ನರೇಂದ್ರ ಮೋದಿ ಚಿತ್ರ ಬಳಸಿ ಗೂಗಲ್ ಮಾಡಿದ ತಪ್ಪು

By Shwetha
|

ಜವಹರಲಾಲ್ ನೆಹರೂ ಅವರು ಭಾರತದ ಪ್ರಥಮ ಪ್ರಧಾನಿ ಮಂತ್ರಿಗಳಾಗಿದ್ದರು, ಆದರೆ ಗೂಗಲ್ ಈ ರೀತಿ ಆಲೋಚಿಸುತ್ತಿಲ್ಲ. ಸರಳ ಸರ್ಚ್ ಆದ "ಭಾರತದ ಪ್ರಥಮ ಪ್ರಧಾನ ಮಂತ್ರಿ" ಎಂಬಲ್ಲಿ ನೆಹರೂ ಅವರ ಹೆಸರನ್ನು ತೋರಿಸಿದರೂ ಚಿತ್ರ ಮಾತ್ರ ನರೇಂದ್ರ ಮೋದಿಯವರದ್ದು ತೋರಿಸಿದೆ.

ಓದಿರಿ:ಮೋದಿ ಡಿಜಿಟಲ್ ಇಂಡಿಯಾ: ಭವ್ಯ ಭಾರತ ಇಲ್ಲಿಂದ ಆರಂಭ

ಇನ್ನು ಗೂಗಲ್ ಇಮೇಜಸ್‌ಗಳಲ್ಲಿ ಒಂದೇ ಸರ್ಚ್‌ನಲ್ಲಿ ಇಮೇಜಸ್‌ಗಳ ಪ್ರಥಮ ಎರಡು ಸಾಲುಗಳಲ್ಲಿ 10 ಸ್ಪಾಟ್‌ಗಳಲ್ಲಿ ಮೋದಿಯ ಫೋಟೋವನ್ನು ಮೂರೆಡೆಗಳಲ್ಲಿ ತೋರಿಸುತ್ತಿದೆ. ಇನ್ನು ಇದೇ ಸರ್ಚ್‌ನ "ಪ್ರೆಸಿಡೆಂಟ್" ಆಪ್ಶನ್ ಪಟ್ಟಿಯಲ್ಲಿ ಅವರು ಸಹ ಇದ್ದಾರೆ. ಅದಾಗ್ಯೂ, ಈ ತಪ್ಪನ್ನು ಸರಿಪಡಿಸಲಾಗಿದೆ.

ಓದಿರಿ: ಮಂಗಳನಲ್ಲಿ ಬದುಕಲು ಹೀಗಿದ್ದರೆ ಹೇಗಿರುತ್ತದೆ?

ತಪ್ಪು ಸರ್ಚ್ ಕ್ವರಿಯಲ್ಲಿ ವಿಶ್ವದ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಇಂಜಿನ್ ಮೋದಿಯ ಫೋಟೋವನ್ನು ತೋರಿಸುತ್ತಿರುವುದು ಇದು ಮೊದಲಲ್ಲ. ಭಾರತದಲ್ಲಿರು ಟಾಪ್ 10 ಕ್ರಿಮಿನಲ್ಸ್ ಅಡಿಯಲ್ಲೂ ಮೋದಿಯವರ ಫೋಟೋ ಗೋಚರಿಸಿತ್ತು ಮತ್ತು ಇದಕ್ಕಾಗಿ ಗೂಗಲ್ ಕ್ಷಮಾಪಣೆಯನ್ನು ಕೇಳಿತ್ತು. ಬ್ರಿಟೀಶ್ ಡೈಲಿಯು ತಪ್ಪಾದ ಚಿತ್ರವನ್ನು ಮೆಟಾಡೇಟ್ ಮಾಡಿದ್ದರಿಂದಾಗಿ ಈ ದೋಷ ಸಂಭವಿಸಿತ್ತು.

