Subscribe to Gizbot

ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು? ಪ್ರತಿಯೊಬ್ಬರು ತಿಳಿಯಲೇಬೇಕು!

Written By:

ವಾಟ್ಸ್‌ಆಪ್ ಬಳಕೆ ಮಾಡುವ ಪ್ರತಿಯೊಬ್ಬರು ತಿಳಿಯಲೇಬೇಕಾದ ವಿಷಯ ಇದು. ನಾವು ಸ್ನೇಹಿತರೊಂದಿಗೆ ಮಾಡುವ ಚಾಟ್‌ಗಳನ್ನು ಅಳಿಸುವುದು ಹೇಗೆ ಎಂಬುದನ್ನು ಎಲ್ಲರು ತಿಳಿದುಕೊಂಡಿದ್ದಾರೆ, ಆದರೆ ನಿರ್ದಿಷ್ಟವಾದ ಮೇಸೆಜ್ ಕ್ಲಿಯರ್ ಮಾಡುವುದು ಮತ್ತು ಚಾಟ್ ಹಿಸ್ಟರಿಯನ್ನು ಕ್ಲಿಯರ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು?

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ವಾಟ್ಸ್‌ಆಪ್ ಗ್ರೂಪ್ ಮೇಸೆಜ್‌ಗಳನ್ನು 'ಕ್ಲಿಯರ್ ಆಲ್' ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ಆದರೆ ಮೇಸೆಜ್‌ಗಳು, ಇಮೇಜ್‌ಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡದೆ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದು ಅಗತ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to save WhatsApp Status other than taking screenshots!! Kannada
ಹಂತ-01:

ಹಂತ-01:

ನಿಮಗೆ ಎಲ್ಲ ಚಾಟ್ ಹಿಸ್ಟರಿಯೂ ಬೇಡ ಎನ್ನುವುದಾದರೆ ಇದಕ್ಕಾಗಿ ನೀವು ವಾಟ್ಸ್‌ಆಪ್ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್ ಎಂಬಲ್ಲಿ ಹೋಗಿ, ಚಾಟ್ ಹಿಸ್ಟರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಇಲ್ಲಿ ನಿಮಗೆ ಕ್ಲಿಯರ್ ಅಥವಾ ಡಿಲೀಟ್ ಮಾಡಲು ಆಯ್ಕೆ ಕಾಣಿಸಿಕೊಳ್ಳಲಿದೆ.

ಹಂತ-02:

ಹಂತ-02:

ಈ ರೀತಿಯಲ್ಲಿ ಕ್ಲಿಯರ್ ಮಾಡುವ ಸಂದರ್ಭದಲ್ಲಿ ಪಾಪ್-ಅಪ್ ವಿಂಡೋ ತೆರೆದುಕೊಳ್ಳಲಿದ್ದು, ಅದರಲ್ಲಿ ಸ್ಟಾರ್ ಗುರುತು ಹಾಕಿರುವ ಮೆಸೇಜ್‌ಗಳನ್ನು ಡಿಲೀಟ್ ಮಾಡಲಾಗುವುದಿಲ್ಲ ಮತ್ತು ನಿಮ್ಮ ಮೊಬೈಲ್‌ನಲ್ಲಿರುವ ಮಿಡಿಯಾ ಫೈಲುಗಳನ್ನು ಡಿಲೀಟ್ ಮಾಡಲಾಗುವುದು ಎಂಬ ಎರಡು ಸಂದೇಶಗಳು ಬರಲಿದೆ.

ಹಂತ- 03:

ಹಂತ- 03:

ಇಲ್ಲಿ ನೀವು ಆ ಸಂದೇಶಗಳ ಮೇಲೆ ಇರುವ ಟಿಕ್‌ ಅನ್ನು ಸರಿಯಾಗಿ ಗಮನಿಸ ಬೇಕಾಗಿದೆ. ಮಿಡಿಯಾ ಫೈಲುಗಳನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಟಿಕ್ ಮಾಡಿದರೆ ನಿಮ್ಮ ಪೋಣಿನಲ್ಲಿರುವ ಫೋಟೋ, ವೀಡಿಯೋ ಫೈಲುಗಳು ಡಿಲೀಟ್ ಆಗಬಹುದು ಎಚ್ಚರವಹಿಸಿ. ಅದನ್ನು ಅನ್ ಟಿಕ್ ಮಾಡಿದಲ್ಲಿ ನಿಮ್ಮ ಮಿಡಿಯಾ ಫೈಲ್‌ಗಳು ಸೇವ್‌ ಆಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
how to clear whatsapp history. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot