2014 ರ ಗೂಗಲ್ ಸರ್ಚ್‌ನಲ್ಲಿ ಪ್ರಮುಖ ಸ್ಥಾನ ನರೇಂದ್ರ ಮೋದಿಗೆ
ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಲಾದ ವ್ಯಕ್ತಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯ್ಕೆಯಾಗಿದ್ದಾರೆ ಎಂದು ಗೂಗಲ್ ತಿಳಿಸಿದೆ. ಈ ವರ್ಷದಲ್ಲಿ ಹೆಚ್ಚಿನ ಗೂಗಲ್ ಬಳಕೆದಾರರು ಮೋದಿಯವರನ್ನು ಗೂಗಲ್ ಸರ್ಚ್‌ನಲ್ಲಿ ಹುಡುಕಾಡಿದ್ದು ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಕತ್ರೀನಾ ಕೈಫ್, ಸಲ್ಮಾನ್ ಖಾನ್‌ರನ್ನೂ ಹಿಂದಿಕ್ಕಿ ರಾಜಕಾರಣಿಯೊಬ್ಬರು ಮಿಂಚಿದ್ದಾರೆ.

ಕಂಪೆನಿಯ 'ಇಯರ್ ಇನ್ ಸರ್ಚ್" ಈ ವರ್ಷದ ಪ್ರಮುಖ ಈವೆಂಟ್‌ಗಳು, ಹೆಚ್ಚು ಆದ್ಯತೆಯ ವಿಷಯಗಳು ಮತ್ತು ಹೆಚ್ಚಿನ ಹುಡುಕಾಟಗಳನ್ನು ತನ್ನ ಜಾಗತಿಕ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ.
ಇದನ್ನೂ ಓದಿ: ಅತ್ಯುತ್ತಮ ರೀತಿಯಲ್ಲಿ ವಾಟ್ಸಾಪ್ ಬಳಸುವುದು ಹೇಗೆ?
ದೇಶದ ಪಥಮ ಡಿಜಿಟಲ್ ಇಲೆಕ್ಷನ್ ಆಗಿ ಏಪ್ರಿಲ್ - ಮೇನಲ್ಲಿ ನಡೆದ ಐತಿಹಾಸಿಕ ಲೋಕ ಸಭಾ ಚುನಾವಣೆ ಕಾಣಿಸಿಕೊಂಡಿದೆ. ಇನ್ನು ಮುಖ್ಯ ಕ್ರೀಡೆಗಳತ್ತ ಗಮನ ಹರಿಸಿದಾಗ ಜೂನ್ ಜುಲೈನಲ್ಲಿ ನಡೆದ ಫಿಫಾ ವರ್ಲ್ಡ್ ಕಪ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಗೂಗಲ್ ಸರ್ಚ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ತಾಂತ್ರಿಕ ವಲಯದಲ್ಲಿ ಗೂಗಲ್ ಬಳಸುವ ಹೆಚ್ಚಿನ ಜನರು ಸರ್ಚ್‌ನಲ್ಲಿ ಡೆಸ್ಕ್‌ಟಾಪ್ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಹುಡುಕಿದ್ದಾರೆ ಎನ್ನಲಾಗಿದೆ. ಹೊಸ ಫೋನ್‌ಗಳ ಬಿಡುಗಡೆ ಮತ್ತು ಮಾರಾಟ ಕೂಡ ಗೂಗಲ್ ಸರ್ಚ್‌ನಲ್ಲಿ ಪ್ರಮುಖ ವಿಷಯವಾಗಿದೆ.


Click it and Unblock the Notifications








