ಗೂಗಲ್ ಸೋಲಿ: ಇನ್ನು ನಡೆಯಲಿ ಬೆರಳುಗಳ ಜಾದು

By Shwetha
|

ತಂತ್ರಜ್ಞಾನ ಲೋಕದಲ್ಲಿ ನಾವು ಅದ್ವಿತೀಯ ಸಾಧನೆಯನ್ನು ಸಾಧಿಸುತ್ತಿದ್ದೇವೆ. ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿರುವ ಸಂಶೋಧನೆಗಳ ಹೊಸ ಹೊಸ ಸಂಗ್ರಹಕ್ಕೆ ನಾವು ತಲೆಬಾಗಲೇಬೇಕು. ರೊಬೋಟ್ ಚಿರತೆ, ಗೂಗಲ್ ಗ್ಲಾಸ್, ಡ್ರೈವರ್‌ಲೆಸ್ ಕಾರು, ಹೀಗೆ ನಾವು ಆಧುನಿಕ ಜಗತ್ತಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದೇವೆ ಎಂದೇ ಹೇಳಬಹುದು.

 ಗೂಗಲ್ ಸೋಲಿ: ಇನ್ನು ನಡೆಯಲಿ ಬೆರಳುಗಳ ಜಾದು

ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಗೂಗಲ್ ಸೋಲಿ ಎಂಬ ಡಿವೈಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ರಾಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಕೈಗಳ ಬೆರಳಿನ ಚಲನೆಯನ್ನು ಪ್ರತಿ ನಿಮಿಷಕ್ಕೆ 10,000 ಫ್ರೇಮ್‌ಗಳಂತೆ ಸೆರೆಹಿಡಿಯುತ್ತದೆ. ಇಂತಹ ಪ್ರಯೋಗ ಹಿಂದೆಂದೂ ಮಾಡಿಲ್ಲ ಎಂದೇ ಹೇಳಬಹುದು. ಈ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ಡಿವೈಸ್ ಅನ್ನು ಸ್ಪರ್ಶಿಸದೆಯೇ ಆಪರೇಟ್ ಮಾಡಬಹುದಾಗಿದೆ.

ಓದಿರಿ: ಫೇಸ್‌ಬುಕ್ ಒಡೆತನದಲ್ಲಿರುವ ಟಾಪ್ ಕಂಪೆನಿಗಳು

ಸಣ್ಣ ಗಾತ್ರದ ಕಂಪ್ಯೂಟರ್ ಚಿಪ್ ನಿಮ್ಮ ಕೈಗಳ ಚಲನೆಯನ್ನು ವರ್ಚುವಲ್‌ನಂತೆ ಬದಲಾಯಿಸಿ ನೀವು ಸ್ಪರ್ಶಿಸಿ ಮಾಡುವ ಕೆಲಸವನ್ನು ಹಾಗೆಯೇ ಮಾಡಲು ಸಹಕಾರಿಯಾಗಿದೆ. ಸ್ಮಾರ್ಟ್‌ವಾಚ್ ಅಥವಾ ಸ್ಮಾರ್ಟ್‌ಫೋನ್ ಪರದೆಯನ್ನು ಸ್ಪರ್ಶಿಸದಯೇ ಅದನ್ನು ನಿಯಂತ್ರಿಸುವುದು ಮೊದಲಾದ ಕೆಲಸವನ್ನು ಮಾಡಲು ಇದು ಸಹಕಾರಿ ಎಂದೆನಿಸಿದೆ.

Best Mobiles in India

English summary
Google's New Project Is So Insanely Advanced It Will Blow You Away.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X