Home
ಸುದ್ದಿಜಾಲ

ಆಂಡ್ರಾಯ್ಡ್ ಮೊಬೈಲ್ ಓಎಸ್‌ನಲ್ಲಿ 5 ಹೊಸ ಫೀಚರ್ಸ್‌ ಪರಿಚಯಿಸಿದ ಗೂಗಲ್‌!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್-ಚಾಲಿತ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಮಾದರಿಯ ಆಪ್ಡೇಟ್‌ ಅನ್ನು ಮಾಡಿದೆ. ಈ ಅಪ್ಡೇಟ್‌ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಐದು ಹೊಸ ಮಾದರಿಯ ಫಿಚರ್ಸ್‌ಗಳನ್ನ ಅಳವಡಿಸಲಾಗಿದೆ. ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಈ ಫೀಚರ್ಸ್‌ಗಳು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿವೆ ಎಂದು ಗೂಗಲ್‌ ಹೇಳಿದೆ.

ಗೂಗಲ್‌

ಹೌದು, ಗೂಗಲ್‌ ಕಂಪೆನಿ ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ ಚಾಲಿತ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ನ್ಯೂ ಆಪ್ಡೇಟ್‌ ಪಡೆದುಕೊಂಡಿರುವ ಆಂಡ್ರಾಯ್ಡ್‌ ಸಿಸ್ಟಂನಲ್ಲಿ ಐದು ರೀತಿಯ ಫೀಚರ್ಸ್‌ಗಳನ್ನ ಗೂಗಲ್‌ ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ಗಳನ್ನ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿವೆ. ಅಲ್ಲದೆ ಭೂಕಂಪನ ಎಚ್ಚರಿಕೆ ಸೇರಿದಂತೆ ತುರ್ತುಸೇವೆಯನ್ನು ಸಹ ಒದಗಿಸಬಲ್ಲ ಫಿಚರ್ಸ್‌ಗಳು ಇದರಲ್ಲಿ ಅಡಕವಾಗಿವೆ ಎನ್ನಲಾಗ್ತಿದೆ. ಹಾಗಾದ್ರೆ ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ನಲ್ಲಿ ಗೂಗಲ್‌ ತಂದಿರುವ ಹೊಸ ಆಪ್ಡೇಟ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Android Earthquake Alerts System

Android Earthquake Alerts System

ಗೂಗಲ್‌ ಪರಿಚಯಿಸಿರುವ ಫೀಚರ್ಸ್‌ಗಳಲ್ಲಿ Android Earthquake Alerts System ಫೀಚರ್ಸ್‌ ಕೂಡ ಒಂದಾಗಿದೆ. ಇದು ಜಗತ್ತಿನಾದ್ಯಂತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಭೂಕಂಪಗಳನ್ನು ಕಂಡುಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದು ಬಳಕೆದಾರರು ಹುಡುಕಾಟದಲ್ಲಿ ‘earthquake near me' ಅನ್ನು ಹುಡುಕುವಾಗ ವೇಗವಾಗಿ ಭೂಕಂಪದ ಮಾಹಿತಿಯನ್ನು ನೀಡುತ್ತದೆ. ಆಂಡ್ರಾಯ್ಡ್ 5.0 ಮತ್ತು ಹೆಚ್ಚಿನವುಗಳಲ್ಲಿ ಕಾರ್ಯನಿರ್ವಹಿಸುವ ಡಿವೈಸ್‌ಗಳಲ್ಲಿ ಇದು ಲಭ್ಯವಾಗಲಿದೆ.

Android Emergency Location Service

Android Emergency Location Service

Android Emergency Location Service ಅಥವಾ ELS ಈಗ 29 ದೇಶಗಳಲ್ಲಿ 800 ಮಿಲಿಯನ್ ಜನರಿಗೆ ಲಭ್ಯವಿದೆ ಎಂದು ಗೂಗಲ್ ಇಂದು ಪ್ರಕಟಿಸಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಸ್ಥಳೀಯ ತುರ್ತು ಸಂಖ್ಯೆಯನ್ನು ಡಯಲ್ ಮಾಡಿದಾಗ ಅವರ ಡಿವೈಸ್‌ ಭಾಷೆಯನ್ನು ಹಂಚಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡದಿದ್ದರೆ ತುರ್ತು ನಿರ್ವಾಹಕರಿಗೆ ಅನುವಾದಕನನ್ನು ಪಡೆಯಲು ಮತ್ತು ಸಹಾಯವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಗೂಗಲ್ ಪ್ಲೇ ಸೇವೆಗಳನ್ನು ಸ್ಥಾಪಿಸಿದ ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಹೆಚ್ಚಿನ ಡಿವೈಸ್‌ಗಳಲ್ಲಿ ಈ ಫೀಚರ್ಸ್‌ ಲಭ್ಯವಿದೆ.

