Subscribe to Gizbot

ಕ್ರೋಮ್ ಬಳಕೆದಾರರಿಗೆ ಇನ್ನಿಲ್ಲ ಆಡ್‌ ಕಾಟ..!

Written By:

ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಕ್ರೊಮ್ ಬಳಕೆದಾರರಿಗೆ ತನ್ನದೇ ಆದ ಆಡ್ ಬ್ಲಾಕರ್ ವೊಂದನ್ನು ನೀಡಲು ಮುಂದಾಗಿದೆ. ಇದೇ ಜನವರಿ 23 ರಂದು ಬಿಡುಗಡೆಯಾಗಲಿರುವ ಕ್ರೋಮ್ 65ನಲ್ಲಿ ಬಿಲ್ಟ್ ಇನ್ ಆಡ್ ಬ್ಲಾಕರ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರು ಆಡ್ ಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಕ್ರೋಮ್ ಬಳಕೆದಾರರಿಗೆ ಇನ್ನಿಲ್ಲ ಆಡ್‌ ಕಾಟ..!

ಓದಿರಿ: ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು? ಪ್ರತಿಯೊಬ್ಬರು ತಿಳಿಯಲೇಬೇಕು!

ಈಗಾಗಲೇ ಅತೀ ಹೆಚ್ಚು ಮಂದಿ ಕ್ರೋಮ್ ಬಳಕೆದಾರರು ಆಡ್‌ ಬ್ಲಾಕರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕೆಲವು ದಿನಗಳ ಹಿಂದೆ ನಕಲಿ ಆಡ್‌ ಬ್ಲಾಕರ್ ಅನ್ನು ಬಳಕೆ ಮಾಡಿಕೊಂಡ ಮಿಲಿಯನ್‌ಗಟ್ಟಲೆ ಮಂದಿ ಸಾಕಷ್ಟು ತೊಂದರೆಯನ್ನು ಅನುಭವಿಸಿದರು ಎನ್ನಲಾಗಿದೆ.

ಇದರಿಂದಾಗಿ ತನ್ನ ಬಳಕೆದಾರರಿಗೆ ಹೆಚ್ಚಿನ ಸೆಫ್ಟಿಯನ್ನು ನೀಡುವ ಸಲುವಾಗಿ ತನ್ನದೇ ಆಡ್ ಬ್ಲಾಕರ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಕ್ರೋಮ್ ಬಳಕೆದಾರರಿಗೆ ಬ್ರೌಸಿಂಗ್ ಮತ್ತಷ್ಟು ಸಲುಭವಾಗಲಿದೆ ಮತ್ತು ಆಡ್ ಕಿರಿಕಿರಿ ತಪ್ಪಲಿದೆ.

ಕ್ರೋಮ್ ಬಳಕೆದಾರರಿಗೆ ಇನ್ನಿಲ್ಲ ಆಡ್‌ ಕಾಟ..!

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ಸದ್ಯ ಆನ್‌ಲೈನಿನಲ್ಲಿ ಆಡ್‌ ಗಳ ಅಬ್ಬರವೂ ಹೆಚ್ಚಾಗಿದ್ದು, ಇದನ್ನು ಕಂಟ್ರೋಲ್ ಮಾಡುವ ಸಲುವಾಗಿ ಕ್ರೋಮ್ ಈ ಕ್ರಮಕ್ಕೆ ಮುಂದಾಗಿ ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಆಡ್ ಬ್ಲಾಕ್ ಮಾಡುವ ಸಲುವಾಗಿ ಯಾವುದೇ ಎಕ್ಸ್‌ಟೆಷನ್‌ಗಳನ್ನು ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

English summary
Google to roll out native ad-blocking in Chrome browser. to know more visit kannada.gibot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot