಢೀಕರಿಸಬೇಕಾಗುತ್ತದೆ. ಇದರ ಜೊತೆಗೆ ಇಮೇಲ್ ಅನ್ನು ಅನುಮತಿಸುವ ಜನರಿಗೆ ಮಾತ್ರ ಇವುಗಳನ್ನು ಕಳುಹಿಸಬೇಕಾಗುತ್ತದೆ. ಪರಿಣಾಮ ಸಾಮಾನ್ಯ ಜನರು ಇಮೇಲ್ ಅನ್ನು ಸ್ವೀಕರಿಸಲು ಬಯಸುತ್ತಾರೆಯೇ ಅಥವಾ ಬೇಡವೇ ಎಂಬ ಆಯ್ಕೆಯನ್ನು ಹೊಂದಿರುತ್ತಾರೆ.

ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಲಾಗ್‌ಪೋಸ್ಟ್ ಮೂಲಕ ಈ ಸಂಬಂಧ ಗೂಗಲ್‌ ಹೇಳಿಕೆಯೊಂದನ್ನು ನೀಡಿತ್ತು. ಅದುವೇ ಅನಗತ್ಯ ಇಮೇಲ್‌ಗಳಿಂದ ನೀವು ಸ್ವಾತಂತ್ರ್ಯವನ್ನು ಪಡೆಯುತ್ತೀರಿ ಎಂದು. ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಅನಗತ್ಯ ಇಮೇಲ್‌ಗಳನ್ನು ನಿಲ್ಲಿಸಲು ನೀವು ಕೇವಲ ಒಂದು ಕ್ಲಿಕ್ ಮಾಡಿದ್ರೆ ಸಾಕು. ಇದಕ್ಕಾಗಿ, ಅನ್‌ಸಬ್‌ಸ್ಕ್ರೈಬ್ ಬಟನ್ ಇಮೇಲ್‌ನಲ್ಲಿ ಲಭ್ಯವಿರುತ್ತದೆ. ನೀವು ಯಾರೊಬ್ಬರ ಇಮೇಲ್ ಅನ್ನು ಇಷ್ಟಪಡದಿದ್ದರೆ, ನೀವು ಈ ಬಟನ್ ಅನ್ನು ಕ್ಲಿಕ್ ಮಾಡಬಹುದು. ಜೊತೆಗೆ ಬೃಹತ್ ಇಮೇಲ್ ಕಳುಹಿಸುವವರು ಎರಡು ದಿನಗಳಲ್ಲಿ ಅನ್‌ಸಬ್‌ಸ್ಕ್ರೈಬ್ ವಿನಂತಿಗಳನ್ನು ಪ್ರಕ್ರಿಯೆಗೊಳಿಸಬೇಕು ಎಂದು ತಿಳಿಸಿತ್ತು.

ಜಿಮೇಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಈ ತಲೆನೋವು ಇರೋಲ್ಲ..

ಈ ನಡುವೆ ಪ್ರತಿದಿನ 5,000 ಇಮೇಲ್‌ಗಳನ್ನು ಕಳುಹಿಸುವವರಿಗೆ ಗೂಗಲ್‌ ತನ್ನ ಸ್ಪ್ಯಾಮ್ ನೀತಿಯನ್ನು ಅಪ್‌ಡೇಟ್‌ ಮಾಡಿದೆ. ಹೊಸ ನೀತಿಯಂತೆ ಕಳುಹಿಸುವವರು ಇಮೇಲ್‌ಗಳನ್ನು ದೃಢೀಕರಿಸಬೇಕಾಗುತ್ತದೆ ಮತ್ತು ಅನಗತ್ಯ ಇಮೇಲ್‌ಗಳನ್ನು ಕಳುಹಿಸುವುದನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿ, ಜೂನ್ 2024 ರಿಂದ ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಒದಗಿಸುವುದು ಸಹ ಅಗತ್ಯವಾಗಿದೆ. ಅಲ್ಲದೆ ಈ ಬಟನ್ ಇಮೇಲ್ ಮೆಸೆಜ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಬೇಕಿದೆ ಎಂದು ತಿಳಿಸಲಾಗಿದೆ.

ಅದರಂತೆ ಈ ವರ್ಷದ ಏಪ್ರಿಲ್‌ನಿಂದ ಕಂಪನಿಯು ನೀತಿಯನ್ನು ಅನುಸರಿಸದ ಇಮೇಲ್ ಟ್ರಾಫಿಕ್ ಅನ್ನು ತಿರಸ್ಕರಿಸುವ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. ಅದಾಗ್ಯೂ ಗೂಗಲ್ ಈ ತಿಂಗಳಿನಿಂದ ಕ್ರಮ ಕೈಗೊಳ್ಳಲು ಪ್ರಾರಂಭಿಸುತ್ತದೆ. ಬೃಹತ್ ಇಮೇಲ್ ಕಳುಹಿಸುವವರು ಕಂಪನಿಯ ನೀತಿಯನ್ನು ಅನುಸರಿಸದಿದ್ದರೆ, ಅವರು ತಾತ್ಕಾಲಿಕ ದೋಷಗಳನ್ನು ಎದುರಿಸಬೇಕಾಗುತ್ತದೆ.

Best Mobiles in India

English summary
Google is going to provide special facility to its Gmail. That means spam messages will be reduced in Gmail from now on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+