ಮೋದಿ ಬರಹ

ಮೋದಿ ಬರಹ

ಫೇಸ್‌ಬುಕ್ ಮುಖ್ಯಕಚೇರಿ ವಾಲ್‌ನಲ್ಲಿ ನರೇಂದ್ರ ಮೋದಿಯವರು ಲಗತ್ತಿಸಿರುವ ಸಂದೇಶದ ನೋಟ

ಕಣ್ಣಾಲಿಗಳು ತುಂಬಿ ಬಂದವು

ಕಣ್ಣಾಲಿಗಳು ತುಂಬಿ ಬಂದವು

ಜುಕರ್‌ಬರ್ಗ್ ಮೋದಿಯವರಲ್ಲಿ ತಮ್ಮ ತಾಯಿಯ ಬಗ್ಗೆ ಮಾತನಾಡಲು ಕೇಳಿದಾಗ ಅವರ ಕಣ್ಣಾಲಿಗಳು ತುಂಬಿ ಬಂದವು. ಭಾರತದಾದ್ಯಂತ ಮಿಲಿಯಗಟ್ಟಲೆ ಹೆತ್ತವರು ತಮ್ಮ ಮಕ್ಕಳಿಗಾಗಿ ಪ್ರತಿಯೊಂದನ್ನು ತ್ಯಾಗ ಮಾಡಿದ್ದಾರೆ ಎಂದರು.

ಮಹಿಳಾ ಸಬಲೀಕರಣ

ಮಹಿಳಾ ಸಬಲೀಕರಣ

100 ಶೇಕಡಾ ಪಾಲುದಾರಿಕೆಯನ್ನು ಮಹಿಳೆಗೆ ನೀಡಲಿದ್ದು ಸಮಾನ ಹಕ್ಕುಗಳನ್ನು ಆಕೆಗೆ ನೀಡಲಾಗುತ್ತಿದೆ. ಪೋಲೀಸ್ ವಿಭಾಗದಲ್ಲಿ 30 ಶೇಕಡಾದಷ್ಟು ಉದ್ಯೋಗಗಳನ್ನು ಮಹಿಳೆಯರಿಗೆ ನೇಮಕಾತಿ ಮಾಡಲಾಗಿದೆ. ಇನ್ನು ತೀರ್ಮಾನ ಕೈಗೊಳ್ಳುವಂತಹ ಪ್ರಮುಖ ವಿಚಾರಗಳಲ್ಲಿಯೂ ಆಕೆಯ ಪಾತ್ರ ಹಿರಿದಾಗಿದೆ.

ಬ್ಯಾಂಕ್ ಸೌಲಭ್ಯ

ಬ್ಯಾಂಕ್ ಸೌಲಭ್ಯ

ಭಾರತದ ಅಭಿವೃದ್ಧಿಯಲ್ಲಿ ಕ್ಷಿಪ್ರ ಪ್ರಗತಿಯನ್ನು ಮಾಡಲಾಗದಿದ್ದರೂ ನಿಧಾನಗತಿಯ ಪ್ರಗತಿಯನ್ನು ಭಾರತದ ಅಭ್ಯುದಯದಲ್ಲಿ ನಾವು ಮಾಡುತ್ತಿದ್ದೇವೆ.ಇನ್ನು ಬಡವರು ಅನುಕೂಲಕ್ಕೆ ತಕ್ಕಂತೆಯೇ ಬ್ಯಾಂಕ್ ಸೌಲಭ್ಯಗಳಲ್ಲಿ ಪ್ರಗತಿಯನ್ನು ಮಾಡಲಾಗುತ್ತಿದೆ. ನನ್ನ ಸರಕಾರವು 100 ದಿನಗಳಲ್ಲಿ 180 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ರಚಿಸಿದೆ ಎಂದವರು ನುಡಿದರು.

ಭಾರತವು ಸ್ವರ್ಗ

ಭಾರತವು ಸ್ವರ್ಗ

ಎಲ್ಲಾ ತಯಾರಕರಿಗೆ ಭಾರತವು ಸ್ವರ್ಗ ಎಂದೆನಿಸಿದೆ. ಆಧುನಿಕ ತಂತ್ರಜ್ಞಾನವನ್ನು ಭಾರತದ ವ್ಯವಹಾರದಲ್ಲಿ ಅಳವಡಿಸಿರುವುದರಿಂದ ಎಲ್ಲಾ ಕ್ಷೇತ್ರದ ಸಾಧನೆಗಳಿಗೂ ಭಾರತ ಅತ್ಯುತ್ತಮ ವೇದಿಕೆ ಎಂದೆನಿಸಿದೆ.