Get more done in the car

Get more done in the car

ಗೂಗಲ್ ಆಂಡ್ರಾಯ್ಡ್ ಆಟೋಗೆ ಹೊಸ ಮಾದರಿಯ ಆಪ್ಡೇಟ್‌ ಅನ್ನು ಹೊರತಂದಿದೆ. ಇದು ಬಳಕೆದಾರರು ತಮ್ಮ ಫೋನ್‌ಗಳನ್ನು ನೋಡದೆ ತಮ್ಮ ದಿನದ ಮೇಲೆ ಉಳಿಯಲು ಅನುವು ಮಾಡಿಕೊಡುತ್ತದೆ. ಹೊಸದಾಗಿ ಹೊರತಂದಿರುವ ಆಪ್ಡೇಟ್‌ ಹೊಸ ಕ್ಯಾಲೆಂಡರ್ ಅಪ್ಲಿಕೇಶನ್‌ನೊಂದಿಗೆ ಬರಲಿದ್ದು. ಬಳಕೆದಾರರು ತಮ್ಮ ಕಾರಿನ ಡಿಸ್‌ಪ್ಲೇಯಲ್ಲಿ ಅವರ ದೈನಂದಿನ ವೇಳಾಪಟ್ಟಿಯನ್ನು ತ್ವರಿತವಾಗಿ ನೀಡುತ್ತದೆ ಎಂದು ಗೂಗಲ್ ಹೇಳುತ್ತದೆ. ಕ್ಯಾಲೆಂಡರ್ ನಮೂದಿನಿಂದ ಬಳಕೆದಾರರು ನಿರ್ದಿಷ್ಟ ಸ್ಥಳಗಳಿಗೆ ನಿರ್ದೇಶನಗಳನ್ನು ಪಡೆಯಬಹುದಾಗಿದೆ.

Bedtime tab in Clock

Bedtime tab in Clock

ಗೂಗಲ್ ಪರಿಚಯಿಸಿರುವ ಫೀಚರ್ಸ್‌ಗಳಲ್ಲಿ Bedtime tab in Clock ಸಹ ಒಂದಾಗಿದೆ. ಇದು ಬಳಕೆದಾರರಿಗೆ ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ. ರಾತ್ರಿಯ ಸಮಯದಲ್ಲಿ ಅವರ ಡಿಸ್‌ಪ್ಲೇ ಟೈಂ ಅನ್ನು ಟ್ರ್ಯಾಕ್ ಮಾಡಲು ಮತ್ತು ಸ್ಪಾಟಿಫೈ ಮತ್ತು ಯೂಟ್ಯೂಬ್ ಮ್ಯೂಸಿಕ್‌ನಿಂದ ನಿದ್ರಿಸಲು ಸಹಾಯ ಮಾಡುತ್ತದೆ. ಇದು ಆಂಡ್ರಾಯ್ಡ್ 6.0 ಮತ್ತು ಅದಕ್ಕಿಂತ ಹೆಚ್ಚಿನದನ್ನು ಚಾಲನೆ ಮಾಡುವ ಡಿವೈಸ್‌ಗಳ ಗಡಿಯಾರ ಅಪ್ಲಿಕೇಶನ್‌ನಲ್ಲಿನ ಬೆಡ್‌ಟೈಮ್ ಟ್ಯಾಬ್ ಈಗ ಲಭ್ಯವಿದೆ.ಇದಲ್ಲದೆ ಬಳಕೆದಾರರು ತಮ್ಮ ಸೆಟ್ಟಿಂಗ್‌ಗಳಲ್ಲಿ ಬೆಡ್‌ಟೈಮ್ ಮೋಡ್ ಅನ್ನು ಆನ್ ಮಾಡಬಹುದು ಅಥವಾ ಅದನ್ನು ಕ್ಲಾಕ್ ಅಪ್ಲಿಕೇಶನ್‌ನಿಂದ ನೇರವಾಗಿ ನಿಗದಿಪಡಿಸಬಹುದು ಎಂದು ಗೂಗಲ್ ಹೇಳುತ್ತದೆ.

Lookout app

Lookout app

ಇನ್ನು ಗೂಗಲ್ ತನ್ನ ಲುಕ್‌ ಔಟ್ ಅಪ್ಲಿಕೇಶನ್‌ನಲ್ಲಿಯೂ ಸಹ ಹೊಸ ಆಪ್ಡೇಟ್‌ ಅನ್ನು ಹೊರತಂದಿದೆ. ಇದು ಬಳಕೆದಾರರಿಗೆ long-form documentsಗಳನ್ನು ಓದಬಲ್ಲ ಪಠ್ಯಕ್ಕೆ ಸ್ಕ್ಯಾನ್ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಆಹಾರ ಲೇಬಲ್‌ಗಳಿಂದ ಉತ್ಪನ್ನಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ಡಿಸ್‌ಪ್ಲೇ ಓದುಗರೊಂದಿಗೆ ಇನ್ನಷ್ಟು ಹೊಂದಿಕೊಳ್ಳುತ್ತದೆ. ಆಂಡ್ರಾಯ್ಡ್ 6 ಮತ್ತು ನಂತರದ 2GBಗಿಂತ ಹೆಚ್ಚಿನ RAM ಹೊಂದಿರುವ ಎಲ್ಲಾ ಡಿವೈಸ್‌ಗಳಿಗೆ ಈ ನವೀಕರಣ ಲಭ್ಯವಿದೆ.

Best Mobiles in India

English summary
Google today rolled out five new features on its Android mobile OS. These features include everything from earthquake detection to updates to Android Auto. Take a peek.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+