ಅತ್ಯುತ್ತಮ ಸಂಪರ್ಕ

ಅತ್ಯುತ್ತಮ ಸಂಪರ್ಕ

ಸಾಮಾಜಿಕ ಮಾಧ್ಯಮದಲ್ಲಿ ಭಾರತವು ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಂಡಿದ್ದು ನಮ್ಮನ್ನು ಹೆಚ್ಚು ಸಕ್ರಿಯಗೊಳಿಸಲು ಇದು ನೆರವಾಗಿದೆ.

ಸಂವಹನದ ಕೊರತೆ

ಸಂವಹನದ ಕೊರತೆ

ಸಾಮಾಜಿಕ ಮಾಧ್ಯಮ ಎಂದರೆ ದೈನಂದಿನ ಮತ ಚಲಾವಣೆ ಎಂದಾಗಿದೆ. ಆದ್ದರಿಂದ ಸರಕಾರದ ನಡುವೆ ಯಾವುದೇ ಸಂವಹನದ ಕೊರತೆ ಇದರಿಂದ ಉಂಟಾಗುತ್ತಿಲ್ಲ. ಪ್ರತೀ ಐದು ನಿಮಿಷಗಳಿಗೊಮ್ಮೆ ಸರಕಾರಕ್ಕೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತಿದೆ.

ಅತ್ಯುತ್ತಮ ಪ್ರಗತಿ

ಅತ್ಯುತ್ತಮ ಪ್ರಗತಿ

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು $20 ಟ್ರಿಲಿಯನ್‌ಗೆ ಏರಿಸುವ ಮಹತ್ವಾಕಾಂಕ್ಷೆಯಲ್ಲಿದ್ದು ಉದ್ಯೋಗ ಸೃಷ್ಟಿ ಮತ್ತು ಕೃಷಿಯಲ್ಲಿ ಅತ್ಯುತ್ತಮ ಪ್ರಗತಿಯ ಮೂಲಕ ಇದು ಸಾಧ್ಯ ಎಂಬುದಾಗಿ ತಿಳಿಸಿದ್ದಾರೆ.

ಅಂತರ್ಜಾಲದ ಹೆಚ್ಚು ಸಂಪರ್ಕ

ಅಂತರ್ಜಾಲದ ಹೆಚ್ಚು ಸಂಪರ್ಕ

ಇನ್ನು ಭಾರತೀಯರೂ ಅಂತರ್ಜಾಲದ ಹೆಚ್ಚು ಸಂಪರ್ಕದಲ್ಲಿದ್ದು ಉದ್ಯೋಗ ಪಡೆದುಕೊಳ್ಳಲು ಮತ್ತು ಬಡತನ ನಿರ್ಮೂಲನೆಗೆ ಇದು ಪೂರಕವಾಗಿದೆ. ಇನ್ನು ಜುಕರ್‌ಬರ್ಗ್ ಮೋದಿಯವರ ಡಿಜಿಟಲ್ ಇಂಡಿಯಾ ಬದ್ಧತೆಗೆ ಅವರನ್ನು ಅಭಿನಂದಿಸಿದ್ದಾರೆ.

ಬೆಂಬಲ

ಬೆಂಬಲ

ತಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರವನ್ನು ತಿರಂಗದ ಬಣ್ಣಕ್ಕೆ ಪರಿವರ್ತಿಸುವುದರ ಮೂಲಕ ಮಾರ್ಕ್ ಜುಕರ್‌ಬರ್ಗ್ ಡಿಜಿಟಲ್ ಇಂಡಿಯಾಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

Best Mobiles in India

English summary
A simple search for ‘India’s first prime minister’ showed the name of Jawaharlal Nehru but showed a picture of India’s current premier, Narendra Modi, instead.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X